ಕೇವಲ 'ಶಾಂಪೂ' ಕಾರಣಕ್ಕಾಗಿ ಮುರಿದುಬಿದ್ದ ಮದುವೆ! ವರನಿಗೆ ವಧು ಕಳುಹಿಸಿದ ವಾಟ್ಸಾಪ್ ಸಂದೇಶ ಏನು..?
ಇಂಥದೊಂದು ಘಟನೆ ನಡೆದಿರುವುದು ಅಸ್ಸಾಮಿನ ಬಾರ್ಪೇಟಾ ಜಿಲ್ಲೆಯಲ್ಲಿ. ವರನ ಕಡೆಯಿಂದ ವಧುವಿಗೆ ಉಡುಗೊರೆಯಾಗಿ ನೀಡಲಾಗಿದ್ದ ಶಾಂಪೂ ಮತ್ತು ಇತರ ವಸ್ತುಗಳು ಕಳಪೆ ಗುಣಮಟ್ಟದ್ದು ಎಂದು ಹೇಳಿದ್ದಕ್ಕೆ ಮದುವೆಯೊಂದು ಮುರಿದು ಬಿದ್ದಿದೆ.
ಗುವಾಹಟಿ ಮೂಲದ ಇಂಜಿನಿಯರ್ಗೆ ವಿವಾಹ ನಿಶ್ಚಯವಾಗಿತ್ತು. ಜುರಾನ್ ಎಂದರೆ ಮದುವೆಯ ದಿನದ 1 ಅಥವಾ 2 ದಿನಗಳ ಮೊದಲು ಆಚರಿಸಲಾಗುವ ಪದ್ಧತಿ ಭಾಗವಾಗಿ ವಧುವಿಗೆ ಹಲವು ಉಡುಗೊರೆಗಳನ್ನು ನೀಡಲಾಗಿತ್ತು. ಹೀಗೆ ನೀಡಲಾದ ಉಡುಗೊರೆಗಳಲ್ಲಿ ಶಾಂಪೂ ಸೇರಿದಂತೆ ಇತರ ವಸ್ತುಗಳು ಕಳಪೆ ಗುಣಮಟ್ಟದ್ದು ಎಂದು ಸಿಟ್ಟಾಗಿ ವರನಿಗೆ ವಧು ವಾಟ್ಸ್ಆ್ಯಪ್ ಸಂದೇಶ ರವಾನಿಸಿದ್ದಳೆನ್ನಲಾಗಿದೆ.
ಇದರಿಂದ ಇಂಜಿನಿಯರ್ ಆಗಿದ್ದ ವರ ಸಿಟ್ಟಾಗಿದ್ದ. ವಧುವಿನ ವರ್ತ#ನೆಯಿಂದ ಸಿಡಿಮಿಡಿಗೊಂಡು ಮರು ದಿನ ನಡೆಯಬೇಕಿದ್ದ ಮದುವೆಯನ್ನೇ ವರನು ರದ್ದು ಮಾಡಿದ್ದಾನೆ. ಡಿಸೆಂಬರ್ 14ರಂದು ರಾತ್ರಿ ಏಕಾಏಕಿ ವರ ಈ ನಿರ್ಧಾರ ತೆಗೆದುಕೊಂಡಿದ್ದಾನೆ ಎನ್ನಲಾಗಿದೆ.
ಮದುವೆಗೆ ಕೇವಲ 6 ಗಂಟೆಗಳು ಮಾತ್ರ ಸಮಯ ಇತ್ತು. ಆದರೆ, ವರ ರಾತ್ರೋರಾತ್ರಿ ಮದುವೆ ಆಗುವುದಿಲ್ಲ ಎಂದು ಸಿಟ್ಟಾದ ಕಾರಣ ವರನ ಈ ನಿರ್ಧಾರದಿಂದ ವಧುವಿನ ಕುಟುಂಬ ಆಘಾತಕ್ಕೊಳಗಾಯಿತು. ಮದುವೆಗಾಗಿ ವರನನ್ನು ಎಷ್ಟೇ ಸಂತೈಸಿದರೂ ಅದು ಫಲ ನೀಡದಾಗ ವಧುವಿನ ಕುಟುಂಬ ಪೊಲೀಸ್ ಮೆಟ್ಟಿಲೇರಿದೆ. ಈ ಬಗ್ಗೆ ಪೊಲೀಸರು ದೂರು ದಾಖಲಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.