ಮಂಗಳೂರು(Headlines Kannada): ಅಡ್ಡೂರಿನ ಮನೆಯೊಂದರ ಶೌಚಾಲಯಕ್ಕೆ ಗುಂಡಿ ತೋಡುತ್ತಿದ್ದ ವೇಳೆ ಏಕಾಏಕಿ ಮಣ್ಣು ಕುಸಿದ ಪರಿಣಾಮ ಕಾರ್ಮಿಕರೊಬ್ಬರು ಸಾ#ವನ್ನಪ್ಪಿದ ಘಟನೆ ಮಂಗಳವಾರ ನಡೆದಿದೆ.
ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಅಡ್ಡೂರಿನಲ್ಲಿ ಈ ದುರ್ಘಟನೆ ನಡೆದಿದ್ದು, ಅವಘಡದ ವೇಳೆ ಸ್ಥಳೀಯರಾದ ಆದಂ (58) ಎಂಬವರು ಮೃ#ತಪಟ್ಟಿದ್ದು, ಗಾಯಗೊಂಡ ಇಬ್ಬರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೀಫ್ ಎಂಬವರಿಗೆ ಸೇರಿದ ಮನೆಯ ಪಾಯಿಖಾನೆಗೆ 3 ಮಂದಿ ಗುಂಡಿ ತೋಡುತ್ತಿದ್ದು, ಈ ವೇಳೆ ಆಕಸ್ಮಿಕವಾಗಿ ಮಣ್ಣು ಕುಸಿಯಿತು ಎನ್ನಲಾಗಿದೆ. ಈ ಸಂದರ್ಭ ಆದಂ ಅವರು ಮಣ್ಣಿನಡಿಗೆ ಬಿದ್ದು ಮೃ#ತಪಟ್ಟರೆ, ಇತರ ಇಬ್ಬರು ಕಾರ್ಮಿಕರು ಗಾ#ಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
