ಪಶ್ಚಿಮ ಬಂಗಾಳದಲ್ಲಿ ಬಾಬರಿ ಮಸೀದಿ ಮಾದರಿಯ ಮಸೀದಿ ನಿರ್ಮಾಣಕ್ಕೆ ಮೂರೇ ದಿನದಲ್ಲಿ 3 ಕೋಟಿ ರೂ. ದೇಣಿಗೆ ಸಂಗ್ರಹ!

ಪಶ್ಚಿಮ ಬಂಗಾಳದಲ್ಲಿ ಬಾಬರಿ ಮಸೀದಿ ಮಾದರಿಯ ಮಸೀದಿ ನಿರ್ಮಾಣಕ್ಕೆ ಮೂರೇ ದಿನದಲ್ಲಿ 3 ಕೋಟಿ ರೂ. ದೇಣಿಗೆ ಸಂಗ್ರಹ!

ಮುರ್ಷಿದಾಬಾದ್‌: ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ತೃಣಮೂಲ ಕಾಂಗ್ರೆಸ್‌ನ ಅಮಾನತುಗೊಂಡ ಶಾಸಕ ಹುಮಾಯೂನ್ ಕಬೀರ್ ಅವರು ಶಂಕುಸ್ಥಾಪನೆ ಮಾಡಿದ ಬಾಬರಿ ಮಸೀದಿ ಮಾದರಿಯ ಮಸೀದಿಗೆ ಭಾರಿ ಪ್ರಮಾಣದಲ್ಲಿ ದೇಣಿ ಹರಿದು ಬರುತ್ತಿದ್ದು, ಮೂರೇ ದಿನದಲ್ಲಿ 3 ಕೋಟಿ ರೂ. ಸಂಗ್ರಹವಾಗಿದೆ ಎಂದು ಟಿಎಂಸಿ ನಾಯಕನ ಆಪ್ತರು ಮಂಗಳವಾರ ಹೇಳಿದ್ದಾರೆ.

ಕಬೀರ್ ಅವರು ಡಿಸೆಂಬರ್ 6 ರಂದು ಮುರ್ಷಿದಾಬಾದ್ ಜಿಲ್ಲೆಯ ರೆಜಿನಗರದಲ್ಲಿ ನೂತನ ಬಾಬ್ರಿ ಮಸೀದಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು.

ಕಬೀರ್ ಅವರ ಪ್ರಕಾರ, ಸ್ಥಳದಲ್ಲಿ 12 ದೇಣಿಗೆ ಪೆಟ್ಟಿಗೆಗಳನ್ನು ಇರಿಸಲಾಗಿದೆ. ಇಲ್ಲಿಯವರೆಗೆ, ಪೆಟ್ಟಿಗೆಗಳಿಂದ 57 ಲಕ್ಷ ರೂ.ಗಳನ್ನು ಎಣಿಸಲಾಗಿದೆ. ಆದರೆ 2.47 ಕೋಟಿ ರೂ. QR- ಕೋಡ್ ಪಾವತಿಗಳ ಮೂಲಕ ಸ್ವೀಕರಿಸಲಾಗಿದೆ.

ಹೊಸ ದೇಣಿಗೆಗಳಿಗಾಗಿ ಒಂದು ದೇಣಿಗೆ ಪೆಟ್ಟಿಗೆಯನ್ನು ಇನ್ನೂ ಶಿಲಾನ್ಯಾಸ ಸ್ಥಳದಲ್ಲಿ ಇರಿಸಲಾಗಿದೆ.

2012 ರಲ್ಲಿ ತೃಣಮೂಲ ಕಾಂಗ್ರೆಸ್ ಸೇರಿದ ಮಾಜಿ ಕಾಂಗ್ರೆಸ್ ಶಾಸಕ ಕಬೀರ್, ನಂತರ ಬಿಜೆಪಿಗೆ ಅಲ್ಪಾವಧಿಗೆ ಸೇರ್ಪಡೆಗೊಂಡು 2020 ರಲ್ಲಿ ಆಡಳಿತ ಪಕ್ಷಕ್ಕೆ ಮರಳಿದರು. ಪಕ್ಷದ ನಾಯಕತ್ವದೊಂದಿಗೆ ಪದೇ ಪದೇ ಘರ್ಷಣೆ ನಡೆದ ನಂತರ ಅವರನ್ನು ಅಮಾನತುಗೊಳಿಸಲಾಗಿದೆ.

Ads on article

Advertise in articles 1

advertising articles 2

Advertise under the article