'ಉಡುಪಿ ಉಚ್ಚಿಲ ದಸರಾ'ಕ್ಕೆ ಮೆರುಗು ತಂದ 'ಛತ್ರಪತಿ ಶಿವಾಜಿ'; ನಾಟಕಕ್ಕೆ ಕಿಕ್ಕಿರಿದ ಜನ!

'ಉಡುಪಿ ಉಚ್ಚಿಲ ದಸರಾ'ಕ್ಕೆ ಮೆರುಗು ತಂದ 'ಛತ್ರಪತಿ ಶಿವಾಜಿ'; ನಾಟಕಕ್ಕೆ ಕಿಕ್ಕಿರಿದ ಜನ!


ಫೋಟೋ: ಸಚಿನ್ ಉಚ್ಚಿಲ  

ಉಚ್ಚಿಲ: ಇಲ್ಲಿನ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ 'ಉಡುಪಿ ಉಚ್ಚಿಲ ದಸರಾ'ದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗುರುವಾರ ದೇವಸ್ಥಾನದ ಮುಂಭಾಗದಲ್ಲಿ ಹಾಕಿರುವ ವೇದಿಕೆಯಲ್ಲಿ ಪ್ರದರ್ಶನಗೊಂಡ ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ಐತಿಹಾಸಿಕ ನಾಟಕ 'ಛತ್ರಪತಿ ಶಿವಾಜಿ' ಪ್ರೇಕ್ಷಕರ ಮನಗೆದ್ದಿದೆ.

ಶಿವಾಜಿ ಮಹಾರಾಜರ ಕುರಿತ ಈ ನಾಟಕ ತುಳು ರಂಗ ಭೂಮಿಯಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿದ್ದು, ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನಕ್ಕೆ ಜನ ಭೇಷ್ ಎಂದಿದ್ದಾರೆ.

ಶಿವಾಜಿ ಮಹಾರಾಜರ ಇಡೀ ಜೀವನವನ್ನು ಕಟ್ಟಿಕೊಟ್ಟ ಈ ನಾಟಕದಲ್ಲಿ ಶಿವಾಜಿ ಪಟ್ಟಾಭಿಷೇಕ ನಡೆಯುವ ಸಂದರ್ಭವನ್ನು ಮನಮೋಹಕವಾಗಿ ಪ್ರಸ್ತುತ ಪಡಿಸಲಾಗಿದ್ದು, ಕೆಲವೊಂದು ದೃಶ್ಯಗಳು ನೋಡುಗರ ಮೈರೋಮಾಂಚನ ಗೊಳಿಸುತ್ತೆ. ಪ್ರತಿಯೊಂದು ದೃಶ್ಯಗಳು, ಪ್ರತಿಯೊಬ್ಬ ಕಲಾವಿದರು ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಕಲಾವಿದರ ಅದ್ಭುತ ನಟನೆ, ವಿನ್ಯಾಸ, ಬೆಳಕು, ಹಿನ್ನೆಲೆ ಸಂಗೀತ ಎಲ್ಲವೂ ನಾಟಕಕ್ಕೆ ಮತ್ತಷ್ಟು ಜೀವ ತುಂಬಿದೆ. 

'ಛತ್ರಪತಿ ಶಿವಾಜಿ' ಆರಂಭದಿಂದ ಕೊನೆಯ ವರಗೆ ಜನರನ್ನು ಅತ್ತಿತ್ತ ಕದಡದಂತೆ ಮಾಡಿದ್ದು, ನೋಡಿದ ಜನ ಸಂತಸದ ಜೊತೆ ರೋಮಾಂಚನವನ್ನು ವ್ಯಕ್ತಪಡಿಸಿದರು.

ದಸರಾ ಕಾರ್ಯಕ್ರಮದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ನೀಡಿದ 'ಛತ್ರಪತಿ ಶಿವಾಜಿ' ನಾಟಕದ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರನ್ನು ನಾಟಕದ ಕೊನೆಯಲ್ಲಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಬೆಳ್ಳಂಪಳ್ಳಿ, ದಸರಾ ಉತ್ಸವ ಸಮಿತಿ ಅಧ್ಯಕ್ಷ ವಿನಯ್ ಕರ್ಕೇರ, ದೇವಳದ ಪ್ರಧಾನ ವ್ಯವಸ್ಥಾಪಕ ಸತೀಶ್ ಅಮೀನ್‌ ಪಡುಕರೆ, ದಿನೇಶ್ ಎರ್ಮಾಳ್, ಸುರೇಶ್, ಸತೀಶ್ ಮತ್ತಿತರರು ಸನ್ಮಾನಿಸಿ ಗೌರವಿಸಿದರು.

Ads on article

Advertise in articles 1

advertising articles 2

Advertise under the article