
ಕೇವಲ 15 ರನ್‌ಗಳಿಗೆ ಆಲೌಟ್! ಟಿ20 ಕ್ರಿಕೆಟ್ ಇತಿಹಾಸದಲ್ಲೇ ಕಳಪೆ ದಾಖಲೆ ಬರೆದ ಸಿಡ್ನಿ ಥಂಡರ್
ಸಿಡ್ನಿ(Headlines Kannada): ಇಲ್ಲೊಂದು ಕ್ರಿಕೆಟ್ ತಂಡ ಕೇವಲ 15 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತಿ ಕಡಿಮೆ ರನ್‌ಗಳಿಸಿದ ತಂಡ ಎಂಬ ಕೆಟ್ಟ ದಾಖಲೆ ಪಾತ್ರವಾಗಿದೆ.
ಈ ದಾಖಲೆ ಮಾಡಿರುವ ತಂಡ ಸಿಡ್ನಿ ಥಂಡರ್. ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ ನಲ್ಲಿ ಕ್ರಿಕೆಟ್ ಇತಿಹಾಸದಲ್ಲೇ ನೆನಪಿಡುವಂಥ ದಾಖಲೆಯೊಂದು ನಿರ್ಮಾಣವಾಗಿದ್ದು, ಕೇವಲ 15 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತಿ ಕಡಿಮೆ ರನ್‌ಗಳಿಸಿದ ತಂಡ ಎಂಬ ಅಪಕೀರ್ತಿಯೆಗೆ ಸಿಡ್ನಿ ಥಂಡರ್ ಭಾಜನವಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಅಡಿಲೇಡ್ ಸ್ಟ್ರೈಕರ್ಸ್ ತಂಡವು 9 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿತು. 140 ರನ್‌ಗಳ ಗುರಿಯನ್ನು ಪಡೆದ ಸಿಡ್ನಿ ತಂಡ 5.5 ಓವರ್ ಎದುರಿಸಿ ತಣ್ಣೆಲ ವಿಕೆಟ್ ಕಳೆದುಕೊಂಡು 15 ರನ್‌ಗಳಿಗೆ ಆಲೌಟ್ ಆಗಿದೆ.
2019ರ ಆಗಸ್ಚ್ 30ರಂದು ಜೆಕ್ ರಿಪಬ್ಲಿಕ್ ತಂಡದ ವಿರುದ್ಧ ಟರ್ಕಿ ತಂಡವು 8.3 ಓವರ್ ನಲ್ಲಿ 21 ರನ್ ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಲೌಟ್ ಆಗಿತ್ತು. ಇದು ಟಿ20 ಕ್ರಿಕೆಟ್ ಅತ್ಯಂತ ಕಳಪೆ ಮೊತ್ತವಾಗಿತ್ತು. ಇದೀಗ ಬಿಗ್ ಬ್ಯಾಷ್ ಲೀಗ್ ನಲ್ಲಿ ಸಿಡ್ನಿ ಥಂಡರ್ ತಂಡ ಕೇವಲ 15 ರನ್ ಗಳಿಗೆ ಆಲೌಟ್ ಆಗಿರುವುದು ಮತ್ತೊಂದು ಕುಖ್ಯಾತಿಯನ್ನು ತನ್ನ ಹೆಸರಿಗೆ ಮಾಡಿಕೊಂಡಿದೆ.