
ಕಲ್ಲು ತೂ#ರಾಟದ ಭಯ; ಹೆಲ್ಮೆಟ್ ಹಾಕಿಕೊಂಡು ವೇದಿಕೆಗೆ ಬಂದ BJP ನಾಯಕ!
Wednesday, December 21, 2022
ಛತ್ತೀಸ್ಗಢ(Headlines Kannada): ಛತ್ತೀಸ್ಗಢದಲ್ಲಿ 2023 ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಆಡಳಿತಾರೂಢ ಕಾಂಗ್ರೆಸ್ ಹಾಗು ವಿಪಕ್ಷ ಬಿಜೆಪಿ ಮಧ್ಯೆ ಬಿಗ್ ಫೈಟ್ ಆರಂಭವಾಗಿದೆ. BJP ನಡೆಸಿದ ಕಾರ್ಯಕ್ರಮದ ಮೇಲೆ ಕಿಡಿ#ಗೇಡಿಗಳು ಕ#ಲ್ಲು ತೂ#ರಾಟ ನಡೆಸಿದ್ದರಿಂದ ಬಿಜೆಪಿ ನಾಯಕರೊಬ್ಬರು ಹೆಲ್ಮೆಟ್ ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಘಟನೆ ನಡೆಯಿತು.
ಸುಪೇಲಾ ಎಂಬಲ್ಲಿ ಮಂಗಳವಾರ BJP ನಡೆದ ಸಾರ್ವಜನಿಕ ಕಾರ್ಯಕ್ರಮದ ಮೇಲೆ ಕ#ಲ್ಲು ತೂ#ರಾಟ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ದುರ್ಗ್ದ ಹಳೆ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ BJP ಮುಖಂಡ, ಮಾಜಿ ಸಚಿವ ಅಜಯ್ ಚಂದ್ರಾಕರ್ ಕ್ರಿಕೆಟ್ ಹೆಲ್ಮೆಟ್ ಧರಿಸಿ ವೇದಿಕೆಯ ಮೇಲೆ ಕಾಣಿಸಿಕೊಂಡು ಎಲ್ಲರನ್ನು ಅಚ್ಚರಿಗೊಳಿಸಿದರು.