ಮೋಹನ್ ಭಾಗವತ್ ಕಾನೂನು ಬಾಹಿರ ಸಂಘಟನೆ ಮುಖ್ಯಸ್ಥ: ಬಿ.ಕೆ.ಹರಿಪ್ರಸಾದ್ ವಾಗ್ದಾಳಿ
ನವದೆಹಲಿ: ಸೂರ್ಯ, ಚಂದ್ರ ಇರುವುದು ಎಷ್ಟು ಸತ್ಯವೋ ಮೋಹನ್ ಭಾಗವತ್ ಕಾನೂನು ಬಾಹಿರ ಸಂಘಟನೆ ಮುಖ್ಯಸ್ಥ ಎನ್ನುವುದು ಅಷ್ಟೇ ಸತ್ಯ ಎಂದು ಆರ್‌ಎಸ್‌ಎಸ್ ಮುಖ್ಯಸ್ಥರ ವಿರುದ್ಧ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದರು.
ಹಿಂದೂ ರಾಷ್ಟ್ರ ಮಾಡುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಆರ್‌ಎಸ್‌ಎಸ್ ಸಾಂವಿಧಾನಿಕ ಚೌಕಟ್ಟಿನಲ್ಲಿ ನೊಂದಣಿಯಾಗಿಲ್ಲ ಎಂದು ಅವರೇ ಹೇಳಿಕೊಂಡಿದ್ದಾರೆ. ಕಾನೂನು ವ್ಯಾಪ್ತಿಯಲ್ಲಿ ನೋಂದಣಿಯಾಗದವರು ಸಂಸತ್ ಬಗ್ಗೆ ಏನು ಮಾತನಾಡುತ್ತಾರೆ? ಹಿಂದೂ ರಾಷ್ಟ್ರ ಮಾಡಲು ಸಂವಿಧಾನದಲ್ಲಿ ಬದಲಾವಣೆ ಬೇಕಾಗಿಲ್ಲ ಎನ್ನುತ್ತಾರೆ. ಸಂವಿಧಾನದ ಅಡಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಪಿಎಂ, ಗೃಹ ಸಚಿವರು ಮೋಹನ್ ಭಾಗವತ್ ಏಜೆಂಟ್‌ಗಳಾ, ಸಂವಿಧಾನದ ಅಡಿ ಪ್ರಮಾಣ ವಚನ ಸ್ವೀಕರಿಸಿದರು. ಸಂವಿಧಾನದ ಅಡಿ ಕೆಲಸ ಮಾಡಬೇಕು. ಮೋಹನ್ ಭಾಗವತ್‌ಗೆ Z+ ಸೆಕ್ಯೂರಿಟಿ ಕೊಟ್ಟಿದ್ದಾರೆ. ದೇಶಕ್ಕೆ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದರು.
ಮಾಜಿ ಸಚಿವ ಕೆ.ಎನ್.ರಾಜಣ್ಣ ಪತ್ರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಂಸತ್ ಚುನಾವಣೆಯಲ್ಲಿ ಸೋಲಿಗೆ ಕಾರಣ ಏನು ಎಂದು ಚರ್ಚೆ ನಡೆದಿದೆ. ಮಧುಸೂದನ್ ಮಿಸ್ತ್ರಿ ನೇತೃತ್ವದಲ್ಲಿ ಚರ್ಚೆಯಾಗಿದೆ. ಆ ತಂಡದ ಮುಂದೆ ಫಲಿತಾಂಶಕ್ಕೆ ಕಾರಣ ಏನು ಎಂದು ಹೇಳಿದೆ. ಸೋಲಿಗೆ ಕಾರಣ ಏನು ಎಂದು ಮಧುಸೂದನ್ ಮಿಸ್ತ್ರಿ ತಂಡ ಹೇಳಬೇಕು. ಕೆ.ಎನ್ ರಾಜಣ್ಣ ತಮ್ಮ ಅಭಿಪ್ರಾಯ ಹೇಳಿದ್ದಾರೆ. ವೋಟ್ ಚೋರಿ ವಿಚಾರ ಬೇರೆ, ಬಿಎಲ್‌ಓ ನೇಮಕ ಬೇರೆ. ಪತ್ರದಲ್ಲಿ ಏನು ಬರೆದಿದ್ದಾರೆ? ನಾನು ಪೂರ್ತಿ ಓದಿಲ್ಲ, ಓದಿ ಮಾತನಾಡುತ್ತೇನೆ ಎಂದರು.
ಸಿಎಂ ಸಿದ್ದರಾಮಯ್ಯ ಬಣದ ನಾಯಕರನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ವಿಚಾರದ ಬಗ್ಗೆ ಮಾತನಾಡಿ, ನನ್ನ ಡಿಸಿಎಂ ಭೇಟಿ ರಾಜಕೀಯ ಭೇಟಿಯಲ್ಲ. ಪಕ್ಷದ ಕಾರ್ಯಕ್ರಮಗಳಲ್ಲಿ ಭೇಟಿಯಾಗಿದ್ದೇನೆ. ಅವರು ಪಕ್ಷದ ಅಧ್ಯಕ್ಷರು. ಡಿಸಿಎಂ ಕೂಡಾ ಆಗಿದ್ದಾರೆ. ಎರಡು ಸ್ಥಾನದಲ್ಲಿರುವ ಕಾರಣ ಒಂದಲ್ಲ ಒಂದು ಸ್ಥಾನದ ಉಪಯೋಗ ಮಾಡಿಕೊಂಡು ಭೇಟಿ ಮಾಡುತ್ತಾರೆ. ಬೆಂಬಲ ಕೇಳಲು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಕಡೆಗೆ ಯಾರು ಇಲ್ಲ. ಎಲ್ಲ ನಾಯಕರು ಕಾಂಗ್ರೆಸ್ ಪಕ್ಷದ ಕಡೆಯವರು. ಕಾರ್ಯಕರ್ತರಿಂದ ಪಕ್ಷ ಗೆದ್ದಿರುವುದು ಎಂದು ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಪಕ್ಷದ ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಅವರಿಗೆ ಸರಿಯಾದ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದರು.