ಜಗತ್ತಿನಲ್ಲಿ ವಲಸಿಗರು ವಾಸಿಸಲು ಇಷ್ಟಪಡುವ, ಇಷ್ಟಪಡದ ಟಾಪ್ 10 ನಗರಗಳು ಯಾವುದು ಗೊತ್ತೇ..? ಇಲ್ಲಿದೆ ಪಟ್ಟಿ...

ಜಗತ್ತಿನಲ್ಲಿ ವಲಸಿಗರು ವಾಸಿಸಲು ಇಷ್ಟಪಡುವ, ಇಷ್ಟಪಡದ ಟಾಪ್ 10 ನಗರಗಳು ಯಾವುದು ಗೊತ್ತೇ..? ಇಲ್ಲಿದೆ ಪಟ್ಟಿ...ದುಬೈ, (Headlines  Kannada): ಉದ್ಯೋಗ  ಹರಸಿಕೊಂಡು ಹೋಗುವ ವಲಸಿಗರಿಗೆ ವಾಸಿಸಲು ಮತ್ತು ಉದ್ಯೋಗ ಮಾಡಲು ಯಾವೆಲ್ಲ ಸ್ಥಳಗಳು ಸುರಕ್ಷಿತವಾಗಿವೆ ಎಂಬ ಹೊಸ ಪಟ್ಟಿಯೊಂದು ಬಿಡುಗಡೆಯಾಗಿದೆ.


ಈ ಹೊಸ ಸಮೀಕ್ಷೆಯ ಪ್ರಕಾರ ಮೂರು ಬೇರೆ ಬೇರೆ ಖಂಡಗಳಲ್ಲಿನ 3 ವಿಭಿನ್ನ ನಗರಗಳು ವಲಸಿಗರಿಗೆ ವಾಸಿಸಲು ಮತ್ತು ಕೆಲಸ ಮಾಡಲು ಉತ್ತಮ ಸ್ಥಳಗಳಾಗಿವೆ ಎಂದು ಹೇಳಲಾಗಿದೆ.  ಸ್ಪೇನ್‌ನ (Spain) ವೇಲೆನ್ಸಿಯಾ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ,  ನಂತರದ ಸ್ಥಾನದಲ್ಲಿ ದುಬೈ (Dubai) ಹಾಗು ಮೆಕ್ಸಿಕೋ (Mexico) ನಗರವು ಮೂರನೇ ಸ್ಥಾನದಲ್ಲಿದೆ.


ಟಾಪ್ 50 ನಗರಗಳ ಪೈಕಿ ಜೋಹಾನ್ಸ್​ಬರ್ಗ್​ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ.  ನಂತರದ ಸ್ಥಾನದಲ್ಲಿ ಜರ್ಮನಿಯ ಫ್ರಾಂಕ್‌ಫರ್ಟ್ ಮತ್ತು ಫ್ರೆಂಚ್ ರಾಜಧಾನಿ ಪ್ಯಾರಿಸ್ ಪಡೆದುಕೊನಿಡಿದೆ. ಈ ನಗರಗಳು ಕೂಡ ವಲಸಿಗರಿಗೆ ಹೆಚ್ಚು ಯೋಗ್ಯವಲ್ಲ ಎನ್ನಲಾಗಿದ್ದು, ಮಿಯಾಮಿಯು 12ನೇ ಸ್ಥಾನದಲ್ಲಿದ್ದು, ಇದು ಈ ಪಟ್ಟಿಯಲ್ಲಿ ಅತ್ಯುನ್ನತ ಶ್ರೇಣಿಯನ್ನು ಹೊಂದಿರುವ ಉತ್ತರ ಅಮೆರಿಕಾದ ನಗರವಾಗಿದೆ ಎಂದು ಹೇಳಲಾಗಿದೆ. ನ್ಯೂಯಾರ್ಕ್ 16ನೇ ಸ್ಥಾನದಲ್ಲಿದೆ ಮತ್ತು ಟೊರೊಂಟೊ 19ನೇ ಸ್ಥಾನದಲ್ಲಿದ್ದು,  ಲಂಡನ್ 40ನೇ ಸ್ಥಾನಕ್ಕೇರಿದೆ. 


ಏಷ್ಯಾದ ಇತರೆ ಭಾಗಗಳಲ್ಲಿ ಬ್ಯಾಂಕಾಕ್ ಕಡಿಮೆ ಜೀವನ ವೆಚ್ಚದ ಕಾರಣದಿಂದಾಗಿ ಆರನೇ  ಸ್ಥಾನದಲ್ಲಿದೆ. ಮೆಲ್ಬೋರ್ನ್‌ ಎಂಟನೇ ಸ್ಥಾನವನ್ನು ಪಡೆದಿದೆ. ಸಿಂಗಾಪುರವು ಟಾಪ್ ಹತ್ತರಲ್ಲಿ ಸ್ಥಾನ ಪಡೆದಿದೆ. 181 ದೇಶಗಳು ಅಥವಾ ಪ್ರಾಂತ್ಯಗಳಲ್ಲಿ ವಾಸಿಸುವ 11,970 ವಲಸಿಗರಿಂದ ಅಂತರ್ ರಾಷ್ಟ್ರಗಳು ಮಾಹಿತಿಯನ್ನು ಇದರಲ್ಲಿ ಸಂಗ್ರಹಿಸಲಾಗಿದೆ.


