
ಬೆಂಗಳೂರಿನಲ್ಲಿ ತಡರಾತ್ರಿ ಚಾ#ಕುವಿನಿಂದ ಇ#ರಿದು ಯುವಕನೊಬ್ಬನ ಕೊ#ಲೆ; ಆರೋಪಿಗಳು ಪರಾರಿ
Wednesday, December 21, 2022
ಬೆಂಗಳೂರು(Headlines Kannada): ನಿನ್ನೆ ತಡರಾತ್ರಿ ಯುವಕನೊಬ್ಬವನ್ನು ಚಾ#ಕುವಿನಿಂದ ಇ#ರಿದು ಕೊ#ಲೆ ಮಾಡಿರುವ ಘಟನೆ ಬೆಂಗಳೂರಿನ ಹೆಗಡೆನಗರದ ಬಾಲಾಜಿ ಲೇಔಟ್ನಲ್ಲಿ ನಡೆದಿದೆ.
ಕೊ#ಲೆಯಾದ ಯುವಕನನ್ನು ಸಲ್ಮಾನ್ (20) ಎಂದು ಗುರುತಿಸಲಾಗಿದೆ. ಸಲ್ಮಾನ್ ನಿನ್ನೆ ರಾತ್ರಿ 10ಗಂಟೆ ಸುಮಾರಿಗೆ ತಂದೆಯ ಫರ್ನಿಚರ್ ಅಂಗಡಿ ಹಾಗು ಹೋಟೆಲ್ ಕೆಲಸ ಮುಗಿಸಿ ಮನೆಗೆ ಹಿಂದಿರುಗುವಾಗ ಈ ಕೃ#ತ್ಯ ಎಸಗಲಾಗಿದೆ. ಘಟನೆಗೆ ಕಾರಣ ಏನೆಂಬುದು ಎಂಬುದು ತಿಳಿದು ಬಂದಿಲ್ಲ.
ಸಲ್ಮಾನ್ ಬರುವಿಕೆಯನ್ನು ಕಾದುಕೂತ 3 ಮಂದಿ ದು#ಷ್ಕರ್ಮಿಗಳು ಚಾ#ಕುವಿಂದ ಇ#ರಿದು ಕೊ#ಲೆಗೈದು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಸಂಪಿಗೇಹಳ್ಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂದು ತನಿಖೆ ನಡೆಸುತ್ತಿದ್ದಾರೆ.