ಸುರತ್ಕಲ್ ಟೋಲ್ ಗೇಟ್ ತೆರವು ಹಿನ್ನೆಲೆ; ಬಸ್ ಪ್ರಯಾಣದರ ಇಳಿಸಲು ಉಡುಪಿ ಜಿಲ್ಲಾ ಸಿಐಟಿಯು ಒತ್ತಾಯ
ಉಡುಪಿ (Headlines Kannada): ಸುರತ್ಕಲ್ ಟೋಲ್ ಗೇಟ್ ಶಾಶ್ವತವಾಗಿ ತೆರವು ಗೊಂಡಿರುವುದರಿಂದ ಖಾಸಗಿ ಬಸ್ ಪ್ರಯಾಣ ದರವನ್ನು ಇಳಿಸುವಂತೆ ಉಡುಪಿ ಜಿಲ್ಲಾ ಸಿಐಟಿಯು ಒತ್ತಾಯಿಸಿದೆ.
ಉಡುಪಿ ಗ್ರಾಮೀಣ ಭಾಗಗಳಿಗೆ ಸುರತ್ಕಲ್ ಮೂಲಕ ಸಂಚಾರಿಸುತ್ತಿದ್ದ ಖಾಸಗಿ ಸರ್ವಿಸ್ ಬಸ್ಸುಗಳು ಹಾಗೂ ಉಡುಪಿ, ಕಾರ್ಕಳ, ಕುಂದಾಪುರ, ಬೈಂದೂರು, ಹೆಬ್ರಿ ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಎಕ್ಸ್ ಪ್ರೆಸ್ ಬಸ್ ಗಳು ಟಿಕೆಟ್ ಮೇಲೆ ಟೋಲ್ ದರವನ್ನು ಸೇರಿಸಿ ಪ್ರಯಾಣಿಕರಿಂದ ಹೆಚ್ಚುವರಿ ಶುಲ್ಕವನ್ನು ಸಂಗ್ರಹಿಸುವ ಮೂಲಕ ಟೋಲ್ ಸುಂಕದ ಹೊರೆಯನ್ನು ಪ್ರಯಾಣಿಕರ ಮೇಲೆ ಹೇರಲಾಗಿತ್ತು. ಈ ರೀತಿಯ ಬಸ್ ಪ್ರಯಾಣ ದರ ಏರಿಕೆಯಿಂದ ಸಹಜವಾಗಿ ಕಡಿಮೆ ಸಂಬಳಕ್ಕೆ ದುಡಿಯುವ ದಿನಕೂಲಿ ನೌಕರರು, ಸಣ್ಣ ಪುಟ್ಟ ಅಂಗಡಿಗಳಲ್ಲಿ ದುಡಿಯುವ ಕಾರ್ಮಿಕರು ತಮ್ಮ ಗಳಿಕೆಯ ಹೆಚ್ಚಿನ ಪಾಲನ್ನು ಪ್ರಯಾಣಕ್ಕಾಗಿಯೇ ವ್ಯಯಿಸುವಂತಹ ಸಂಕಷ್ಟದ ಸ್ಥಿತಿ ಅನುಭವಿಸುವಂತಾಗಿದೆ. ಇದೀಗ ಜನಸಾಮಾನ್ಯರ ನಿರಂತರ ಹೋರಾಟದಿಂದ ಸುರತ್ಕಲ್ ಟೋಲಗೇಟ್ ಶಾಶ್ವತವಾಗಿ ತೆರವು ಗೊಂಡಿದೆಯಾದರು ಬಸ್ ಮಾಲೀಕರು ಟೋಲ್ ನೆಪದಲ್ಲಿ ಎರಿಸಿದ ದರವನ್ನು ಇಂದಿಗೆ 14ದಿನವಾದರು ಇಳಿಸಲು ಯಾವುದೇ ತೀರ್ಮಾನವನ್ನು ಕೈಗೊಂಡಿರುವುದಿಲ್ಲ. ಸುರತ್ಕಲ್ ಟೋಲ್ ಸಂಗ್ರಹದ ನೆಪದಲ್ಲಿ ಎರಿಕೆಗೆ ಅವಕಾಶ ನೀಡಿದ ಉಡುಪಿ ಜಿಲ್ಲಾಡಳಿತ, ಸಾರಿಗೆ ಪ್ರಾಧಿಕಾರ ಎರಿಕೆ ಮಾಡಿದ ಪ್ರಯಾಣ ದರವನ್ನು ಇಳಿಸುವ ಕ್ರಮಕ್ಕು ಮುಂದಾಗಬೇಕು ಈ ಮೂಲಕ ಉಡುಪಿಯ ಜನತೆಯನ್ನು ಟೋಲ್ ಸುಂಕದ ಭಾರದಿಂದ ಬಿಡುಗಡೆ ಗೊಳಿಸಿದ ಟಿಕೆಟ್ ಮೆಲೆ ವಿಧಿಸುತ್ತಿದ್ದ 5.00ರೂ ಟೋಲ್ ಶುಲ್ಕವನ್ನು ಬಸ್ ಮಾಲೀಕರು ತಕ್ಷಣ ದಿಂದಲೇ ಕೈ ಬೀಡಬೇಕು ಎಂದು ಸೆಂಟರ್ ಆಫ್ ಇಂಡಿಯಾನ್ ಟ್ರೇಡ್ ಯೂನಿಯನ್ (CITU)ಉಡುಪಿ ಜಿಲ್ಲಾಕಾರ್ಯದರ್ಶಿ ಕವಿರಾಜ್. ಎಸ್. ಒತ್ತಾಯಿದ್ದಾರೆ .
ಈಗಾಗಲೇ ಸುರತ್ಕಲ್ ಟೋಲ್ ರದ್ದಾಗಿ ಇಂದಿಗೆ 14 ದಿನ ಕಳೆದಿದೆ ದಿನಕ್ಕೆ16ಲಕ್ಷದಂತೆ ಜನತೆಗೆ ಉಳಿತಾಯವಾಗಿದ್ದೂ ಬರೋಬ್ಬರಿ2.24ಕೋಟಿ . ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಗಳು ಈ ಕೂಡಲೇ ಬಸ್ ಪ್ರಯಾಣದ ದರ ಇಳಿಕೆ ಕುರಿತು ಬಸ್ಸು ಮಾಲಿಕರಿಗೆ ಸೂಚನೆಯನ್ನು ನೀಡಬೇಕು. ಅಗತ್ಯ ಬಿದ್ದಲ್ಲಿ ಸಾರಿಗೆ ಪ್ರಾಧಿಕಾರದ ಸಭೆಯನ್ನು ಕರೆದು ಚರ್ಚಿಸಬೇಕು ಆ ಮೂಲಕ ಟೋಲ್ ದರ ಪಾವತಿಸುತ್ತಿದ್ದ ವಿಭಾಗಗಳಿಗೆ ಸುರತ್ಕಲ್ ಟೋಲ್ ಗೇಟ್ ರದ್ದುಗೊಂಡಿರಯವುದರಿಂದ ಪಾಲನ್ನು ನ್ಯಾಯಯುತವಾಗಿ ಒದಗಿಸಿಕೋಡಬೇಕು ಎಂದು ಸಿಐಟಿಯು ಉಡುಪಿ ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