ಇನ್ನೊಂದು ಧರ್ಮ ದ್ವೇ#ಷಿಸುವ ಸಿ.ಟಿ.ರವಿಯಂಥ ಹಿಂದೂ ನಾನಲ್ಲ, ನಾನೊಬ್ಬ ನಿಜವಾದ ಹಿಂದೂ: ಸಿದ್ದರಾಮಯ್ಯ
ಬೆಳ್ತಂಗಡಿಯಲ್ಲಿ ಮಾಜಿ ಶಾಸಕ ವಸಂತ ಬಂಗೇರಾ ಅವರ ಜೀವನ ಚರಿತ್ರೆ ಪುಸ್ತಕ ಬಿಡುಗಡೆ ಹಾಗು ಕಬಡ್ಡಿ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿ.ಟಿ.ರವಿಗಿಂತ ಉತ್ತಮ ಹಿಂದೂ ನಾನು. ಆದರೆ, ಇನ್ನೊಂದು ಧರ್ಮ ದ್ವೇ#ಷಿಸುವ ಸಿ.ಟಿ.ರವಿಯಂಥ ಹಿಂದೂ ಖಂಡಿತ ಅಲ್ಲ ಎಂದು ತಿಳಿಸಿದರು.
ಸಂವಿಧಾನದ ಬಗ್ಗೆ ಗೌರವ ಇಟ್ಟುಕೊಳ್ಳದವರು ರಾಜಕಾರಣಿ ಆಗಬಾರದು. ತನ್ನ ಧರ್ಮದ ಜೊತೆಜೊತೆ ಎಲ್ಲ ಧರ್ಮವನ್ನು ಗೌರವಿಸಬೇಕು. ಭಾರತ ದೇಶ ಯಾವುದೋ ಒಂದು ಧರ್ಮ, ಜಾತಿಯ ದೇಶ ಖಂಡಿತ ಅಲ್ಲ, ನಾವು ಭಾರತೀಯರು ಎನ್ನುವುದು ಮೊದಲು ನಮ್ಮ ತಲೆಯಲ್ಲಿ ಇರಬೇಕು ಎಂದ ಸಿದ್ದರಾಮಯ್ಯ, ಇತರ ಧರ್ಮ, ಜಾತಿಗಳ ಬಗ್ಗೆ ಮಾತನಾಡಿದರೆ ಸಿ.ಟಿ. ರವಿಯಂಥ ಮ#ತಾಂಧ ನನಗೆ ಮುಸಲ್ಮಾನರ ಹೆಸರನ್ನ ಇಡುತ್ತಾನೆ. ನನ್ನ ತಂದೆ ತಾಯಿ ನನಗೆ ಸಿದ್ದರಾಮಯ್ಯ ಅಂಥ ಒಳ್ಳೆಯ ಹೆಸರಿಟ್ಟಿದ್ದಾರೆ. ಸಿದ್ರಾಮುಲ್ಲಾ ಖಾನ್ ಎಂದು ಹೇಳಲು ಇವನ್ಯಾವ ಗಿರಾಕಿ ಎಂದು ಸಿಟಿ ರವಿಗೆ ಚಾಟಿ ಬೀಸಿದರು.
ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು ಕೊಂ#ದವರಿಂದ ನಾವು ಪಾಠ ಕಲಿಯಬೇಕಾ? ಹಂ#ತಕ ನಾಥೂರಾಮ್ ಗೋಡ್ಸೆಗೆ ಗುಡಿ ಕಟ್ಟಿಸಿ ಪೂಜೆ ಮಾಡುತ್ತಾರೆ. ಯುವಕರಲ್ಲಿ ಇವರು ಜಾತಿ ಧರ್ಮದ ಡೇಂಜರ್ ಅ#ಫೀಮ್ ಹುಟ್ಟು ಹಾಕಿದ್ದಾರೆ. ಮುಂದಿನ ಚುನಾವಣೆಯಲ್ಲಿ ರಾಜಕೀಯ ಜಗ್ಗಾಟದಲ್ಲಿ ಕೋ#ಮುವಾದಿ BJP ಸೋಲಿಸಬೇಕು. ಇಲ್ಲದೇ ಇದ್ದರೆ ಈ ರಾಜ್ಯ ಮತ್ತು ದೇಶಕ್ಕೆ ಯಾವುದೇ ಭವಿಷ್ಯ ಇಲ್ಲ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದದು.