ಮನೆಗೆ ನುಗ್ಗಿ ದಂಪತಿಗೆ ಹ#ಲ್ಲೆಗೈದು ಜೀವಬೆ#ದರಿ#ಕೆಯೊಡ್ಡಿದ ಆರೋಪಿಗಳು: ಏಳು ಮಂದಿ ವಿರುದ್ಧ ಪ್ರಕರಣ ದಾಖಲು

ಮನೆಗೆ ನುಗ್ಗಿ ದಂಪತಿಗೆ ಹ#ಲ್ಲೆಗೈದು ಜೀವಬೆ#ದರಿ#ಕೆಯೊಡ್ಡಿದ ಆರೋಪಿಗಳು: ಏಳು ಮಂದಿ ವಿರುದ್ಧ ಪ್ರಕರಣ ದಾಖಲು


ಕುಂದಾಪುರ (Headlines Kannada): ಏಳು ಮಂದಿಯ ಗುಂಪೊಂದು ಮನೆಯೊಳಗೆ ಅಕ್ರಮವಾಗಿ ಪ್ರವೇಶ ಮಾಡಿ ದಂಪತಿಗೆ ಹ#ಲ್ಲೆಗೈದು ಜೀವ ಬೆದ#ರಿಕೆಯೊಡ್ಡಿದ ಘಟನೆ ಕುಂದಾಪುರ ತಾಲೂಕಿನ ಉಳ್ಳೂರು 74 ಗ್ರಾಮದ ತೆಂಕೊದ್ದು ಎಂಬಲ್ಲಿ ವರದಿಯಾಗಿದೆ.

ತೆಂಕೊದ್ದು ನಿವಾಸಿ ಜಯರಾಮ ಶೆಟ್ಟಿ ಹಾಗೂ ಅವರ ಪತ್ನಿ ರುಕ್ಕಿಣಿ ಹಲ್ಲೆಗೊಳಗಾದ ದಂಪತಿಯಾಗಿದ್ದಾರೆ.. ಇವರ ಮೇಲೆ ಉಳ್ಳೂರಿನ ಪ್ರಸಾದ ಶೆಟ್ಟಿ, ಕುಮಾರ್ ಶೆಟ್ಟಿ, ಸಂತೋಷ ಕೊಠಾರಿ ಹಾಗೂ ಇತರ 4 ನಾಲ್ವರು ಹ#ಲ್ಲೆ ಗೈದಿದ್ದಾರೆ ಎಂದು ದೂರಲಾಗಿದೆ. 

ಜಯರಾಮ ಶೆಟ್ಟಿ ಹಾಗೂ ಆರೋಪಿಗಳ‌ ಮಧ್ಯೆ ವೈಮನಸ್ಸಿದ್ದು, ಇದೇ ವಿಚಾರದಲ್ಲಿ ಪ್ರಸಾದ್ ಶೆಟ್ಟಿ ಎಂಬಾತ ಇತರೆ ಆರು ಮಂದಿಯ ಜೊತೆಗೂಡಿ ಡಿ.4 ರಂದು ರಾತ್ರಿ ಜಯರಾಮ ಶೆಟ್ಟಿ ಅವರನ್ನು ಕೊ#ಲೆ ಮಾಡುವ ಉದ್ದೇಶದಿಂದ ಅವರ ಮನೆಯೊಳಗೆ ಅಕ್ರಮವಾಗಿ ಪ್ರವೇಶ ಮಾಡಿ ಹ#ಲ್ಲೆ ಮಾಡಿದ್ದಾನೆ. ಈ ವೇಳೆ ಜಯರಾಮ ಶೆಟ್ಟಿ ಬೊಬ್ಬೆ ಹಾಕಿದ್ದು, ಆಗ ಮನೆಯಲ್ಲಿ ಇದ್ದವರು ಓಡಿ ಬಂದಿದ್ದಾರೆ. ತಡೆಯಲು ಬಂದ ಜಯರಾಮ್ ಶೆಟ್ಟಿ ಅವರ ಪತ್ನಿಗೂ ಆರೋಪಿಗಳು ಹ#ಲ್ಲೆ ಮಾಡಿದ್ದಾರೆ.‌ ಬಳಿಕ‌ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article