
ಮತ್ತೆ ಬಿಜೆಪಿ ಪಕ್ಷಕ್ಕೆ ಇರಿಸುಮುರಿಸು ತಂದ ಉಮಾಭಾರತಿ ಹೇಳಿಕೆ; ಕೇಸರಿ ಪಾಳಯಕ್ಕೆ ಹೊಸ ತಲೆನೋವು
ಮಧ್ಯಪ್ರದೇಶ (Headlines Kannada): ತಮ್ಮ ಹೇಳಿಕೆಯಿಂದಲೇ ಬಿಜೆಪಿ ಪಕ್ಷಕ್ಕೆ ಸಂಕಷ್ಟ ತಂದುಕೊಡುತ್ತಿರುವ ನಾಯಕಿ ಉಮಾಭಾರತಿ, ಈಗ ಮಾತೊಂದು ಹೇಳಿಕೆ ನೀಡಿದ್ದು, ಇದು ಬಿಜೆಪಿಗೆ ಇರಿಸುಮುರಿಸು ತಂದಿದೆ.
ಮಧ್ಯಪ್ರದೇಶದ ಮಾಜಿ CM ಕಮಲ್ ನಾಥ್ ರಾಜ್ಯದಲ್ಲಿ ಹನುಮಂತನ ಮಂದಿರ ನಿರ್ಮಾಣ ಮಾಡುವುದಾಗಿ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉಮಾಭಾರತಿ ನೀಡಿರುವ ಹೇಳಿಕೆ ಈಗ ಸುದ್ದಿಯಲ್ಲಿದೆ.
ಭಗವಾನ್ ಶ್ರೀ ರಾಮ ಹಾಗು ಹನುಮಂತ ಬಿಜೆಪಿಯ ಕಾಪಿರೈಟ್ ಅಲ್ಲ ಎಂದು ಉಮಾಭಾರತಿ ಹೇಳಿದ್ದಾರೆ. ಈ ಹೇಳಿಕೆ ಈಗ ಭಾರಿ ಚರ್ಚೆಗೆ ಕಾರಣವಾಗಿದೆ.
ಇತ್ತೀಚೆಗಷ್ಟೇ ಉಮಾಭಾರತಿ ಅವರು BJP ಬೆಂಬಲಿಗರಿಗೆ 'ಸುತ್ತಮುತ್ತ ನೋಡಿ' ಯಾರಿಗೆ ಮತ ಹಾಕಬೇಕೆಂದು ನಿರ್ಧರಿಸಬೇಕು ಎಂದು ಹೇಳಿದ್ದರು. ಇದೀಗ ಅವರ ಮತ್ತೊಂದು ಹೇಳಿಕೆ ಸಂಚಲನ ಮೂಡಿಸಿದೆ.
ತಾನು ರಾಜ್ಯದಲ್ಲಿ ಮ#ದ್ಯಪಾನ ನಿಷೇಧದ ಬೇಡಿಕೆ ಇಟ್ಟಿದ್ದು CM ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ರಾಜ್ಯ ಸರ್ಕಾರ ತಮ್ಮನ್ನು ಮೂಲೆಗುಂಪು ಮಾಡುತ್ತಿದೆ ಎಂದು ಉಮಾಭಾರತಿ ಆರೋಪಿಸಿದ್ದಾರೆ. ಇತ್ತೀಚೆಗೆ ಉಮಾಭಾರತಿ ಮಧ್ಯಪ್ರದೇಶದಲ್ಲಿ ಮ#ದ್ಯ ನಿಷೇಧಿಸುವಂತೆ ಆಗ್ರಹಿಸಿ ಮ#ದ್ಯದಂಗಡಿಗಳ ಮೇಲೆ ಕಲ್ಲು ಎ#ಸೆದು ಪ್ರತಿಭಟಿಸಿದ್ದರು.
ಇತ್ತೀಚಿಗೆ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ನೀಡಿರುವ ವಿ#ವಾದಾತ್ಮಕ ಹೇಳಿಕೆಯನ್ನು ಬೆಂಬಲಿಸಿದ ಉಮಾಭಾರತಿ, ಹಿಂದೂಗಳು ತಮ್ಮ ಮನೆಯಲ್ಲಿ ಶ#ಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ.
‘ಪಠಾಣ್’ ಚಿತ್ರದ ವಿರುದ್ಧ ಎದ್ದಿರುವ ವಿವಾದದ ಕುರಿತು ಮಾತನಾಡಿರುವ ಉಮಾಭಾರತಿ, ದರಲ್ಲಿ ರಾಜಕೀಯ ಮಾಡುವ ಅಗತ್ಯವಿಲ್ಲ, ‘ಬಿಜೆಪಿ ಸರ್ಕಾರದ ಸೆನ್ಸಾರ್ ಮಂಡಳಿ ಕೂಡಲೇ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದು ಹಾಕಬೇಕು’ ಎಂದರು.