
ಸುನಿಲ್ ಕುಮಾರ್ ಅತೀ ಭ್ರಷ್ಟ, ದುರಹಂಕಾರಿ; ಸೋಲುವ ಭೀತಿಯಿಂದ ನಮ್ಮ ಕಾರ್ಯಕರ್ತರಿಗೆ ಬೆ#ದರಿಕೆ, ದೌರ್ಜನ್ಯ: ಗುಡುಗಿದ ಪ್ರಮೋದ್ ಮುತಾಲಿಕ್
ಉಡುಪಿ (Headlines Kannada): ಹಿಂದುತ್ವಕ್ಕಾಗಿ ಮತ್ತು ಹಿಂದೂ ಕಾರ್ಯಕರ್ತರ ರಕ್ಷಣೆಗಾಗಿ ಕಾರ್ಕಳದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತೇನೆ. ಕಾರ್ಕಳದಲ್ಲಿ ನಾನು ಸ್ಪರ್ಧೆ ಮಾಡುತ್ತಿರುವುದು ಸಚಿವ ಸುನಿಲ್ ಕುಮಾರ್'ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಆತನಿಗೆ ಸೋಲುವ ಭೀತಿ ಕಾಡುತ್ತಿದೆ. ಅದಕ್ಕಾಗಿ ನಮ್ಮ ಕಾರ್ಯಕರ್ತರಿಗೆ ಬೆ#ದರಿಕೆ ಹಾಗೂ ಅನಗತ್ಯ ಕಿರು#ಕುಳ ನೀಡುವ ಕೆಲಸ ಆಗುತ್ತಿದೆ ಎಂದು ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಸುನಿಲ್ ಕುಮಾರ್ ವಿರುದ್ಧ ಆರೋಪಗಳ ಸುರಿಮಳೆಗೈದರು. ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ಹಾಕಿ ಹೆದರಿಸುವ ಕೆಲಸ ಆಗುತ್ತಿದೆ. ಇದರ ಅರ್ಥ ಸುನಿಲ್ ಕುಮಾರ್'ಗೆ ಸೋಲುವ ಭಯ ಶುರುವಾಗಿದೆ. ಆತ ಹಿಂದುತ್ವ, ಅಭಿವೃದ್ಧಿ ಪರ ಕೆಲಸ ಮಾಡುತ್ತಿದ್ದರೆ, ಈಗ ಹೆದರುವ ಅವಶ್ಯಕತೆ ಇರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ನನ್ನ ಹೋರಾಟ ಬಿಜೆಪಿ ವಿರುದ್ಧ ಅಲ್ಲ, ಭ್ರಷ್ಟಾಚಾರದ ವಿರುದ್ಧ. ಕಾರ್ಕಳ ಗೋವು ಹ#ತ್ಯೆ ಹಾಗೂ ಗೋಮಾಂಸ ರಫ್ತಿನಲ್ಲಿ ಮುಂಚೂಣಿಯಲ್ಲಿರುವ ಕ್ಷೇತ್ರವಾಗಿದೆ. ಸಚಿವ ಸುನಿಲ್ ಕುಮಾರ್ ಅತೀ ಭ್ರಷ್ಟ ಹಾಗೂ ದುರಹಂಕಾರಿ. ಮುಂದಿನ ದಿನಗಳಲ್ಲಿ ಒಂದೊಂದಾಗಿ ಆತನ ಭ್ರಷ್ಟಾಚಾರವನ್ನು ಬಯಲಿಗೆಲಿಯುತ್ತೇನೆ ಎಂದು ಗುಡುಗಿದರು.