ಜಮಖಂಡಿ: ಲವ್ ಮ್ಯಾರೇಜ್ ಆಗಿದ್ದಕ್ಕೆ ಯುವಕನ್ನು ಕೊಂ#ದ ಯುವತಿಯ ತಂದೆ !

ಜಮಖಂಡಿ: ಲವ್ ಮ್ಯಾರೇಜ್ ಆಗಿದ್ದಕ್ಕೆ ಯುವಕನ್ನು ಕೊಂ#ದ ಯುವತಿಯ ತಂದೆ !

 ಬಾಗಲಕೋಟೆ(Headlines Kannada): ತನ್ನ ಮಗಳನ್ನು ಲವ್ ಮ್ಯಾರೇಜ್ ಆಗಿದ್ದಕ್ಕೆ ಸಿಟ್ಟಿನಿಂದ ಯುವಕನನ್ನು ಯುವತಿಯ ತಂದೆ ಹಾಗೂ ಮೂವರು ಸೇರಿಕೊಂಡು ಶನಿವಾರ ತಡರಾತ್ರಿ ಕೊ#ಲೆ ಮಾಡಿರುವ ಘಟನೆ ಜಮಖಂಡಿ ತಾಲ್ಲೂಕಿನ ಟಕ್ಕೋಡದಲ್ಲಿ ನಡೆದಿದೆ.

ಕೊ#ಳೆಯೆಯಾದ ಯುವಕನನ್ನು ಭುಜಬಲಿ ಕರ್ಜಗಿ (34)  ಎಂದು ಗುರುತಿಸಲಾಗಿದೆ. ಈತ ಜೈನ ಸಮುದಾಯಕ್ಕೆ ಸೇರಿದವನಾಗಿದ್ದಾನೆ. ಯುವತಿ ಕ್ಷತ್ರಿಯ ಸಮಾಜಕ್ಕೆ ಸೇರಿದವಳಾಗಿದ್ದಾಳೆ.

ಕ್ಷತ್ರಿಯ ಸಮಾಜಕ್ಕೆ ಸೇರಿದ ತಮ್ಮನಗೌಡ ಪಾಟೀಲ ಪುತ್ರಿ ಭಾಗ್ಯಶ್ರೀ ಎಂಬಾಕೆಯನ್ನು  ಭುಜಬಲಿ ಕರ್ಜಗಿ ಪ್ರೀತಿಸಿ ಕೆಲ ತಿಂಗಳ ಹಿಂದೆ ರಿಜಿಸ್ಟರ್ ಮದುವೆಯಾಗಿದ್ದ ಎನ್ನಲಾಗಿದೆ.

ಟಕ್ಕೋಡದಲ್ಲಿ ಶನಿವಾರ ರಾತ್ರಿ ಹನುಮಾನ ದೇವರ ಪಲ್ಲಕ್ಕಿ ಉತ್ಸವ ಮುಗಿಸಿ ಸಹೋದರನ ಪುತ್ರ ಸುಮೇದ್ ಎಂಬಾತನೊಂದಿಗೆ ಭುಜಬಲಿ ಕರ್ಜಗಿ ದ್ವಿಚಕ್ರ ವಾಹನದಲ್ಲಿ ಹೋಗಲು ಮುಂದಾದಾಗ ಕಾರದ ಪುಡಿ ಎರಚಲಾಗಿದೆ.

ಈ ವೇಳೆ ಸುಮೇದ್ ಓಡಿ ತಪ್ಪಿಸಿಕೊಂಡಿದ್ದು, ಭುಜಬಲಿಯನ್ನು ಚಾ#ಕುವಿನಿಂದ ಇ#ರಿದು ಕೊ#ಲೆ ಮಾಡಲಾಗಿದೆ. ಈ ಬಗ್ಗೆ ಸಾವಳಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ತಮ್ಮನಗೌಡ ಪಾಟೀಲನನ್ನ ಪೊಲೀಸರು ಬಂಧಿಸಿದ್ದಾರೆ. ಉಳಿದ ಆರೋಪಿಗಳಿಗೆ ಶೋಷ ಕಾರ್ಯ ನಡೆಯುತ್ತಿದೆ. 

Ads on article

Advertise in articles 1

advertising articles 2

Advertise under the article