ಮಹಿಳೆಯರು ಹಿಜಬ್ ಧರಿಸಿದರು, ಬಿ#ಕಿನಿ ಹಾಕಿದರೂ ಇವರಿಗೆ ಸಮಸ್ಯೆಯೇ : ನುಸ್ರತ್ ಜಹಾನ್

ಮಹಿಳೆಯರು ಹಿಜಬ್ ಧರಿಸಿದರು, ಬಿ#ಕಿನಿ ಹಾಕಿದರೂ ಇವರಿಗೆ ಸಮಸ್ಯೆಯೇ : ನುಸ್ರತ್ ಜಹಾನ್ಮುಂಬೈ(Headlines Kannada): ದೀಪಿಕಾ ಪಡುಕೋಣೆ ಹಾಗು ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ವಿರುದ್ಧ ವಿವಾದ ಸೃಷ್ಟಿಸಲಾಗಿದ್ದು, ಈ ಸಿನಿಮಾದ ಒಂದು ಹಾಡಿನಲ್ಲಿ ಕೇಸರಿ ಬಣ್ಣದ ಬಿ#ಕಿನಿಯನ್ನು ಹಾಕಿಕೊಂಡು ದೀಪಿಕಾ ಪಡುಕೋಣೆ ಡ್ಯಾನ್ಸ್ ಮಾಡಿದ್ದಾರೆ ಎಂಬ ವಿವಾದ ಧರ್ಮದ ವಿಚಾರವಾಗಿ ಈಗ ಸದ್ದು ಮಾಡುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್,   ಇದೊಂದು ವ್ಯವಸ್ಥಿತ ಷಡ್ಯಂತರವಾಗಿದ್ದು, ಜನರಲ್ಲಿ ಧಾರ್ಮಿಕವಾದ ದ್ವೇಷವನ್ನು ಬಿತ್ತುವ ಕೆಲಸ ಆಗುತ್ತಿದೆ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿರುವ ನುಸ್ರತ್ ಜಹಾನ್, ಇದು ಯಾರದೋ, ಯಾರ ಸಿದ್ಧಾಂತದ ಬಗ್ಗೆ ಅಲ್ಲ. ಇದು ಅಧಿಕಾರದಲ್ಲಿರುವ 1 ಪಕ್ಷದ ಜನರ ಗುಂಪಿನವರು ಮಾಡುತ್ತಿರುವ ಯೋಜಿತ ಪಿತ್ತೂರಿಯಾಗಿದೆ. ಇಲ್ಲಿ ಅವರು ಏನೋ ಮಾಡಲು ಹೋರಟಿದ್ದಾರೆ, ಈ ವಿಚಾರದಲ್ಲಿ ಆಧ್ಯಾತ್ಮಿಕ, ಧಾರ್ಮಿಕವಾದ ವಿಚಾರಗಳನ್ನು ಅವರು ತರುತ್ತಿದ್ದಾರೆ. ಇದಕ್ಕೆ BJP ಸರ್ಕಾರದ ಬೆಂಬಲ ಇದೆ. ಇದರ ಜೊತೆಗೆ ಅವರು ಸಂಸ್ಕೃತಿಯ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದಾರೆ. ನಮ್ಮಲ್ಲಿ ಮಹಿಳೆಯರು ಬಿ#ಕಿನಿ ಧರಿಸಿದರು ಸಮಸ್ಯೆ, ಹಿಜಾಬ್ ಧರಿಸಿದರು ಸಮಸ್ಯೆ, ಅವರಿಗೆ ಎಲ್ಲದರಲ್ಲೂ ಸಮಸ್ಯೆಯೇ ಎದ್ದು ಕಾಣುತ್ತಿದೆ ಎಂದು ಹೇಳಿದ್ದಾರೆ.

ಮಹಿಳೆಯರು ಹಿಜಾಬ್ ಧರಿಸಿದರು ಸಮಸ್ಯೆ, ಬಿಕಿನಿ ಧರಿಸಿದರೂ ಅವರಿಗೆ ಸಮಸ್ಯೆ ಇದೆ.  ಭಾರತದ ಹೊಸ ಯುಗದ ಮಹಿಳೆಯರಿಗೆ ಏನು ಧರಿಸಬೇಕೆಂದನ್ನು ಅವರೇ ಹೇಳುತ್ತಿದ್ದಾರೆ ಎಂದು ನುಸ್ರತ್ ಜಹಾನ್ ಹೇಳಿದರು. 

ಮಹಿಳೆಯರು ಏನು ಧರಿಸಬೇಕು, ಏನು ತಿನ್ನಬೇಕು, ಹೇಗೆ ಮಾತನಾಡಬೇಕು, ಹೇಗೆ ನಡೆಯಬೇಕು, ಶಾಲೆಯಲ್ಲಿ ಏನನ್ನು ಕಲಿಯಬೇಕು, ಟಿವಿಯಲ್ಲಿ ಏನನ್ನು ನೋಡಬೇಕು ಎಂದು ಹೇಳುವ ಮೂಲಕ ಅವರು ಮಹಿಳೆಯರನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ನುಸ್ರತ್ ಜಹಾನ್, ಇವರು ಹೊಸ, ವಿಕಸನಗೊಂಡ ಭಾರತ ಎಂದು ಕರೆಯುತ್ತಾರೆ. ಆದರೆ ಇದನೆಲ್ಲ ನೋಡಿದರೆ ಇದು ತುಂಬಾ ಭ#ಯಾನಕವಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಅ#ಪಾಯಕಾರಿ ವರ್ತನೆ ಎಲ್ಲಿಗೆ ಕೊಂಡೊಯ್ಯುತ್ತದೆ ಎಂದು ನನಗೆ ತಿಳಿದಿಲ್ಲ ತಿಳಿಸಿದರು.

Ads on article

Advertise in articles 1

advertising articles 2

Advertise under the article