ಉದ್ಯಾವರ ಗ್ರಾ.ಪಂ ವ್ಯಾಪ್ತಿಯ 60 ಲಕ್ಷ ರೂ. ವೆಚ್ಚದ ವಿವಿಧ ರಸ್ತೆ ಕಾಮಗಾರಿಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಗುದ್ದಲಿ ಪೂಜೆ
ಕಾಪು: ಕಾಪು ವಿಧಾನಸಭಾ ಕ್ಷೇತ್ರದ ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ರಸ್ತೆ ಅಭಿವೃದ್ಧಿಗೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ಶಿಫಾರಸ್ಸಿನ ಮೇರೆಗೆ 60 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದ್ದು ಇದರ ಗುದ್ದಲಿ ಪೂಜೆಯನ್ನು ಸೋಮವಾರ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು.
ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಿತ್ರೋಡಿ ಪ್ರವೀಣ್ ಮನೆಯಿಂದ ರಮೇಶ್ ಕುಮಾರ್ ಮನೆ ವರೆಗೆ ರಸ್ತೆ ಅಭಿವೃದ್ಧಿಗೆ - 10 ಲಕ್ಷ, ಅಂಕುದ್ರು ಮುಖ್ಯ ರಸ್ತೆ ಕಾಂಕ್ರೀಟೀಕರಣ - 10 ಲಕ್ಷ, ಸಂಪಿಗೆನಗರ ಮಹಾಕಾಳಿ 1ನೇ ಅಡ್ಡ ರಸ್ತೆ ಅಭಿವೃದ್ಧಿ - 10 ಲಕ್ಷ, ಕೇದಾರ್ ಬ್ರಹ್ಮಲಿಂಗೇಶ್ವರ ದೇವಸ್ಥಾನ ಬಳಿ ರಸ್ತೆ ಅಭಿವೃದ್ಧಿಗೆ - 10 ಲಕ್ಷ, ರಾಜಾರಾಮ್ ಭಟ್ ಮನೆ ಬಳಿ ರಸ್ತೆ ಅಭಿವೃದ್ಧಿ - 10 ಲಕ್ಷ, ಪಿತ್ರೋಡಿ ನೀಲಾಧರ್ ಸಾಲಿಯಾನ್ ಮತ್ತು ಸುಗಂಧಿ ಶೆಟ್ಟಿ ಮನೆ ಬಳಿ ರಸ್ತೆ ಕಾಂಕ್ರೀಟೀಕರಣ - 10 ಲಕ್ಷ ಸೇರಿದಂತೆ ಒಟ್ಟು 60 ಲಕ್ಷ ರೂಪಾಯಿ ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ರಾಜೇಶ್ ಕುಂದರ್, ಸದಸ್ಯರಾದ ರಾಧಾಕೃಷ್ಣ ಶ್ರೀಯಾನ್, ಜಿತೇಂದ್ರ ಶೆಟ್ಟಿ, ಯೋಗೀಶ್ ಕೋಟ್ಯಾನ್, ಸಚಿನ್ ಪಿತ್ರೋಡಿ, ರಮಾನಂದ ಸೆರ್ವೇಗಾರ್, ಮಿಥೇಶ್, ಚೇತನ್, ವೀಣಾ, ಸರಿತಾ, ರೇಖಾ, ಪ್ರಮೀಳಾ ಹಾಗೂ ಸ್ಥಳೀಯ ಪ್ರಮುಖರಾದ ವಿಜಯ್ ಕುಮಾರ್ ಉದ್ಯಾವರ, ಸಂತೋಷ್ ಬೊಳ್ಜೆ ಹಾಗೂ ಪಕ್ಷದ ಹಿರಿಯರು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.