ಅಲ್ ನ್ನೂರ್ ಎಜು ಸೆಂಟರ್ ಸಲಾಲ ಆಶ್ರಯದಲ್ಲಿ ಜನವರಿ 30ರಂದು 'ಸ್ನೇಹ ಸಂಗಮ'
Thursday, January 29, 2026
ಒಮಾನ್: ಅಲ್ ನ್ನೂರ್ ಎಜು ಸೆಂಟರ್ ಸಲಾಲ ಇದರ ಆಶ್ರಯದಲ್ಲಿ ಜನವರಿ 30ರಂದು 'ಸ್ನೇಹ ಸಂಗಮ' ಕಾರ್ಯಕ್ರಮ ಆಯೋಜಿಸಲಾಗಿದೆ.
ಜನವರಿ 30ರ ಶುಕ್ರವಾರ ಮಧ್ಯಾಹ್ನ 1.30ರಿಂದ ರಾತ್ರಿ 8ರ ವರಗೆ ಇತೀನ್ ವಿಲ್ಲಾದಲ್ಲಿ ನಡೆಯುವ ಈ 'ಸ್ನೇಹ ಸಂಗಮ' ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಇಸ್ಲಾಮಿಕ್ ಕಲಾ ವೈವಿಧ್ಯಮಯ ಕಾರ್ಯ ಕ್ರಮಗಳ ಜೊತೆ ವಿವಿಧ ಆಟೋಟ ಸ್ಪರ್ಧೆಗಳು, ಅಧ್ಯಾತ್ಮಿಕ ಉಪದೇಶ ಕಾರ್ಯಕ್ರಮ ನಡೆಯಲಿದೆ. ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ, ನಮಾಝ್ ಮತ್ತು ಭೋಜನ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ಚೇರ್ಮ್ಯಾನ್ ಉಮ್ಮರ್ ಫಾರೂಕ್ ಕಣ್ಣಂಗಾರ್ ತಿಳಿಸಿದ್ದಾರೆ.