ಮಕ್ಕಾದಲ್ಲೂ ಕೂಡಾ ಟ್ರಾಫಿಕ್ ಡ್ಯೂಟಿ ಮಾಡಿದ ನಮ್ಮ ನೆಚ್ಚಿನ ಪೊಲೀಸ್ ರವೂಫ್!
ಮಂಗಳೂರಿನ ಟ್ರಾಫಿಕ್ ಪೊಲೀಸ್ ರವೂಫ್ ಅಂದರೆ ಪ್ರಾಮಾಣಿಕ ಸೇವೆಗೆ ಇನ್ನೊಂದು ಹೆಸರು. ಈ ಕಾರಣದಿಂದ ಇವರು ಇಲ್ಲೆಲ್ಲ ಸುಪರಿಚಿತ ಹಾಗೂ ಜನಾನುರಾಗಿ. ಸಂಚಾರ ಸುವ್ಯವಸ್ಥೆಗೆ ಪ್ರಯತ್ನ ಎಂಬುದು ಅವರ ಪಾಲಿಗೆ ಬರೀ ಡ್ಯೂಟಿ ಮಾತ್ರವಲ್ಲ, ಅದೊಂದು ಸ್ವಮನಸ್ಸಿನ ಸಮಾಜ ಸೇವೆ. ಟ್ರಾಫಿಕ್ ಆರ್ಡರ್ ಮಾಡಲು ಅವರು ಡ್ಯೂಟಿಯಲ್ಲೇ ಇರಬೇಕೆಂದಿಲ್ಲ. ಡ್ಯೂಟಿ ಟೈಮು ಮುಗಿದು ಮಫ್ತಿಯಲ್ಲೇ ಇರಲಿ, ರಜೆಯಲ್ಲೇ ಇರಲಿ ಎಲ್ಲಾದರೂ ಟ್ರಾಪಿಕ್ ಜಾಮ್ ಕಂಡರೆ ಅವರ ಸೇವಾವಾಂಛೆ ಗರಿಗೆದರುತ್ತದೆ. ಮದುವೆ, ಮರಣ ಮುಂತಾದ ಯಾವುದೇ ಜಾಗದಲ್ಲಾದರೂ ಅವರು ಡ್ಯೂಟಿಯಲ್ಲಿ ಇಲ್ಲದಿದ್ದರೂ ಅವರ ಡ್ಯೂಟಿಯ ವ್ಯಾಫ್ತಿಯ ಹೊರಗಿದ್ದರೂ ಸಂಚಾರ ಸುವ್ಯವಸ್ಥೆಗೆ ಇಳಿಯುವುದು ಅವರ ರೂಡಿ.
ಇದೀಗ ಅವರು ಉಮ್ರಾ ನಿರ್ವಹಣೆಗೆ ಪರಿಶುದ್ಧ ಮಕ್ಕಾಕ್ಕೆ ಹೋಗಿದ್ದಾರೆ. ಅಲ್ಲಿ ಹೇಗೆ ಕರ್ತವ್ಯನಿರತೆಗೆ ಅವಕಾಶ ಪಡಕೊಂಡರೋ ಗೊತ್ತಿಲ್ಲ. ಅಲ್ಲೂ ಕೂಡಾ ಟ್ರಾಪಿಕ್ ಸುವ್ಯವಸ್ಥೆಗೆ ಸೇವೆ ಸಲ್ಲಿಸಿದ್ದಾರೆ. ಇನ್ನೊಂದು ವಿಶೇಷವೆಂದರೆ ಅವರು ಪವಿತ್ರ ಹರಮ್ ನಲ್ಲಿ ತನ್ನ ಪುತ್ರಿಗೆ ನಿಕಾಹ್ ಕಾರ್ಯ ನೆರವೇರಿಸಿದ್ದಾರೆ. ತನ್ನ ಮುದ್ದಿನ ಮಗಳ ನಿಕಾಹ್ ಪವಿತ್ರ ನೆಲದಲ್ಲಿ ನಡೆಸಬೇಕು ಎಂಬ ಅವರ ಚಿರಕಾಲದ ಕನಸನ್ನು ನನಸು ಮಾಡಿದ್ದಾರೆ.
ಡಿ.ಐ. ಅಬೂಬಕರ್ ಕೈರಂಗಳ