"ಇಂದಿನ ರೌ#ಡಿಗಳೇ ಮುಂದಿನ ಬಿಜೆಪಿ ನಾಯಕರು": ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿ

"ಇಂದಿನ ರೌ#ಡಿಗಳೇ ಮುಂದಿನ ಬಿಜೆಪಿ ನಾಯಕರು": ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿಬೆಂಗಳೂರು,(Headlines  Kannada):   'ಹಿಂದೆ ರೌ#ಡಿಗಳನ್ನು ಕಂಡರೆ ಪೊಲೀಸರು ಒದ್ದು ಎಳೆದು ತರುತ್ತಿದ್ದರು, ಈಗ ಬಿಜೆಪಿಯ ರೌ#ಡಿ ರಾಜಕೀಯದಿಂದಾಗಿ ಅದೇ ರೌ#ಡಿಗಳಿಗೆ ಪೊಲೀಸರು ಸೆಲ್ಯೂಟ್ ಹೊಡೆಯುವಂತಾಗಿದೆ. ರೌ#ಡಿಗಳ ವಿರುದ್ಧ ಕಾರ್ಯಾಚರಣೆ ನಡೆಸುವ ಪೊಲೀಸರ ನೈತಿಕ ಸ್ಥೈರ್ಯವನ್ನೇ ಬಿಜೆಪಿ ಕಿತ್ತುಕೊಂಡಿದೆ. "ಇಂದಿನ ರೌ#ಡಿಗಳೇ ಮುಂದಿನ ಬಿಜೆಪಿ ನಾಯಕರು" ಎಂಬಂತಾಗಿದೆ' ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.


ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಕೋಮು ರಾಜಕಾರಣ ಸಾಲದು ಎಂಬಂತೆ ರೌ#ಡಿ ರಾಜಕೀಯ ಮಾಡಲು ಹೊರಟಿದೆ ಬಿಜೆಪಿ. ರಾಮಾರಾಜ್ಯದ ಹೆಸರು ಹೇಳುತ್ತಿದ್ದ ಬಿಜೆಪಿ ನಾಯಕರು ರೌ#ಡಿರಾಜ್ಯ ಮಾಡಲು ಹೊರಟಿದ್ದಾರೆ. ಅಪ್ಪು ಎಂಬ ರೌ#ಡಿ ಮೇಲಿದ್ದ ರೌ#ಡಿ ಶೀಟ್ ತೆಗೆಸಿ ರಾಜಕಾರಿಣಿಯ ಮುಖವಾಡ ತೋಡಿಸಿದ್ದೇಕೆ @BSBommai ಅವರೇ? ಬಿಜೆಪಿ ಸೇರುವ ಎಲ್ಲಾ ರೌ#ಡಿಗಳ ಕೇಸ್‌ಗಳನ್ನೂ ಮನ್ನಾ ಮಾಡುವಿರಾ? ಎಂದು ಪ್ರಶ್ನಿಸಿದೆ.


ಸದ್ದಿಲ್ಲದೆ ಬಿಜೆಪಿಯ ರೌ#ಡಿ ಮೋರ್ಚಾ ರೂಪುಗೊಳ್ಳುತ್ತಿದೆ, ಜೈಲಿನಲ್ಲಿರಬೇಕಾದವರು ಬಿಜೆಪಿ ಕಚೇರಿಯಲ್ಲಿದ್ದಾರೆ, ರೌ#ಡಿಗಳಿಗೆ ಪ್ರೋತ್ಸಾಹಿಸುವುದಿಲ್ಲ ಎಂದು ಯೂಟರ್ನ್ ಹೇಳಿಕೆ ನೀಡಿದ್ದ ಬೊಮ್ಮಾಯಿ ಅವರೇ, ಆನೇಕಲ್‌ ಪುರಸಭೆಗೆ ರೌ#ಡಿ ಶೀಟರ್‌ನನ್ನು ನಿಮ್ಮದೇ ಸರ್ಕಾರ ನಾಮನಿರ್ದೇಶನ ಮಾಡಿರುವುದೇಕೆ? ದಮ್ಮು ತಾಕತ್ತಿದ್ದರೆ ಉತ್ತರಿಸಿ ಎಂದು ಕಾಂಗ್ರೆಸ್ ಸವಾಲು ಹಾಕಿದೆ. 


ಮುಖ್ಯಮಂತ್ರಿ ಬೊಮ್ಮಾಯಿಯವರು ದಮ್ಮು, ತಾಕತ್ತು ಇದ್ರೆ ಬನ್ನಿ ಎಂದು ರೌ#ಡಿಸಂ ಭಾಷೆಯಲ್ಲಿ ಸವಾಲು ಹಾಕಿದ್ದರ ಹಿಂದೆ ನೈಜ ರೌ#ಡಿಸಂ ಇದೆ ಎಂದು ಈಗ ಬೆಳಕಿಗೆ ಬರುತ್ತಿದೆ,  ರೌ#ಡಿ ಮೋರ್ಚಾ ಕಟ್ಟಿಕೊಂಡು ಈ ಸವಾಲು ಹಾಕಿದಿರಾ? ಬಿಜೆಪಿ ಕಚೇರಿ ಈಗ ರೌ#ಡಿಗಳ ಅಡ್ಡೆಯಾಗಿದೆ, ಬೊಮ್ಮಾಯಿಯವರು ರೌ#ಡಿಗಳಿಗೆ ಮಹಾಗುರುವಿನಂತೆ ಆಗಿದ್ದಾರೆ ಎಂದು ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ.

Ads on article

Advertise in articles 1

advertising articles 2

Advertise under the article