ದುಬೈ; ಅದ್ದೂರಿಯಾಗಿ ಯಶಸ್ಸು ಕಂಡ 'ದುಬೈ ಗಡಿನಾಡ ಉತ್ಸವ-2025'; ಹಲವು ಸಾಧಕ ಗಣ್ಯರಿಗೆ ಸನ್ಮಾನ
ದುಬೈ: ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಮತ್ತು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರಕಾರ ಜಂಟಿಯಾಗಿ ಆಯೋಜಿಸಿದ್ದ ನಾಲ್ಕನೇ ವರ್ಷದ "ದುಬೈ ಗಡಿನಾಡ ಉತ್ಸವ-2025" ಕಾರ್ಯಕ್ರಮವು ನಗರದ ಔದ್ ಮೇಥಾದ ಗ್ಲೆಂಡೇಲ ಅಂತಾರಾಷ್ಟ್ರೀಯ ಶಾಲೆಯ ಸಭಾಂಗಣದಲ್ಲಿ ಶನಿವಾರ ಸಂಜೆ ನಾಲ್ಕರಿಂದ ರಾತ್ರಿ ಹನ್ನೊಂದರ ವರೆಗೆ ಅದ್ದೂರಿಯಾಗಿ ನಡೆಯಿತು.
ಕರ್ನಾಟಕ ಜಾನಪದ ಪರಿಷತ್ ಮಂಗಳೂರಿನ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಕೋಡಿಯಲ್ ಬೈಲ್ ಅವರು ಯಕ್ಷಗಾನದ ಚೆಂಡೆ ಬಾರಿಸುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ವಾಸು ಶೆಟ್ಟಿ ದುಬೈ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಗಲ್ಫ್ ಘಟಕಗಳ ಮುಖ್ಯ ಸಂಚಾಲಕರಾದ ಅಶ್ರಫ್ ಶಾ ಮಾಂತುರು, ದುಬೈ ಘಟಕದ ಗೌರವಾಧ್ಯಕ್ಷ ಇಬ್ರಾಹಿಂ ಖಲೀಲ್, ಅಧ್ಯಕ್ಷರಾದ ಅಮರ್ ದೀಪ ಕಲ್ಲುರಾಯ ಘಟಕದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಗಡಿನಾಡ ಗಾಯಕ ಗಾಯಕಿಯರಿಂದ ಸಂಗೀತ ಸುಧೆ, ಯುಎಇಯ ಪ್ರಸಿದ್ಧ ನೃತ್ಯ ತಂಡದವರಿಂದ ನೃತ್ಯ ವೈಭವ ಮತ್ತು ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ತಂಡದವರಿಂದ ಶ್ರೀ ಕೃಷ್ಣ ಬಾಲಲೀಲೆ ಯಕ್ಷಗಾನ, ದಫ್ ಮುಟ್ ಕಾರ್ಯಕ್ರಮಗಳು ಮೆರುಗು ನೀಡಿತು.
ರಾತ್ರಿ ನಡೆದ ಸಮಾರೋಪ ಸಮಾರಂಭವು ಕರ್ನಾಟಕ ಹೆಲ್ತ್ ಕೇರ್ ಕೌನ್ಸಿಲ್ ನ ಅಧ್ಯಕ್ಷರಾದ ಯು.ಟಿ.ಇಫ್ತಿಕಾರ್ ಮುಖ್ಯ ಅತಿಥಿಯ ಉಪಸ್ಥಿತಿಯಲ್ಲಿ ನಡೆಯಿತು. ಕಾಸರಗೋಡಿನ ಶಾಸಕರಾದ ಎನ್.ಎ.ನೆಲ್ಲಿಕುನ್ನು, ಮಂಜೇಶ್ವರ ಶಾಸಕರಾದ ಎ.ಕೆ.ಎಂ.ಅಶ್ರಫ್, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಶಿವರಡ್ಡಿ ಕ್ಯಾಡೆಡ್ ರವರು ಸಾಧಕರಾದ ಮಂಗಳೂರಿನ ಉದ್ಯಮಿ ಪ್ರಕಾಶ್ ಕುಂಪಲ, ಬಿ.ಎಂ.ಗ್ರೂಪ್'ನ ಆಡಳಿತ ನಿರ್ದೇಶಕರಾದ ಡಾ.ವಿ.