10ನೇ ತರಗತಿಯ ವಿದ್ಯಾರ್ಥಿಗೆ 30 ಸೆಕೆಂಡುಗಳಲ್ಲಿ 27 ಬಾರಿ ಇರಿದ ಅಪ್ರಾಪ್ತರು!

10ನೇ ತರಗತಿಯ ವಿದ್ಯಾರ್ಥಿಗೆ 30 ಸೆಕೆಂಡುಗಳಲ್ಲಿ 27 ಬಾರಿ ಇರಿದ ಅಪ್ರಾಪ್ತರು!

ಭೋಪಾಲ್: ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಸ್ನೂಕರ್ ಕ್ಲಬ್‌ನಲ್ಲಿ ಅಪ್ರಾಪ್ತರು ಸೇರಿಕೊಂಡು 10 ನೇ ತರಗತಿಯ ವಿದ್ಯಾರ್ಥಿಗೆ 30 ಸೆಕೆಂಡುಗಳಲ್ಲಿ 27 ಬಾರಿ ಇರಿದಿದ್ದಾರೆ.

ಇಬ್ಬರು ಅಪ್ರಾಪ್ತರು ಕ್ಲಬ್‌ಗೆ ಪ್ರವೇಶಿಸಿ, ವಿದ್ಯಾರ್ಥಿ ಮೇಲೆ ಆಕ್ರಮಣ ಮಾಡುತ್ತಾರೆ. ಅರ್ಧ ನಿಮಿಷದಲ್ಲಿ 16ರ ಬಾಲಕನಿಗೆ 27 ಬಾರಿ ಚಾಕುವಿನಿಂದ ಇರಿದಿದ್ದಾರೆ. ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ. 

ಇರಿತಕ್ಕೊಳಗಾದ ವಿದ್ಯಾರ್ಥಿ ತೀವ್ರವಾಗಿ ಗಾಯಗೊಂಡಿದ್ದಾರೆ. ಆತನ ಮಣಿಕಟ್ಟಿನ ಮೇಲೆ 10 ಕ್ಕೂ ಹೆಚ್ಚು ಆಳವಾದ ಗಾಯಗಳಾಗಿವೆ. ಕೈಯಲ್ಲಿ ಎರಡು ಬೆರಳುಗಳು ತುಂಡಾಗಿವೆ. ಭುಜ ಮತ್ತು ಬೆನ್ನಿಗೂ ಗಂಭೀರ ಗಾಯಗಳಾಗಿವೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಯಾಳು ವಿದ್ಯಾರ್ಥಿ ಗೌತಮ್, ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ. ಸ್ನೂಕರ್ ಕ್ಲಬ್‌ನಲ್ಲಿ ವಾಸವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಸಹ 16 ವರ್ಷದ 10 ನೇ ತರಗತಿ ವಿದ್ಯಾರ್ಥಿಗಳು. ಘಟನೆಯ ಕೆಲವು ದಿನಗಳ ಮೊದಲು ಪೂಲ್ ಆಟದಲ್ಲಿ ಇರಿತಕ್ಕೊಳಗಾದ ಬಾಲಕ ಮತ್ತು ಹಲ್ಲೆ ನಡೆಸಿದ ಆರೋಪಿಗಳ ನಡುವೆ ಗಲಾಟೆಯಾಗಿತ್ತು. ಆಗ ಆರೋಪಿಗಳ ಮೇಲೆ ಸಂತ್ರಸ್ತ ಬಾಲಕ ಕಪಾಳಮೋಕ್ಷ ಮಾಡಿದ್ದ. ಪ್ರತೀಕಾರವಾಗಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. 

Ads on article

Advertise in articles 1

advertising articles 2

Advertise under the article