ಪ್ರಧಾನಿ ಮೋದಿ ಜನ್ಮ ದಿನಾಚರಣೆ; ಆತ್ರಾಡಿಯಲ್ಲಿ ಆಟೋ ಚಾಲಕ ಗೋಪಾಲ ಕೃಷ್ಣ ಆಚಾರ್ಯರಿಗೆ ಸನ್ಮಾನ
ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನವಾದ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 2 ದಿನಾಂಕದ ವರೆಗೆ ಕಳೆದ 5 ವರ್ಷಗಳಿಂದ ತನ್ನ ಆಟೋ ರಿಕ್ಷಾಕ್ಕೆ ಮೋದಿಜಿಯವರ ಬ್ಯಾನರ್ ನ್ನು ಕಟ್ಟಿ ಕೊಂಡು ಬಾಡಿಗೆ ಮಾಡುತ್ತಿರುವ ಆತ್ರಾಡಿಯ ಆಟೋ ಚಾಲಕ ಜನ ಸಂಘ ಮೂಲದಿಂದ ಪಕ್ಷದ ಕಾರ್ಯಕರ್ತರಾಗಿರುವ ಗೋಪಾಲ ಕೃಷ್ಣ ಆಚಾರ್ಯರನ್ನು ಆತ್ರಾಡಿ ಬಿಜೆಪಿ ಕಾರ್ಯಕರ್ತರು ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಕುತ್ಯಾರು ನವೀನ್ ಶೆಟ್ಟಿ ಯವರ ನೇತೃತ್ವ ದಲ್ಲಿ ಶಾಲು ಹೊದಿಸಿ ಸನ್ಮಾನ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್ ಆತ್ರಾಡಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ಪೂಜಾರಿ, ಪಂಚಾಯತ್ ಅಧ್ಯಕ್ಷರು ಹರೀಶ್ ಶೆಟ್ಟಿ, ಪಂಚಾಯತ್ ಉಪಾಧ್ಯಕ್ಷೆ ಶಾರದಾ ಶೆಟ್ಟಿಗಾರ್, ಮಾಜಿ ಪಂಚಾಯತ್ ಅಧ್ಯಕ್ಷರಾದ ರತ್ನಾಕರ್ ಶೆಟ್ಟಿ, ಪ್ರಮೀಳಾ ಶೆಟ್ಟಿಗಾರ್, ಸದಸ್ಯರಾದ ಗಂಗಾಧರ್ ಪ್ರಭು ಜಡ್ಡು, ಹರಿಣಿ ಶೆಟ್ಟಿ, ಅಯ್ಯಪ್ಪ ಸೇವಾ ಸಮಿತಿಯ ಅಧ್ಯಕ್ಷರು ಸಾಧು ಪೂಜಾರಿ, ಚೆನ್ನಿ ಬೆಟ್ಟು ನಾಗ ಬ್ರಹ್ಮ ಸ್ಥಾನದ ಮೊಕ್ತೇಸರರಾದ ವಸಂತ ಶೆಟ್ಟಿ ಚೆನ್ನಿ ಬೆಟ್ಟು, ಬಾಲ ಕೃಷ್ಣ ಹೆಗ್ಡೆ ಬೀರ್ಬೇಟ್ಟು, ಮುರಳೀಧರ ಹಾಲoಬಿ, ದೇವೇಂದ್ರ ಎ ಕಾಮತ್, ಸದಾಶಿವ ನಾಯಕ್, ಹರೀಶ್ ಮೆಡಿಕಲ್, ದೇವದಾಸ್ ನಾಯಕ್, ದೇವೇಂದ್ರ ನಾಯಕ್ ಮದಗ, ಶ್ರೀಧರ್ ಶೆಟ್ಟಿಗಾರ್, ಉಮೇಶ್ ಆಚಾರ್ಯ, ಜೈ ಹನುಮಾನ್ ಸಂಘದ ಅಧ್ಯಕ್ಷ ಉದಯ ನಾಯ್ಕ್, ಸತೀಶ್ ನಾಯ್ಕ್, ಪುನೀತ್ ಪರೀಕ, ನವೀನ್ ಪೂಜಾರಿ ಪರೀಕ, ರಮೇಶ್ ಹೆಗ್ಡೆ, ಹರಿ ಮಾಮ್,ಆಟೋ ಚಾಲಕ ರಾದ ಕಮಲಾಕ್ಷ ಕಾಮತ್, ಗುರುದತ್ ಮಲ್ಯ ಮದಗ,ಗೋಪಾಲ್ ನಾಯಕ್ ಆತ್ರಾಡಿ ಮುಂತಾದವರು ಹಾಜರಿದ್ದರು.