ಕನಕರಾಜ್, ಮ್ಯಾಕ್ಸ್ ಕ್ಯಾರ್ ಕ್ಲಿನಿಕ್ ದುಬೈ ಆಡಳಿತ ನಿರ್ದೇಶಕರಾದ ಬಶೀರ್ ಕಿನ್ನಿಂಗಾರ್, ಉದ್ಯಮಿ ಸಂದೀಪ್ ಶೆಟ್ಟಿಯವರನ್ನು ಗಡಿನಾಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಂಗಳೂರಿನ ಉದ್ಯಮಿ ಕಟಪಾಡಿ ಸತ್ಯೆಂದ್ರ ಪೈ, ಕ್ರಿಯೆಟಿವ್ ಕ್ಯಾಟರ್ ಹಾಸ್ಪಿಟಲಿಟಿನ ಆಡಳಿತ ನಿರ್ದೇಶಕರಾದ ಮಂಜುನಾಥ ರಾಜನ್, ಕರ್ನಾಟಕ ಜಾನಪದ ಪರಿಷತ್ ಒಮಾನ್ ಘಟಕದ ಅಧ್ಯಕ್ಷರಾದ ಶಿವಾನಂದ ಕೋಟ್ಯಾನ್ ಕಟಪಾಡಿಯವರ ಸಾಧನೆಯನ್ನು ಗುರುತಿಸಿ ಸಾಧಕ ಸನ್ಮಾನ ಮಾಡಿ ಗೌರವಿಸಲಾಯಿತು ಮತ್ತು ದುಬೈಯ ಕನ್ನಡಿಗರಿಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡುವ ಕನ್ನಡ ಪಾಠ ಶಾಲೆಯನ್ನು ಸಾಧಕ ಸಂಸ್ಥೆ ಎಂದು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಹಿನ್ ಕೆಲೋಟ್, ಉದ್ಯಮಿ ರೊನಾಲ್ಡೋ ಮಾರ್ಟಿಸ್, ಯುಎಇ ಪದ್ಮಶಾಲಿ ಸಮಾಜದ ಅಧ್ಯಕ್ಷರಾದ ರಘುರಾಮ ಶೆಟ್ಟಿಗಾರ್, ಅಬುಬಕ್ಕರ್ ರೋಯಲ್ ಬೊಳ್ಳಾರ್, ಮಸ್ಕತ್ ನ ಉದ್ಯಮಿ ಯುವರಾಜ್ ಸಾಲಿಯಾನ್, ನೋರ್ತ್ ಸ್ಕೈ ಪ್ರೋಪರ್ಟಿಸ್'ನ ಆಡಳಿತ ನಿರ್ದೇಶಕರಾದ ಕೃತೀನ್ ಅಮೀನ್, ಅಶ್ರಫ್ ಶಾ ಮಾಂತುರು, ಎ.ಆರ್ ಸುಬ್ಬಯ್ಯಕಟ್ಟೆ, ಝಡ್ ಎ ಕಯ್ಯಾರ್, ಉದ್ಯಮಿ ಯುಸುಫ್ ಪೈವಳಿಕೆ, ನಿವೃತ್ತ ಪ್ರಾಂಶುಪಾಲರಾದ ವಿ.ಎಚ್.ಅಬ್ದುಲ್ ಹಮೀದ್, ಹನೀಫ್ ಗೋಲ್ಡ್ ಕಿಂಗ್, ಅನ್ಸಾರ್ ಪೈವಳಿಕೆ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಅಮರ್ ದೀಪ ಕಲ್ಲುರಾಯರವರು ವಹಿಸಿದ್ದರು. ಅಶ್ರಪ್ ಶಾ ಮಾಂತುರು ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಆರತಿ ಅಡಿಗ ಮತ್ತು ವಿಘ್ನೇಶ್ ಕುಂದಾಪುರ ಅಚ್ಚುಕಟ್ಟಾಗಿ ನಿರೂಪಿಸಿದರು.
ಕಾರ್ಯಕ್ರಮದ ಯಶಸ್ವಿಗೆ ಸಾಥ್ ನೀಡಿದ ಘಟಕದ ಪದಾಧಿಕಾರಿಗಳಾದ ಇಬ್ರಾಹಿಂ ಬಾಜೂರಿ, ವಿಜಯಕುಮಾರ್ ಶೆಟ್ಟಿ ಗಾಣದಮೂಲೆ, ಅನೀಶ್ ಅಡಪ ಮಡಂದೂರು, ಸುಗಂದರಾಜ್ ಬೇಕಲ್, ಅಶ್ರಫ್ ಪಿ.ಪಿ.ಬಾಯರ್, ಮಂಜುನಾಥ ಕಾಸರಗೋಡು, ಯೂಸುಫ್ ಶೇಣಿ, ಜೇಶ್ ಬಾಯರ್, ಅಮಾನ್ ತಲೆಕಳ, ಮನ್ಸೂರ್ ಪೆರ್ಲ, ಶಾಕೀರ್ ಬಾಯರ್, ರಾಮಚಂದ್ರ ಬೆದ್ರಡ್ಕ, ಆಶೀಕ್ ಮಿಯಾ, ಅಂಬರೀಷ್ಇ ಚ್ಲಂಗೋಡುರವರಿಗೆ ಘಟಕದ ಅಧ್ಯಕ್ಷರಾದ ಅಮರ್ ದೀಪ ಕಲ್ಲುರಾಯರವರು ಕೃತಜ್ಞತೆ ಸಲ್ಲಿಸಿದರು.










