ಬೆಂಗಳೂರಿನಲ್ಲಿ ಸ್ವಿಗ್ಗಿ ಫುಡ್ ಡೆಲಿವರಿ ಬ್ಯಾಗ್‍ಗಳಲ್ಲಿ ಡ್ರ#ಗ್ಸ್ ಮಾರಾಟ; ಇಬ್ಬರನ್ನು ಬಂಧಿಸಿದ CCB ಪೊಲೀಸರು

ಬೆಂಗಳೂರಿನಲ್ಲಿ ಸ್ವಿಗ್ಗಿ ಫುಡ್ ಡೆಲಿವರಿ ಬ್ಯಾಗ್‍ಗಳಲ್ಲಿ ಡ್ರ#ಗ್ಸ್ ಮಾರಾಟ; ಇಬ್ಬರನ್ನು ಬಂಧಿಸಿದ CCB ಪೊಲೀಸರು




ಬೆಂಗಳೂರು(Headlines Kannada): ನಗರದ ವೈಟ್‌ಫೀಲ್ಡ್ ಸುತ್ತಮುತ್ತಲಿನ ಸ್ವಿಗ್ಗಿ ಹಾಗೂ ಜೊಮ್ಯಾಟೋ ಫುಡ್ ಡೆಲಿವರಿ ಸೋಗಿನಲ್ಲಿ ಡ್ರ#ಗ್ಸ್ ಪೆ#ಡ್ಲಿಂಗ್ ತೊಡಗಿದ್ದ ಬಿಹಾರ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು 4 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.

ಬಂಧಿತರಿಂದ 4 ಲಕ್ಷ ಮೌಲ್ಯದ 3 ಕೆ.ಜಿ ಗಾಂ#ಜಾ ಹಾಗೂ 14 ಗ್ರಾಂ ತೂಕದ 12 L#SD ಸ್ಟ್ರಿಪ್ ಮೊಬೈಲ್, ದ್ವಿಚಕ್ರ ವಾಹನ ಇತರೇ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.

ಸ್ವಿಗ್ಗಿ ಡೆಲಿವರಿ ಬ್ಯಾಗ್‍ನಲ್ಲಿ ಗಾಂ#ಜಾ ಸಾಗಾಟದ ಅನುಮಾನ ಬಂದ ಹಿನ್ನೆಲೆ ಕಾರ್ಯಚರಣೆ ನಡೆಸಿದ ಬೆಂಗಳೂರು CCB ಪೊಲೀಸರು ವೈಟ್ ಫೀಲ್ಡ್ ಮತ್ತು ಯಲಹಂಕದಲ್ಲಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇದರಿಂದಾಗಿ ಗಾಂ#ಜಾ ಡೆಲಿವರಿ ಬ್ಯಾಗ್‍ನಲ್ಲಿ ಸಾಗಾಟ ಮಾಡಿ ಮಾರಾಟ ಮಾಡುವ ಜಾಲ ಬಯಲಾಗಿದೆ. 

ಬಂಧಿತರಿಬ್ಬರೂ ಸ್ವಿಗ್ಗಿ ಡೆಲಿವರಿ ಹೆಸರಲ್ಲಿ ಗ್ರಾಹಕರಿಗೆ ಗಾಂ#ಜಾವನ್ನು ಸರಬರಾಜು ಮಾಡುತ್ತಿದ್ದರು. ಬಿಹಾರದಿಂದ ಬೆಂಗಳೂರಿಗೆ ವಿವಿಧ ಬಗೆಯ ಡ್ರ#ಗ್ಸ್ ತಂದು ಸ್ವಿಗ್ಗಿ ಡೆಲಿವರಿ ಬ್ಯಾಗ್‍ಗಳಲ್ಲಿ  ಫುಡ್ ಪ್ಯಾಕೆಟ್‌ಅನ್ನು ಡೆಲವರಿ ಮಾಡುವ ರೀತಿ ಯಾರಿಗೂ ಅನುಮಾನ ಬಾರದಂತೆ ತುಂಬಿಕೊಂಡು ಅಪಾರ್ಟ್ಮೆಂಟ್‌ಗಳಲ್ಲಿ ನಡೆಯುವ ಪಾರ್ಟಿಗಳು, ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪೂರೈಕೆ ಮಾಡುತ್ತಿದ್ದರು ಎಂಬ ಕುರಿತು ತನಿಖೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಬಂಧಿತರಿಂದ 10 ಲಕ್ಷ ಮೌಲ್ಯದ ಗಾಂ#ಜಾ ಮತ್ತು MD#MA ಮಾತ್ರೆಗಳನ್ನು ವಶಕ್ಕೆ ಪಡೆಯಲಾಗಿದೆ. ನಗರದಲ್ಲಿ ಮತ್ತಷ್ಟು ಇದೇ ರೀತಿಯ ತಂಡಗಳು ಕೆಲಸ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಶಂಕೆ ವ್ಯಕ್ತವಾಗಿದ್ದು, ತನಿಖೆ ತೀವ್ರಗೊಳಿಸಿದ್ದಾರೆ. 

Ads on article

Advertise in articles 1

advertising articles 2

Advertise under the article