ದುಬೈ; ಫೆಬ್ರವರಿ 28ರಂದು 'ಬ್ಯಾರೀಸ್ ಕಲ್ಚರಲ್ ಫೋರಮ್( BCF)'ನಿಂದ 'ಇಫ್ತಾರ್ ಮೀಟ್ 2026'

ದುಬೈ; ಫೆಬ್ರವರಿ 28ರಂದು 'ಬ್ಯಾರೀಸ್ ಕಲ್ಚರಲ್ ಫೋರಮ್( BCF)'ನಿಂದ 'ಇಫ್ತಾರ್ ಮೀಟ್ 2026'

ದುಬೈ: ಕಳೆದ 28 ವರ್ಷಗಳಿಂದ ಸಾಮುದಾಯಿಕ ಸೇವಾ ಕಾರ್ಯದಲ್ಲಿ ತೊಡಗಿ ಕೊಂಡಿರುವ ಅತೀ ಜನಪ್ರಿಯ ಸೇವಾ ಸಂಸ್ಥೆಯಾಗಿರುವ 'ಬ್ಯಾರೀಸ್ ಕಲ್ಚರಲ್ ಫೋರಮ್( BCF)' ವತಿಯಿಂದ 'ಗ್ರ್ಯಾಂಡ್  BCF ಇಫ್ತಾರ್ ಮೀಟ್ 2026' ಇಫ್ತಾರ್ ಕಾರ್ಯಕ್ರಮ  ಫೆಬ್ರವರಿ 28ರಂದು ದುಬೈಯ ಮಂಝರ್ ನಲ್ಲಿರುವ ಝಹಿಯ್ಯಾ ಸಭಾಂಗಣದಲ್ಲಿ ನಡೆಯಲಿದೆ.

BCF ಅಧ್ಯಕ್ಷರಾದ ಡಾ.ಬಿ.ಕೆ.ಯೂಸುಫ್ ಅವರ ಮುಂದಾಳುತನದಲ್ಲಿ BCF ಸ್ಥಾಪಕ ಗೌರವ ಪೋಷಕರಾದ ಡಾ.ತುಂಬೆ ಮೊಹಿದಿನ್ ಅವರ ಸಹಯೋಗದೊಂದಿಗೆ, BCF ಗೌರವ ಸಲಹೆಗಾರರಾದ ಇಬ್ರಾಹಿಂ ಗಡಿಯಾರ್ ಮತ್ತು ಅಬೂಸಾಲಿಹ್ ಮತ್ತು ಇತರ BCF ನಾಯಕರು ಮತ್ತು ಹಿತೈಷಿಗಳ ಸಹಕಾರದೊಂದಿಗೆ ನೆರವೇರಲಿದೆ.

UAEಯಿಂದ, ಇತರ GCC ದೇಶಗಳಿಂದ ಮತ್ತು ಕರ್ನಾಟಕದ ಹಲವಾರು ವಿಶೇಷ ಅತಿಥಿಗಳು, ಉಲೇಮಾಗಳು, ಇಲಾಖಾ ಪ್ರತಿನಿಧಿಗಳು, ಮಂತ್ರಿಗಳು ಮತ್ತು UAE ಯಿಂದ ವಿಶೇಷ ಆಮಂತ್ರಿತ ಅತಿಥಿಗಳು ಭಾಗವಹಿಸಲಿದ್ದಾರೆ.

ಇಫ್ತಾರ್ ಗೆ ಮೊದಲು, ಧಾರ್ಮಿಕ ಪಂಡಿತರುಗಳಿಂದ ದೀನೀ ಉಪನ್ಯಾಸಗಳು, ದುವಾ, ಮತ್ತು ವಿಶೇಷವಾಗಿ ಮಕ್ಕಳಿಗೆ ಮತ್ತು ಇತರರಿಗೆ ಇಸ್ಲಾಮ್ ರಸ ಸ್ಪರ್ಧೆ, ಕಿರಾತ್ ಸ್ಪರ್ಧೆ ಕೂಡಾ ಇದೆ. ಈ ಇಫ್ತಾರಿಗೆ ಆಗಮಿಸುವ ಎಲ್ಲ BCF ಅಭಿಮಾನಿಗಳು ಈ ಎಲ್ಲ ಸ್ಪರ್ಧಾವಳಿಯಲ್ಲಿ ಪಾಲ್ಗೊಳ್ಳಲು ಅಥವಾ ವೀಕ್ಷಿಸಲು ಸಂಜೆ 4.30ಕ್ಕೆ ಆಗಮಿಸುವಂತೆ  BCF IFTAAR COMMITEEಯ ಚೇರ್ಮ್ಯಾನ್ ಅಬ್ದುಲ್ ಲತೀಫ್ ಮುಲ್ಕಿ ಮತ್ತು ಸಹ ಚೇರ್ಮ್ಯಾನ್ ಅಫೀಕ್ ಹುಸೈನ್ BCF ಕಾರ್ಯಕಾರಿ ಸಮಿತಿಯ ಪರವಾಗಿ ವಿನಂತಿಸಿದ್ದಾರೆ. 

Ads on article

Advertise in articles 1

advertising articles 2

Advertise under the article