ಗುಜರಾತ್; ಕಳೆದ 10 ವರ್ಷಗಳಲ್ಲಿ ಅನೇಕ ಬಿಜೆಪಿ ಸಂಸದರಿಗೆ ಆಸ್ತಿ ಆಶ್ಚರ್ಯಕರ ರೀತಿಯಲ್ಲಿ ಹೆಚ್ಚಳ: ADR ವರದಿ

ಗುಜರಾತ್; ಕಳೆದ 10 ವರ್ಷಗಳಲ್ಲಿ ಅನೇಕ ಬಿಜೆಪಿ ಸಂಸದರಿಗೆ ಆಸ್ತಿ ಆಶ್ಚರ್ಯಕರ ರೀತಿಯಲ್ಲಿ ಹೆಚ್ಚಳ: ADR ವರದಿ

ಅಹಮದಾಬಾದ್: 2014, 2019 ಮತ್ತು 2024ರಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿ ಸತತ ಮೂರು ಬಾರಿ ಲೋಕಸಭೆಗೆ ಆಯ್ಕೆಯಾದ ಸಂಸದರ ಆಸ್ತಿಗಳನ್ನು ಬಹಿರಂಗಪಡಿಸುವ ವರದಿಯನ್ನು ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ADR) ಬುಧವಾರ ಪ್ರಕಟಿಸಿದೆ.

ಕೇಂದ್ರ ಸಚಿವ ಸಿ ಆರ್ ಪಾಟೀಲ್ ಅವರನ್ನು ಹೊರತುಪಡಿಸಿ, ಒಂದು ದಶಕದ ಸತತ ಚುನಾವಣಾ ಗೆಲುವಿನ ಬಳಿಕ ಅನೇಕ ಬಿಜೆಪಿ ಸಂಸದರಿಗೆ ಆಸ್ತಿ ಆಶ್ಚರ್ಯಕರ ರೀತಿಯಲ್ಲಿ ಹಲವು ಪಟ್ಟು ಹೆಚ್ಚಾಗಿದೆ.

ಗುಜರಾತ್‌ನಲ್ಲಿ, ಕೇವಲ ಏಳು ಸಂಸದರು ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲವು ಸಾಧಿಸಿದ್ದಾರೆ. ಮೂರು ಚುನಾವಣೆಗಳಲ್ಲಿ ಅವರ ಆಸ್ತಿ ಘೋಷಣೆಗಳ ಹೋಲಿಕೆ ವ್ಯಾಪಕ ವ್ಯತ್ಯಾಸಗಳಿದ್ದು, ಹಲವಾರು ಸಂಸದರ ಆಸ್ತಿ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ" ಎಂದು ADR ವಿಶ್ಲೇಷಣೆ ಹೇಳುತ್ತದೆ.

ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಬಿಜೆಪಿ ಸಂಸದೆ ಪೂನಂಬೆನ್ ಮೇಡಂ ಅವರ ಘೋಷಿತ ಆಸ್ತಿ 2014ರಲ್ಲಿ ಸುಮಾರು 17 ಕೋಟಿ ರೂ.ಗಳಿಂದ 2024 ರಲ್ಲಿ 147 ಕೋಟಿ ರೂ.ಗಳಿಗೆ ಜಿಗಿದಿದೆ. ಒಂದೇ ದಶಕದಲ್ಲಿ ಸರಿಸುಮಾರು 130 ಕೋಟಿ ರೂ. ಅಥವಾ ಶೇ. 747 ರಷ್ಟು ಏರಿಕೆಯಾಗಿದೆ.

ಪೂನಂಬೆನ್ ಮೇಡಂ ನಂತರ, ಕಛ್ ಬಿಜೆಪಿ ಸಂಸದ ವಿನೋದ್ ಲಖಂಶಿ ಚಾವ್ಡಾ ಅವರ ಆಸ್ತಿ 2014 ರಲ್ಲಿ ಕೇವಲ 56 ಲಕ್ಷ ರೂ. ಎಂದು ಘೋಷಿಸಿದ್ದರು. ಅದು 2024ರ ವೇಳೆಗೆ 6.5 ಕೋಟಿ ರೂ.ಗೆ ಹೆಚ್ಚಾಗಿ, ಶೇ. 1,100 ಕ್ಕಿಂತ ಹೆಚ್ಚಾಗಿದೆ.

ಬಾರ್ಡೋಲಿಯ(ಎಸ್‌ಟಿ) ಮತ್ತೊಬ್ಬ ಬಿಜೆಪಿ ಸಂಸದ ಪರಭುಭಾಯಿ ನಾಗರ್‌ಭಾಯಿ ವಾಸವ ಅವರ ಆಸ್ತಿ ಸುಮಾರು 1.6 ಕೋಟಿ ರೂ.ಗಳಿಂದ 4.7 ಕೋಟಿ ರೂ.ಗಳಿಗೆ ಏರಿಕೆಯಾಗಿದ್ದು, ಇದು ಸುಮಾರು ಶೇ. 195 ರಷ್ಟು ಹೆಚ್ಚಳವನ್ನು ಸೂಚಿಸುತ್ತದೆ.

ಹಿರಿಯ ಸಂಸದರಾದ ದೇವುಸಿನ್ಹ್ ಚೌಹಾಣ್(ಖೇಡಾ) ಮತ್ತು ರಾಜೇಶ್ ನರನ್‌ಭಾಯಿ ಚುಡಾಸಮಾ(ಜುನಾಗಢ್) ಕೂಡ ಅತಿ ವೇಗವಾಗಿ ಶ್ರೀಮಂತರಾಗಿದ್ದು, ಹತ್ತು ವರ್ಷಗಳ ಅವಧಿಯಲ್ಲಿ ಪ್ರತಿಯೊಬ್ಬರೂ ತಮ್ಮ ಘೋಷಿತ ಸಂಪತ್ತಿಗಿಂತ 2 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನದನ್ನು ಘೋಷಿಸಿಕೊಂಡಿದ್ದಾರೆ.

ಹಲವು ಸಂಸದರು ತಮ್ಮ ಸಂಪತ್ತನ್ನು ಹೆಚ್ಚಿಸಿಕೊಳ್ಳುತ್ತಿದ್ದರೆ, ಅವರಿ ವಿರುದ್ಧಾಗಿ ಸಿ ಆರ್ ಪಾಟೀಲ್ ಆಸ್ತಿಯನ್ನು ಕಳೆದುಕೊಂಡಿದ್ದಾರೆ. ಕೇಂದ್ರ ಸಚಿವ ಮತ್ತು ನವಸಾರಿ ಸಂಸದರಾಗಿರುವ ಸಿಆರ್ ಪಾಟೀಲ್ ಅವರು 2014 ಕ್ಕೆ ಹೋಲಿಸಿದರೆ ಅವರ ಘೋಷಿತ ಆಸ್ತಿಯಲ್ಲಿ ಶೇಕಡಾ 47 ರಷ್ಟು ಕುಸಿತವಾಗಿದೆ ಎಂದು ಎಡಿಆರ್ ವರದಿ ಮಾಡಿದೆ.

Ads on article

Advertise in articles 1

advertising articles 2

Advertise under the article