ಉಡುಪಿ ಸಂತೆಕಟ್ಟೆ ಸಮೀಪ ಜೀಪ್ ಢಿ#ಕ್ಕಿ; ರಸ್ತೆ ದಾಟಲು ನಿಂತಿದ್ದ ವ್ಯಕ್ತಿ ಬ#ಲಿ

ಉಡುಪಿ ಸಂತೆಕಟ್ಟೆ ಸಮೀಪ ಜೀಪ್ ಢಿ#ಕ್ಕಿ; ರಸ್ತೆ ದಾಟಲು ನಿಂತಿದ್ದ ವ್ಯಕ್ತಿ ಬ#ಲಿ


ಉಡುಪಿ(Headlines Kannada): ಸಂತೆಕಟ್ಟೆ ಸಮೀಪದ ಎಲ್‌ವಿಟಿ ರಿಕ್ಷಾ ನಿಲ್ದಾಣದ ಎದುರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಡಿ.8ರಂದು ರಾತ್ರಿ 8 ಗಂಟೆ ಸುಮಾರಿಗೆ ಜೀಪೊಂದು ಢಿ#ಕ್ಕಿ ಹೊಡೆದು ರಸ್ತೆ ದಾಟಲು ನಿಂತಿದ್ದ ವ್ಯಕ್ತಿಯೊಬ್ಬರು ಮೃ#ತಪಟ್ಟಿರುವ ಬಗ್ಗೆ ವರದಿಯಾಗಿದೆ.

ಪುತ್ತೂರು ಗ್ರಾಮದ ನಯಂಪಳ್ಳಿಯ ಎಲ್.ವಿ.ಪಿ. ಶಾಲೆ ಸಮೀಪದ ನಿವಾಸಿ ರಾಮಚಂದ್ರ ಮೃ#ತದು#ರ್ದೈವಿ. ರಾಮಚಂದ್ರ ಅವರು ಎಲ್.ವಿ.ಟಿ. ರಿಕ್ಷಾ ನಿಲ್ದಾಣದಿಂದ ಮನೆಗೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬ್ರಹ್ಮಾವರ ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ ಆಂಧ್ರಪ್ರದೇಶ ಮೂಲದ ಜೀಪ್ ಢಿ#ಕ್ಕಿ ಹೊಡೆದಿದೆ ಎನ್ನಲಾಗಿದೆ. 

ಇದರಿಂದ ರಸ್ತೆಗೆ ಬಿದ್ದು ಗಂ#ಭೀರವಾಗಿ ಗಾಯಗೊಂಡ ಅವರು, ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಕೊನೆ#ಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಚಾಲಕ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಪರಾರಿಯಾಗಿದ್ದಾನೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article