ಈ ಬಾರಿ ಗುಜರಾತಿನಲ್ಲಿ 'ಕೈ'ಗೆ ಅಧಿಕಾರ: ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ

ಈ ಬಾರಿ ಗುಜರಾತಿನಲ್ಲಿ 'ಕೈ'ಗೆ ಅಧಿಕಾರ: ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ



ನವದೆಹಲಿ(Headlines  Kannada):   ಗುಜರಾತ್ ವಿಧಾನಸಭೆ ಮೊದಲ ಹಂತದ ಮತದಾನ ಮುಗಿದ್ದು ಎರಡನೇ ಹಂತಕ್ಕೆ ಸಜ್ಜಾಗಿರುವ ಮಧ್ಯೆ ಈ ಬಾರಿ ಗುಜರಾತಿನ ಜನ ಕಾಂಗ್ರೆಸನ್ನು ಬಹುಮತದಿಂದ ಅಧಿಕಾರಕ್ಕೆ ತರಲಿದ್ದಾರೆ ಎಂದು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ. 


ಸುದ್ದಿಗಾರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಬಿಜೆಪಿಯ ಆಡಳಿತ ವಿರೋಧಿ ಅಲೆ ಮತ್ತು ನಿರುದ್ಯೋಗ, ಮತ್ತು ಹಣದುಬ್ಬರ ಸೇರಿದಂತೆ ಇತರ ಜನವಿರೋಧಿ ನೀತಿಗಳಿಂದಾಗಿ  ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಹಕಾರಿಯಾಗಲಿದೆ ಎಂದಿದ್ದಾರೆ.


ಗುಜರಾತಿನಲ್ಲಿ ಮೊದಲ ಹಂತದಲ್ಲಿ ದಾಖಲೆಯ ಮತದಾನವಾಗಿದ್ದು, ಕಚ್, ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್ ಜಿಲ್ಲೆಗಳಲ್ಲಿ ಹರಡಿರುವ 89 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಡಿಸೆಂಬರ್ 5 ರಂದು ಎರಡನೇ ಹಂತದ ಮತದಾನ ನಡೆಯಲಿದ್ದು, ಹಿಮಾಚಲ ಪ್ರದೇಶ ಚುನಾವಣೆಯೊಂದಿಗೆ ಡಿಸೆಂಬರ್ 8ರಂದು ಫಲಿತಾಂಶ ಹೊರಬೀಳಲಿದೆ.

Ads on article

Advertise in articles 1

advertising articles 2

Advertise under the article