ಸಾಲ ಹಿಂದಿರುಗಿಸದಿದ್ದಕ್ಕೆ ರಿಕ್ಷಾ ಚಾಲಕನ ಪತ್ನಿ ಮೇಲೆ ಅ#ತ್ಯಾ#ಚಾರ ನಡೆಸಿದ ಫೈನಾನ್ಷಿಯರ್!

ಸಾಲ ಹಿಂದಿರುಗಿಸದಿದ್ದಕ್ಕೆ ರಿಕ್ಷಾ ಚಾಲಕನ ಪತ್ನಿ ಮೇಲೆ ಅ#ತ್ಯಾ#ಚಾರ ನಡೆಸಿದ ಫೈನಾನ್ಷಿಯರ್!


ಅಹಮದಾಬಾದ್(Headlines Kannada): ಪಡೆದ ಸಾಲ ಹಿಂದಿರುಗಿಸಲಿಲ್ಲ ಎಂಬ ಕಾರಣಕ್ಕೆ ರಿಕ್ಷಾ ಚಾಲಕನೊಬ್ಬನ ಪತ್ನಿಯ ಮೇಲೆ ಅ#ತ್ಯಾ#ಚಾರ ಎಸಗಿರುವ ಘಟನೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದಿದೆ.

ಅಜಿತ್‌ಸಿನ್ಹ್ ಚಾವ್ಡಾ ಎಂಬ ಖಾಸಗಿ ಫೈನಾನ್ಷಿಯರ್ ಹಾಗು ಅವರ ಬ್ಯುಸಿನೆಸ್ ಪಾಲುದಾರರಿಂದ ರಿಕ್ಷಾ ಚಾಲಕ 50 ಸಾವಿರ ರೂ.ಸಾಲ ಪಡೆದಿದ್ದರು. ಹೀಗಾಗಿ ಅ#ತ್ಯಾ#ಚಾರ ಸಂತ್ರಸ್ತೆಯ ಪತಿ ಪ್ರತಿದಿನ ಬಡ್ಡಿ ರೂಪದಲ್ಲಿ 1,500 ರೂ ಪಾವತಿಸುವಂತೆ ಚಾವ್ಡಾ ಹೇಳಿದ್ದ. ಆದರೆ ರಿಕ್ಷಾ ಚಾಲಕ ಹಣ ಪಾವತಿಸಲು ಸಾಧ್ಯವಾಗದಾಗ ಚಾವ್ಡಾ ಅವರ ಮನೆಗೆ ಬಲವಂತವಾಗಿ ನುಗ್ಗಿ ಆತನ ಪತ್ನಿ ಮೇಲೆ ಅ#ತ್ಯಾ#ಚಾರ ಎಸಗಿದ್ದಾನೆ, ಜೊತೆಗೆ ಈ ಕೃ#ತ್ಯವನ್ನು ಚಿ#ತ್ರೀಕರಿಸಿದ್ದಾನೆ ಎನ್ನಲಾಗಿದೆ.

ನಂತರ ಚಾವ್ಡಾ ಆಟೋ ರಿಕ್ಷಾ ಚಾಲಕನ ಹೆಂಡತಿಯನ್ನು ಬ#ಲವಂತವಾಗಿ ದೇವಸ್ಥಾನಕ್ಕೆ ಎಳೆದೊಯ್ದು, ಅವಳ ಹಣೆಗೆ 'ಸಿಂಧೂರ' ಹಚ್ಚಿ ಅವಳನ್ನು ತನ್ನ ಹೆಂಡತಿ ಎಂದು ಘೋಷಿಸಿದ್ದಾನೆ. ಬಳಿಕ ರಿಕ್ಷಾ ಚಾಲಕನ ಮನೆಗೆ ಆಗಾಗ್ಗೆ ಬ#ಲವಂತವಾಗಿ  ಬಂದು ಆಕೆಯ ಮೇಲೆ ಅ#ತ್ಯಾ#ಚಾರ ಎಸಗುತ್ತಿದ್ದ ಎಂದು ಐಎಎನ್‌ಎಸ್ ವರದಿ ತಿಳಿಸಿದೆ.

ಅ#ತ್ಯಾ#ಚಾ#ರಕ್ಕೊಳಗಾದ ಮಹಿಳೆ ಈ ಬಗ್ಗೆ ದೂರನ್ನು ರಾಜ್‌ಕೋಟ್ ತಾಲೂಕು ಪೊಲೀಸರಲ್ಲಿ ನೀಡಲು ಹೋದಾಗ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ನಂತರ ಆಕೆ ನೇರ ನ್ಯಾಯಾಲಯದ ಮೊರೆ ಹೋಗಿದ್ದು, ನಂತರ ನ್ಯಾಯಾಲಯ ಆಕೆ ವಿರುದ್ಧದ ಅ#ತ್ಯಾ#ಚಾ#ರದ ದೂರು ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿದೆ.

ಇದೆಲ್ಲ ಆದ ನಂತರ ಅಜಿತ್‌ಸಿನ್ಹ್ ಚಾವ್ಡಾ, ರಿಕ್ಷಾ ಚಾಲಕ ಹಾಗು ಆಕೆಯ ಪತ್ನಿಯನ್ನು ಭೇಟಿಯಾಗಿ ಹಣದ ಆ#ಮಿಷ ಒಡ್ಡಿದ್ದಾನೆ. ಈ ವೇಳೆ ಚಾವ್ಡಾ ಮತ್ತು ಅವನ ಜೊತೆಗಿದ್ದ ಇಬ್ಬರು ಸಹಚರರು ಮಹಿಳೆ ಮೇಲೆ ಚಾ#ಕುವಿನಿಂದ ಹ#ಲ್ಲೆ ನಡೆಸಿದ್ದು, ಇದರಿಂದಾಗಿ ಆಕೆಯ ಕೈಗೆ ಗಾಯವಾಗಿದೆ. ಈ ಎಲ್ಲ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ 3 ಮಂದಿ  ಆರೋಪಿಗಳ ವಿರುದ್ಧ ದೂರು ದಾಖಲಿಸಲಾಗಿದೆ.

Ads on article

Advertise in articles 1

advertising articles 2

Advertise under the article