ದುಬೈ 'ಯಕ್ಷ ಯೋಧಾಸ್'ನ 'YPL-2022 ಚಾಂಪಿಯನ್ಸ್ ಟ್ರೋಫಿ' ಮುಡಿಗೇರಿಸಿಕೊಂಡ ಎಲೀಗೆಂಟ್ಸ್ ಮಂಗಳೂರು; ಕಟೀಲು ಫ್ರೆಂಡ್ಸ್ A ತಂಡ ರನ್ನರ್ಸ್

ದುಬೈ 'ಯಕ್ಷ ಯೋಧಾಸ್'ನ 'YPL-2022 ಚಾಂಪಿಯನ್ಸ್ ಟ್ರೋಫಿ' ಮುಡಿಗೇರಿಸಿಕೊಂಡ ಎಲೀಗೆಂಟ್ಸ್ ಮಂಗಳೂರು; ಕಟೀಲು ಫ್ರೆಂಡ್ಸ್ A ತಂಡ ರನ್ನರ್ಸ್


✒️ವರದಿ: ವಿಜಯಕುಮಾರ್ ಶೆಟ್ಟಿ, ಗಾಣದಮೂಲೆ ಮಜಿಬೈಲ್ (ದುಬೈ)

ದುಬೈ(Headlines Kannada): ಯಕ್ಷ ಯೋಧಾಸ್ ದುಬಾಯಿಯ ವತಿಯಿಂದ ದ್ವಿತೀಯ ವರ್ಷದ YPL-2022 ಕ್ರಿಕೆಟ್ ಪಂದ್ಯಾಟವು ಶಾರ್ಜಾದ ಸ್ಕೈ ಲೈನ್ ಯುನಿವರ್ಸಿಟಿ ಕ್ರೀಡಾಂಗಣದಲ್ಲಿ ನಡೆಯಿತು.

 ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇಯ ಸಂಚಾಲಕರಾದ DUMEC ಸಂಸ್ಥೆಯ ರೂವಾರಿ ದಿನೇಶ್ ಶೆಟ್ಟಿ ಕೊಟಿಂಜ,ತರಗತಿಯ ಗುರುಗಳಾದ ಶೇಖರ ಶೆಟ್ಟಿಗಾರ್ ಮತ್ತು ಯಕ್ಷಯೋಧಾಸ್ ಪದಾಧಿಕಾರಿಗಳು ಸಂಯುಕ್ತವಾಗಿ ದೀಪವನ್ನು ಬೆಳಗಿಸಿ ಪಂದ್ಯಾಟಕ್ಕೆ ಚಾಲನೆ ನೀಡಿದರು.






ಮನಗೆದ್ದ ಪಂದ್ಯಾವಳಿಗಳು:  ಯುಎಇಯಲ್ಲಿರುವ ಹನ್ನೆರಡು ಕರ್ನಾಟಕ ಪರ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದು. ಪ್ರತಿ ತಂಡವು ಮೂರು ಮೂರು ಲೀಗ್ ಪಂದ್ಯಾಟ ಪೂರೈಸಿ ಅಂತಿಮ  ಪಂದ್ಯಾಟಕ್ಕೆ ಕಟೀಲು ಫ್ರೆಂಡ್ಸ್ ಎ. ಮತ್ತು ಎಲೀಗೆಂಟ್ಸ್ ಮಂಗಳೂರು ತಂಡವು ಪ್ರವೇಶಿಸಿತ್ತು.

ಫೈನಲ್ ಪಂದ್ಯದ ತೀವ್ರ ಹಣಾಹಣಿಯಲ್ಲಿ ಕಟೀಲು ಫ್ರೆಂಡ್ಸ್ ಎ. ತಂಡವು YPL-2022  ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟರೆ ಎಲೀಗೆಂಟ್ಸ್ ಮಂಗಳೂರು ತಂಡವು YPL-2022 ಚಾಂಪಿಯನ್ಸ್ ಟ್ರೋಫಿ ತನ್ನದಾಗಿಸಿಕೊಂಡಿತು. ಪಂದ್ಯಾಟದ ಪಂದ್ಯ ಶ್ರೇಷ್ಠನಾಗಿ ಸಲ್ಮಾನ್ (ಎಲೀಗೆಂಟ್ಸ್), ಸರಣಿ ಶ್ರೇಷ್ಠ ನಾಗಿ ಸಫ್ವಾನ್ (ಎಲೀಗೆಂಟ್ಸ್), ಅತ್ಯುತ್ತಮ ಬೌಲರ್ ನಾಗಿ ನೀಯಝ್ (ಕಟೀಲು), ಅತ್ಯುತ್ತಮ ದಾಂಡಿಗನಾಗಿ ವಿಶ್ವ (ಕಟೀಲು) ಮತ್ತು ಅತ್ಯುತ್ತಮ & ಉತ್ತಮ ಆಟಗಾರನಾಗಿ ಹಂದಾನ್ ಉಡುಪಿ (ಕಟೀಲು) ಫಲಕವನ್ನು ತನ್ನದಾಗಿಸಿಕೊಂಡರು.   

