'ಅಲ್ ಬಿರ್ರ್'ನ ಅಕ್ಬರ್ ಅಲಿಗೆ ವಿವಿಧ ಸಂಘಟನೆಗಳಿಂದ ಬೀಳ್ಕೊಡುಗೆ

'ಅಲ್ ಬಿರ್ರ್'ನ ಅಕ್ಬರ್ ಅಲಿಗೆ ವಿವಿಧ ಸಂಘಟನೆಗಳಿಂದ ಬೀಳ್ಕೊಡುಗೆ

ಮಂಗಳೂರು(Headlines Kannada):  ಉದ್ಯೋಗ ನಿಮಿತ್ತ ವಿದೇಶ ಯಾತ್ರೆ ಕೈಗೊಂಡಿರುವ ಅಲ್ ಬಿರ್ರ್ ಶಾಲೆಯ ಕರ್ನಾಟಕ ಕೋ-ಆರ್ಡಿನೇಟರ್ ಅಕ್ಬರ್ ಅಲಿಯವರಿಗೆ ಕಣ್ಣೂರು ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ವತಿಯಿಂದ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಬೀಳ್ಕೊಡಲಾಯಿತು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿತಾರ್ ಮಜೀದ್ ಹಾಜಿಯವರು ವಹಿಸಿದ್ದರು. ಶಿಕ್ಷಣ ತಜ್ಞ, ಸಾಮಾಜಿಕ ಕಾರ್ಯಕರ್ತ ರಫೀಕ್ ಮಾಸ್ಟರ್ ಅವರು ಈ ವೇಳೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಆಡಳಿತ ಮಂಡಳಿಯ ಉಪಾಧ್ಯಕ್ಷ ನಸೀಮ್ ಹಾಜಿ, ಮಹದಿಯ ಷರೀಅತ್ತ್ ಕಾಲೇಜಿನ ಮುಖ್ಯ ಶಿಕ್ಷಕ ಕೆ.ಎಲ್ ಉಮರ್ ದಾರಿಮಿ, ರಫೀಖ್ ಅಡ್ಡೂರು. ಅಲ್ ಬಿರ್ರ್ ಶಿಕ್ಷಕರಾದ ಆಯಿಶಾ ಝಬೀನ, ನಶ್ರೀಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಅಲ್ ಬಿರ್ರ್ ಸ್ಕೂಲ್'ನಿಂದ ಬೀಳ್ಕೊಡುಗೆ 

ಅಲ್ ಬಿರ್ರ್ ಸ್ಕೂಲ್ ಅಡ್ಡೂರು ಆಡಳಿತ ಸಮಿತಿ ವತಿಯಿಂದ ಅಕ್ಬರ್ ಅಲಿ ಅಡ್ಡೂರು ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.

ಬದ್ರಿಯಾ ಜುಮಾ ಮಸ್ಜಿದ್ ಆಡಳಿತ ಸಮಿತಿಯಿಂದ ಬೀಳ್ಕೊಡಿಗೆ 

ಬದ್ರಿಯಾ ಜುಮಾ ಮಸ್ಜಿದ್ ಮಲ್ಲೂರು ದೆಮ್ಮಲೆ ಇದರ ನವೀಕೃತ ಮಸೀದಿ ಕಾರ್ಯಕ್ರಮದಲ್ಲಿ ಆಡಳಿತ ಸಮಿತಿ ವತಿಯಿಂದ ಅಕ್ಬರ್ ಅಲಿ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. Ads on article

Advertise in articles 1

advertising articles 2

Advertise under the article