ಉಡುಪಿ ಜಿಲ್ಲಾ ಭಾರತೀಯ ದಂತ ವೈದ್ಯಕೀಯ ಸಂಘದಿಂದ "ಮೈ ಡೆಂಟಿಸ್ಟ್" ನಿಯತಕಾಲಿಕೆ ಬಿಡುಗಡೆ
ಉಡುಪಿ: ಭಾರತೀಯ ದಂತ ವೈದ್ಯಕೀಯ ಸಂಘ ಉಡುಪಿ ಜಿಲ್ಲಾ ಶಾಖೆಯು ಸಾರ್ವಜನಿಕರ ಅನುಕೂಲಕ್ಕಾಗಿ "ಮೈ ಡೆಂಟಿಸ್ಟ್" ಎಂಬ ಬಾಯಿಯ ಆರೋಗ್ಯದ ನಿಯತಕಾಲಿಕೆ ಮತ್ತು ದಂತ ಚಿಕಿತ್ಸಾಲಯಗಳ ದೂರವಾಣಿ ಡೈರೆಕ್ಟರಿಯನ್ನು ಹೊರತಂದಿದ್ದು, ಇದನ್ನು ಸಾರ್ವಜನಿಕರಿಗೆ ಉಚಿತವಾಗಿ ನೀಡಲಾಗುವುದು ಎಂದು ಭಾರತೀಯ ದಂತ ವೈದ್ಯಕೀಯ ಸಂಘದ ಉಡುಪಿ ಜಿಲ್ಲಾ ಶಾಖೆಯ ಅಧ್ಯಕ್ಷೆ ಡಾ. ಯು.ಬಿ. ಶಬರಿ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ನಿಯತಕಾಲಿಕೆಯು ವಿವಿಧ ವೈದ್ಯರು ಬರೆದ 15 ಬಾಯಿಯ ಆರೋಗ್ಯದ ಬಗೆಗಿನ ಲೇಖನಗಳನ್ನು ಹೊಂದಿದ್ದು, ಇದು ದಂತ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಿದೆ. ಉಡುಪಿ ಜಿಲ್ಲೆಯ ದಂತ ಚಿಕಿತ್ಸಾಲಯಗಳ ಸಂಪರ್ಕ ಸಂಖ್ಯೆ ಮತ್ತು ವಿಳಾಸವನ್ನು ನೀಡುವ ದೂರವಾಣಿ ಡೈರೆಕ್ಟರಿಯನ್ನು ಸಹ ಈ ಪುಸ್ತಕ ಹೊಂದಿದೆ. ಇದನ್ನು ಉಡುಪಿ ಜಿಲ್ಲೆಯಾದ್ಯಂತ ಶಾಲೆಗಳು, ಕಾಲೇಜುಗಳು ಮತ್ತು ಕಚೇರಿಗಳಲ್ಲಿ ವಿತರಿಸಲಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಡಾ. ಅತುಲ್ ಯು.ಆರ್., ಕೋಶಾಧಿಕಾರಿ ಡಾ. ತೇಜ್ ಕಿರಣ್ ಟಿ. ಶೆಟ್ಟಿ ಇದ್ದರು.