ಮಂಗಳೂರು ವಿವಿ: ಷೇರು ಮಾರುಕಟ್ಟೆಯ ಕುರಿತ ವಿಶೇಷ ಉಪನ್ಯಾಸ
Sunday, December 21, 2025
ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿಯ ವಾಣಿಜ್ಯ ಅಧ್ಯಯನ ವಿಭಾಗ ಮತ್ತು ಯೂನಿಯನ್ ಬ್ಯಾಂಕ್ ಚೇರ್ ವತಿಯಿಂದ ಷೇರು ಮಾರುಕಟ್ಟೆ ಕುರಿತು ವಿಶೇಷ ಉಪನ್ಯಾಸ ಇತ್ತೀಚೆಗೆ ನಡೆಯಿತು.
ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿಯ ವಿಶ್ರಾಂತ ಕುಲಸಚಿವರಾದ ಕೆ. ರಾಜು ಮೊಗವೀರ ಕೆ.ಎ.ಎಸ್. ರವರು ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿಗಳನ್ನು ನೀಡಿದರು.
ವಿಶೇಷ ಉಪನ್ಯಾಸ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ಪ್ರೀತಿ ಕೀರ್ತಿ ಡಿಸೋಜ ವಹಿಸಿದ್ದರು. ವೇದಿಕೆಯಲ್ಲಿ ಉಪನ್ಯಾಸಕರಾದ ಡಾ. ದಿನಕರ ಕೆಂಜೂರು, ಡಾ. ರಮ್ಯ ಕೆ. ಆರ್., ವೈಶಾಲಿ ಕೆ. ಮತ್ತು ಸಿ. ಲಹರಿ ಉಪಸ್ಥಿತರಿದ್ದರು. ಸುಷ್ಮಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಚೈತನ್ಯ ವಂದಿಸಿದರು.