ಬಹುಮಾನ ವಿತರಣಾ ಮತ್ತು ಸಮಾರೋಪ ಸಮಾರಂಭದಲ್ಲಿ ಪಂದ್ಯಾಟದ ಮಹಾ ಪೋಷಕರಾದ ಅಕ್ಮೇ ಬಿಲ್ಡಿಂಗ್ ಮೆಟೇರಿಯಲ್ಸ್ ನ ಹರೀಶ್ ಶೇರಿಗಾರ್, ಭೀಮಾ ಜ್ಯುವೆಲ್ಲರ್ಸ್ ನ ಯು. ನಾಗರಾಜ ರಾವ್, ದುಬೈ ಸೋರ್ಸ್ ನ ಹರೀಶ್ ಬಂಗೇರ, ಮೋಸೊಕೋ ಸಿಫಿಂಗ್ ನ ಫ್ರಾಂಕ್ ಫೆರ್ನಾಂಡೀಸ್, ನಂಜೆ ಯಾಟ್ಚ್ ನ ಸಂದೀಪ್ ರೈ ನಂಜೆ, ದುಮೆಕ್ ನ ದಿನೇಶ್ ಶೆಟ್ಟಿ ಕೊಟಿಂಜ, ಉದ್ಯಮಿ ರಶ್ಮಿಕಾಂತ್ ಶೆಟ್ಟಿ, ಬ್ರಿಟಾನಿಯ ದುಬೈಯ ವಾಸು ಕುಮಾರ್ ಶೆಟ್ಟಿ,ಕನ್ನಡ ಚಿತ್ರ ನಿರ್ದೇಶಕ ಸೌರಭ್ ಕುಲಕರ್ಣಿ,ಯಕ್ಷಗಾನ ತರಗತಿಯ ಗುರುಗಳಾದ ಶೇಖರ್ ಶೆಟ್ಟಿಗಾರ್ ಅವರು ಜಯ ಗಳಿಸಿದ ತಂಡಗಳಿಗೆ ಬಹುಮಾನ ವಿತರಿಸಿ ಪಂದ್ಯಾಟಕ್ಕೆ ಮತ್ತು ಕ್ರೀಡಾ ಪಟುಗಳಿಗೆ ಶುಭ ಕೋರಿದರು.

ಯಕ್ಷಯೋಧಾಸ್ ನ ಬಾಲಕೃಷ್ಣ ಶೆಟ್ಟಿ, ಪ್ರಕಾಶ್ ಪಕಳ,ಸಂದೀಪ್ ಶೆಟ್ಟಿ ಕೊಟಿಂಜ, ಶರತ್ ಕುಡ್ಲ,ಬಾಲಕೃಷ್ಣ ಶೆಟ್ಟಿಗಾರ್, ರಮಾನಂದ, ಪ್ರಖ್ಯತ್ ಶೆಟ್ಟಿ, ವಿಕೇಶ್ ಶೆಟ್ಟಿ, ಗಗನ್ ಶೆಟ್ಟಿ, ಕೌಶಿಕ್, ಸಚ್ಚು ಕುಲಾಲ್, ಪ್ರವೀಣ್, ಜೀವನ್, ಚೆರಿ, ಪ್ರೀತೇಶ್, ಶ್ರೇಯಸ್ ಆಚಾರ್ಯ, ಪ್ರಥೀತ್, ಅವಿನಾಶ್, ಶೇಖರ್ ಶೆಟ್ಟಿ, ಭಾಸ್ಕರ್,ಸತೀಶ್, ಕಿಶನ್, ಜೀವನ್ ಕುಲಾಲ್,ಸೀತಾರಾಮ ಶೆಟ್ಟಿ, ಸಂಪತ್ ಶೆಟ್ಟಿ,ಶಿವ ಕುಮಾರ್,ಬಾಲರಾಜ್ ಶೆಟ್ಟಿ, ಪ್ರಥ್ವೀನ್ ಹಾಗೂ  ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇಯ ಮಕ್ಕಳು ಮತ್ತು ಹೆತ್ತವರು ಕಾರ್ಯಕ್ರಮದ ಯಶಸ್ವಿಗೆ ಸಾಥ್ ನೀಡಿದರು.

ರಾಜೇಶ್ ಕುತ್ತಾರ್,ಗಿರೀಶ್ ನಾರಾಯಣ ಮತ್ತು ಶೇಖರ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಣೆ ಗೈದರು. ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿ ದಿನೇಶ್ ಶೆಟ್ಟಿ ಕೊಟಿಂಜ ವಂದಿಸಿದರು.

Ads on article

Advertise in articles 1

advertising articles 2

Advertise under the article