ಮಗಳಿಗೆ ಹುಟ್ಟುಹಬ್ಬದ ಸಂಭ್ರಮ: ಪಾಳು ಬಿದ್ದ ಬಸ್ ನಿಲ್ದಾಣಕ್ಕೆ ರಂಗು ತುಂಬಿದ ಕಲಾವಿದ ಮಹೇಶ್ ಮರ್ಣೆ

ಮಗಳಿಗೆ ಹುಟ್ಟುಹಬ್ಬದ ಸಂಭ್ರಮ: ಪಾಳು ಬಿದ್ದ ಬಸ್ ನಿಲ್ದಾಣಕ್ಕೆ ರಂಗು ತುಂಬಿದ ಕಲಾವಿದ ಮಹೇಶ್ ಮರ್ಣೆ

ಉಡುಪಿ: ಉಡುಪಿಯ ಮರ್ಣೆ ಕಲಾವಿದರ ಊರು ಅಂತಲೇ ಪ್ರಸಿದ್ಧಿ. ಇಲ್ಲಿನ ಪ್ರಸಿದ್ಧ ಕಲಾವಿದ ಮಹೇಶ್ ಮರ್ಣೆ ತನ್ನ ಮಗಳ ಆರನೇ ವರ್ಷದ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದರು. ಊರಿನಲ್ಲಿದ್ದ ಪಾಳು ಬಿದ್ದ ಬಸ್ ನಿಲ್ದಾಣಕ್ಕೆ ಹೊಸ ಮೆರುಗು ನೀಡಿದರು. ತನ್ನ ಅಪೂರ್ವ ಪ್ರತಿಭೆಯಿಂದ ಬಸ್ ನಿಲ್ದಾಣವನ್ನು ಅಲಂಕರಿಸಿದರು. ಬಣ್ಣ ಬಣ್ಣದ ಚಿತ್ತಾರ ಬಿಡಿಸಿ ಆಕರ್ಷಕವಾಗಿಸಿದರು. ಈಗ ಬಸ್ ನಿಲ್ದಾಣದಲ್ಲಿ ನಿಂತರೆ ವಿಶಿಷ್ಟ ಅನುಭವ ಆಗುತ್ತೆ. ಈ ಕಲರ್ ಫುಲ್ ಬಸ್ ನಿಲ್ದಾಣ ಈಗ ಎಲ್ಲರನ್ನೂ ಆಕರ್ಷಿಸುತ್ತಿದೆ.




Ads on article

Advertise in articles 1

advertising articles 2

Advertise under the article