ವಲಸಿಗರಿಗೆ ಹೆಚ್ಚು ಇಷ್ಟಪಟ್ಟಿರುವ ಟಾಪ್ 10 ನಗರಗಳ ಪಟ್ಟಿ ಇಲ್ಲಿದೆ....

-ವೇಲೆನ್ಸಿಯಾ, ಸ್ಪೇನ್: ವಾಸಯೋಗ್ಯ, ಸ್ನೇಹಿ ಮತ್ತು ಕೈಗೆಟುಕುವ ಬೆಲೆಯಲ್ಲಿದೆ. 

-ದುಬೈ, ಯುಎಇ: ಕೆಲಸ ಮತ್ತು ವಿರಾಮಕ್ಕೆ ಉತ್ತಮವಾಗಿದೆ. 

-ಮೆಕ್ಸಿಕೋ ಸಿಟಿ, ಮೆಕ್ಸಿಕೋ: ಸೌಹಾರ್ದ ಮತ್ತು ಕೈಗೆಟುಕುವ ದರದಲ್ಲಿದೆ. ಆದರೆ ಅಸುರಕ್ಷಿತವಾಗಿದೆ. 

-ಲಿಸ್ಬನ್, ಪೋರ್ಚುಗಲ್: ಅದ್ಭುತ ಹವಾಮಾನ ಮತ್ತು ಜೀವನದ ಗುಣಮಟ್ಟವಿದೆ. 

-ಮ್ಯಾಡ್ರಿಡ್, ಸ್ಪೇನ್: ಉತ್ತಮ ವಿರಾಮ ಚಟುವಟಿಕೆಗಳು, ಸ್ವಾಗತಾರ್ಹ ಸಂಸ್ಕೃತಿಯಿದೆ. 

-ಬ್ಯಾಂಕಾಕ್, ಥೈಲ್ಯಾಂಡ್: ಸುರಕ್ಷತೆ. 

-ಬಾಸೆಲ್, ಸ್ವಿಜರ್ಲೆಂಡ್: ವಲಸಿಗರು ಹಣಕಾಸು, ಉದ್ಯೋಗಗಳು, ಜೀವನದ ಗುಣಮಟ್ಟದಲ್ಲಿ ತೃಪ್ತರಾಗಿದ್ದಾರೆ. 

-ಮೆಲ್ಬೋರ್ನ್, ಆಸ್ಟ್ರೇಲಿಯಾ: ಹೊಂದಿಕೊಳ್ಳಲು ಸುಲಭವಾದ ನಗರವಾಗಿದೆ. 

-ಅಬುಧಾಬಿ, ಯುಎಇ: ಅತ್ಯುತ್ತಮ ಆರೋಗ್ಯ ರಕ್ಷಣೆ, ಚಿಂತೆ ಮುಕ್ತ ಅಧಿಕಾರಶಾಹಿ. 

-ಸಿಂಗಾಪುರ: ಸುಲಭ ಆಡಳಿತ, ತೃಪ್ತಿಕರ ಹಣಕಾಸು, ಸುಧಾರಿತ ವೃತ್ತಿ ಭವಿಷ್ಯ.


ವಲಸಿಗರು ಇಷ್ಟಪಡದಿರುವ ಟಾಪ್ 10 ನಗರಗಳು

-ರೋಮ್, ಇಟಲಿ

-ಟೋಕಿಯೊ, ಜಪಾನ್ 

-ವ್ಯಾಂಕೋವರ್, ಕೆನಡಾ 

-ಮಿಲನ್, ಇಟಲಿ 

-ಹ್ಯಾಂಬರ್ಗ್, ಜರ್ಮನಿ 

-ಹಾಂಗ್ ಕಾಂಗ್, ಚೀನಾ 

-ಇಸ್ತಾಂಬುಲ್, ಟರ್ಕಿ 

-ಪ್ಯಾರಿಸ್, ಫ್ರಾನ್ಸ್ 

-ಫ್ರಾಂಕ್‌ಫರ್ಟ್, ಜರ್ಮನಿ 

-ಜೋಹಾನ್ಸ್‌ಬರ್ಗ್, ದಕ್ಷಿಣ ಆಫ್ರಿಕಾ

Ads on article

Advertise in articles 1

advertising articles 2

Advertise under the article