ರವಿವಾರವಾರದಿಂದ ಭಾರತ- ಬಾಂಗ್ಲಾದೇಶ ಏಕದಿನ ಸರಣಿ ಆರಂಭ; ಟ್ರೋಫಿ ಅನಾವರಣ

ರವಿವಾರವಾರದಿಂದ ಭಾರತ- ಬಾಂಗ್ಲಾದೇಶ ಏಕದಿನ ಸರಣಿ ಆರಂಭ; ಟ್ರೋಫಿ ಅನಾವರಣಮಿರ್ ಪುರ(Headlines  Kannada):  ರವಿವಾರದಿಂದ ಭಾರತ- ಬಾಂಗ್ಲಾದೇಶ ನಡುವಣ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದ್ದು, ಶನಿವಾರ  ಟ್ರೋಫಿಯನ್ನು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ಬಾಂಗ್ಲಾದೇಶದ ನಾಯಕ ಲಿಟ್ಟನ್ ದಾಸ್  ಅನಾವರಣಗೊಳಿಸಿದರು.


ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧದ ಸರಣಿ ಸೋಲಿನ ಬಳಿಕ ಈಗ ಬಾಂಗ್ಲಾದೇಶದ ವಿರುದ್ಧ ಸೆಣಸಾಟ ನಡೆಸಲಿದ್ದು, ಈ ಸರಣಿ ಭಾರತದ ಪಾಲಿಗೆ ಮಹತ್ವದ್ದೆನಿಸಿದೆ. ಟೀಂ ಇಂಡಿಯಾ ನಾಯಕರಾಗಿ ರೋಹಿತ್ ಶರ್ಮಾ ಮತ್ತೆ ವಾಪಸ್ಸಾಗಿದ್ದು, ಹೀಗಾಗಿ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಸಾಧ್ಯತೆಯಿದೆ.


ಭಾರತ ತಂಡದ ಆಟಗಾರರು: ರೋಹಿತ್ ಶರ್ಮಾ (ನಾಯಕ) ಕೆಎಲ್ ರಾಹುಲ್ (ಉಪ ನಾಯಕ) ಶಿಖರ್ ಧವನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ರಿಷಭ್ ಪಂತ್ (ವಿಕೆಟ್ ಕೀಪರ್) ಇಶಾನ್ ಕಿಶಾನ್ (ವಿಕೆಟ್ ಕೀಪರ್) ಶಹಬಾಜ್ ಅಹ್ಮದ್, ಅಕ್ಸರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮೊಹಮದ್ ಸಿರಾಜ್, ದೀಪಕ್ ಚಹರ್, ಕುಲದೀಪ್ ಸೇನ್ ಆಡಲಿದ್ದಾರೆ. 


ಬಾಂಗ್ಲಾದೇಶ ತಂಡದ ಆಟಗಾರರು: ತಮಿಮ್ ಇಕ್ಬಾಲ್, ಲಿಟ್ಟನ್ ದಾಸ್, ಅನಾಮುಲ್ ಹಕ್, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್, ಅಫೀಫ್ ಹೊಸೈನ್, ಯಾಸಿರ್ ಅಲಿ, ಮೆಹಿದಿ ಹಸನ್, ಮುಸ್ತಾಫಿಜುರ್ ರೆಹಮಾನ್, ತಸ್ಕಿನ್ ಅಹ್ಮದ್, ಹಸನ್ ಮಹಮ್ಮದ್, ಎಬಾಡೋತ್ ಹೊಸೈನ್, ನಸುಮ್ ಅಹ್ಮದ್, ಮಹಮ್ಮದುಲ್ಲಾ, ನಜ್ಮುಲ್ ಹೊಸೈನ್ ಶಾಂಟೋ ಮತ್ತು ನೂರುಲ್ ಹಸನ್ ಸೋಹನ್ ಆಡಲಿದ್ದಾರೆ.

Ads on article

Advertise in articles 1

advertising articles 2

Advertise under the article