ಚಳ್ಳಕೆರೆಯ ನಾಯಕನಹಟ್ಟಿ ಕೆರೆಯಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾ#ವು; ಗಂಡನೇ ತಳ್ಳಿ ಹಾಕಿರುವ ಶಂ#ಕೆ !
Saturday, December 17, 2022
ಚಿತ್ರದುರ್ಗ(Headlines Kannada): ತಾಯಿ ಹಾಗು ಇಬ್ಬರು ಮಕ್ಕಳು ಇಲ್ಲಿನ ಚಳ್ಳಕೆರೆಯ ನಾಯಕನಹಟ್ಟಿ ಗ್ರಾಮದ ಕೆರೆಯಲ್ಲಿ ಮುಳುಗಿ ಸಾ#ವ#ನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಮೃ#ತರನ್ನು ಚಳ್ಳಕೆರೆ ತಾಲೂಕಿನ ಹಿರೇಹಳ್ಳಿಯ ನಿವಾಸಿಗಳಾದ ದುರ್ಗಮ್ಮ(25), ಮಕ್ಕಾಳಾದ ಅಜ್ಜಯ್ಯ(6) ಹಾಗೂ ಸೇವಂತಿ(4) ಎಂದು ಗುರುತಿಸಲಾಗಿದೆ.
ಬೋಸೇದೇವರಹಟ್ಟಿ ಜಾತ್ರೆಗೆಂದು ಪತಿ ಮಹಾಂತೇಶ್ ಪತ್ನಿ ಹಾಗೇ ಮಕ್ಕಳನ್ನು ಸಂಬಂಧಿಕರ ಮನೆಗೆ ಕರೆದುಕೊಂಡು ಬಂದಿದ್ದು, ಅಲ್ಲಿಂದ ಗಂಗಾ ಪೂಜೆಗೆಂದು ನಾಯಕನಹಟ್ಟಿ ಹಿರೇಕೆರೆಗೆ ಕರೆದೊಯ್ದು ಅಲ್ಲಿ ಪತ್ನಿ ಮತ್ತು ಮಕ್ಕಳನ್ನು ಆತನೆ ಕೆರೆಗೆ ದೂಡಿಹಾಕಿ ಕೊಂ#ದಿದ್ದಾನೆ ಎಂಬ ಶಂ#ಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಮಹಾಂತೇಶನನ್ನು ವಶಕ್ಕೆ ಪಡೆದ ನಾಯಕನಹಟ್ಟಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.