
`ಪಠಾಣ್’ ಸಿನೆಮಾದ ಕೇಸರಿ ಬಿ#ಕಿನಿ ವಿವಾದ; ನಟಿ ದೀಪಿಕಾ ಪಡುಕೋಣೆ ಪರ ಧ್ವನಿ ಎತ್ತಿದ ನಟಿ ರಮ್ಯಾ
ಸಾಮಾಜಿಕ ತಾಣಗಳಲ್ಲಿ ಬಹಳಷ್ಟು ಆಕ್ಟೀವ್ ಆಗಿರುವ ನಟಿ ರಮ್ಯಾ, ಈ ಹಿಂದೆ ಸಾಕಷ್ಟು ಟ್ರೋಲ್‌ಗಳಿಗೆ ಒಳಗಾಗಿರುವ ಸಮಂತಾ, ರಶ್ಮಿಕಾ, ಸಾಯಿ ಪಲ್ಲವಿ, ದೀಪಿಕಾ ಪಡುಕೋಣೆಯ ಪರ ನಿಂತಿದ್ದರು. ದೀಪಿಕಾ ಕೇಸರಿ ಬಿ#ಕಿನಿ ವಿವಾದಕ್ಕೆ ರಮ್ಯಾ ಟ್ವೀಟ್ ಮೂಲಕ ಆಕ್ರೋಶ ತನ್ನ ಹೊರಹಾಕಿದ್ದಾರೆ.
`ಪಠಾಣ್’ ನಿಮಾದ `ಬೇಷರಂ ರಂಗ್’ ಹಾಡಿನ ಕಾಂಟ್ರವರ್ಸಿಗೆ ಈಗ ಹೊಸ ಟ್ವಿಸ್ಟ್ ಸಿಕ್ಕಿದಂತಾಗಿದೆ. ಈ ಚಿತ್ರದ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿ#ಕಿನಿ ಧರಿಸಿದ್ದಾರೆ ಎಂದು ಹಲವರ ವಿರೋಧ ವ್ಯಕ್ತಪಡಿಸಿದ್ದು, ಕೆಲ ದಿನಗಳಿಂದ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ.
ಡಿವೋರ್ಸ್'ಗೆ ಸಂಬಂಧಿಸಿ ನಟಿ ಸಮಂತಾ ಟ್ರೋಲ್, ತಮಗೆ ಅನಿಸಿದ್ದನ್ನು ಹೇಳಿದ್ದಕ್ಕೆ ನಟಿ ಸಾಯಿಪಲ್ಲವಿ, ಪ್ರೀತಿಸಿ ಬೇರೆ ಬೇರೆಯಾಗಿದ್ದಕ್ಕೆ ನಟಿ ರಶ್ಮಿಕಾ, ಬಟ್ಟೆ ವಿಚಾರಕ್ಕೆ ಈಗ ನಟಿ ದೀಪಿಕಾರನ್ನು ಟ್ರೋಲ್ ಮಾಡಲಾಗಿದೆ. ಆಯ್ಕೆಯ ಸ್ವಾತಂತ್ರ್ಯ ನಮ್ಮ ಮೂಲಭೂತ ಹಕ್ಕಾಗಿದೆ ಎಂದು ಹೇಳುವ ಮೂಲಕ ದೀಪಿಕಾ ಪರ ರಮ್ಯಾ ಬ್ಯಾಟಿಂಗ್ ಮಾಡಿದ್ದಾರೆ.
ಆಯ್ಕೆಯ ಸ್ವಾತಂತ್ರ‍್ಯ ಎಂಬುದು ನಮ್ಮ ಮೂಲಭೂತ ಹಕ್ಕಾಗಿದ್ದು, ಮಹಿಳೆಯರು ತಾಯಿ ದುರ್ಗೆಯ ಮೂರ್ತರೂಪವಾಗಿದ್ದಾರೆ.ಸಮಾಜದಲ್ಲಿ ಹರಡಲಾಗುತ್ತಿರುವ ಸ್ತ್ರೀ ದ್ವೇಷದ ಬಗ್ಗೆ ಹೋರಾಡಬೇಕಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ನಟಿ ರಮ್ಯಾ ಟ್ವೀಟ್ ಮಾಡಿದ್ದಾರೆ.