ದುಬೈನಲ್ಲಿ ಮೃತಪಟ್ಟ ಉಪ್ಪಿನಂಗಡಿಯ ಪ್ರಶಾಂತ್ ಪೂಜಾರಿ; ಮೃತದೇಹ ತ್ವರಿತವಾಗಿ ತಾಯ್ನಾಡಿಗೆ ರವಾನಿಸಲು ಸಹಕರಿಸಿದ ಸಮಾಜಸೇವಕ ಸಮದ್ ಬಿರಾಲಿ ತಂಡ

ದುಬೈನಲ್ಲಿ ಮೃತಪಟ್ಟ ಉಪ್ಪಿನಂಗಡಿಯ ಪ್ರಶಾಂತ್ ಪೂಜಾರಿ; ಮೃತದೇಹ ತ್ವರಿತವಾಗಿ ತಾಯ್ನಾಡಿಗೆ ರವಾನಿಸಲು ಸಹಕರಿಸಿದ ಸಮಾಜಸೇವಕ ಸಮದ್ ಬಿರಾಲಿ ತಂಡ

ದುಬೈ: ಉಪ್ಪಿನಂಗಡಿ ಮೂಲದ ವ್ಯಕ್ತಿಯೋರ್ವ ದುಬೈನಲ್ಲಿ ಅಸಹಜವಾಗಿ ಸಾವನ್ನಪ್ಪಿದ್ದು, ಅವರ ಮೃತದೇಹವನ್ನು ತ್ವರಿತವಾಗಿ ಶುಕ್ರವಾರ ತಾಯ್ನಾಡಿಗೆ ಕಳುಹಿಸುವ ಮೂಲಕ ಸಮಾಜ ಸೇವಕ ಸಮದ್ ಬಿರಾಲಿ ಹಾಗು ಅವರ ತಂಡ ಮಾನವೀಯತೆ ಮೆರೆದಿದೆ.

ಉಪ್ಪಿನಂಗಡಿ ಸಮೀಪದ ನೀರಬೈಲು ನಿವಾಸಿ ಪ್ರಶಾಂತ್ ಪೂಜಾರಿ(ತಿಲಕಾನಂದ ಪೂಜಾರಿ) ಅವರು ಇತ್ತೀಚೆಗೆ ದುಬೈನಲ್ಲಿ ಅಸಹಜವಾಗಿ ಮೃತಪಟ್ಟಿದ್ದರು. ಮೃತದೇಹವನ್ನು ತಾಯ್ನಾಡಿಗೆ ಕಳುಹಿಸಲು ಕಾನೂನಿನ ತೊಡಕುಂಟಾದ ಕಾರಣ ಅವರ ಮೃತದೇಹವನ್ನು ದುಬೈನ ಆಸ್ಪತ್ರೆಯೊಂದರ ಶವಾಗಾರದಲ್ಲಿ ಇಡಲಾಗಿತ್ತು.

ಈ ವೇಳೆ ಸಾಮಾಜಿಕ ಕಾರ್ಯಕರ್ತ, ಕೆಸಿಎಫ್ ಯುಎಇ ಮುಖಂಡ ಉಚ್ಚಿಲ ಮೂಲದ ಸಾಮಾಜಿಕ ಕಾರ್ಯಕರ್ತ ಸಮದ್ ಬಿರಾಲಿ ಹಾಗು ಅವರ ತಂಡ ತ್ವರಿತವಾಗಿ ಬೇಕಾದ ಎಲ್ಲಾ ಅಗತ್ಯ ದಾಖಲೆಗಳನ್ನು ಮೃತರ ಸಂಬಂಧಿಕರಿಂದ ಸಂಗ್ರಹಿಸಿ, ಅದನ್ನು ದುಬೈಯ ಪೊಲೀಸ್ ಹಾಗು ಸಂಬಂಧಿತ ಅಧಿಕಾರಿಗಳಿಗೆ ನೀಡಿ, ಶುಕ್ರವಾರ ಮೃತದೇಹವನ್ನು ಮಂಗಳೂರಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದೆ.

ಸಮದ್ ಬಿರಾಲಿ ಅವರು ಯುಎಇ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್(ಬಿಸಿಸಿಐ) ಅಧ್ಯಕ್ಷ ಹಿದಾಯತ್ ಅಡ್ಡೂರು, ಹಕೀಂ ತುರ್ಕಳಿಕೆ ಅವರ ಸಹಕಾರ ಪಡೆದು, ಮೃತ ಪ್ರಶಾಂತ್ ಪೂಜಾರಿ ಅವರ ಎಲ್ಲ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ, ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ, ಮೃತದೇಹವನ್ನು ತಾಯ್ನಾಡಿಗೆ ರವಾನಿಸಿದ್ದಾರೆ. 

ಶ್ಲಾಘನೆ: ತ್ವರಿತವಾಗಿ ಮೃತದೇಹವನ್ನು ತಾಯ್ನಾಡಿಗೆ ಸಾಗಿಸುವಲ್ಲಿ ಸಮದ್ ಬಿರಾಲಿ ಅವರ ಶ್ರಮ, ಮಾನವೀಯ ಕಳಕಳಿಯನ್ನು ಯುಎಇಯ ಹಲವು ಸಂಘಟನೆಯವರು, ಸರ್ವ ಧರ್ಮದ ನೇತಾರರು ಶ್ಲಾಘಿಸಿದ್ದಾರೆ.

Ads on article

Advertise in articles 1

advertising articles 2

Advertise under the article