ದೆಹಲಿಯಲ್ಲಿ ಅ#ಪ್ರಾಪ್ತ ಬಾಲಕಿಯ ಮೇಲೆ ಬೈಕಿನಲ್ಲಿ ಬಂದು ಆ್ಯ#ಸಿಡ್ ದಾ#ಳಿ; ಓರ್ವ ಪೊಲೀಸ್ ವಶಕ್ಕೆ; ಸಿಸಿಟಿವಿಯಲ್ಲಿ ಪೈ#ಶಾಚಿಕ ಕೃ#ತ್ಯ ಸೆರೆ
ನವದೆಹಲಿ(Headlines Kannada): ಮೋಟಾರ್ ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತರು 17 ವರ್ಷದ ಅ#ಪ್ರಾಪ್ತ ಬಾಲಕಿಯ ಮೇಲೆ ಆ್ಯ#ಸಿಡ್ ದಾಳಿ ಮಾಡಿರುವ ಪೈ#ಶಾಚಿಕ ಘಟನೆ ದೆಹಲಿಯಲ್ಲಿ ನಡೆದಿದೆ.
ದೆಹಲಿಯ ದ್ವಾರಕಾ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿದ್ದ ಶಾಲಾ ಬಾಲಕಿಯ ಮೇಲೆ ದುಷ್ಕರ್ಮಿ ಆ್ಯ#ಸಿಡ್ ಎರಚಿ ಪರಾರಿಯಾಗಿದ್ದಾರೆ. ಇಬ್ಬರು ಕಿರಾ#ತಕರು ಬೈಕ್‍ನಲ್ಲಿ ಬಂದಿದ್ದು, ಈ ವೇಳೆ ಬೈಕಿನಲ್ಲಿ ಹಿಂದೆ ಕುಳಿತಿದ್ದ ಕಿರಾ#ತಕ ಬಾಲಕಿಯ ಮುಖದ ಮೇಳೆ ಆ್ಯ#ಸಿಡ್ ಎರಚಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ಪೈ#ಶಾಚಿಕ ಕೃ#ತ್ಯವು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದ್ದು, ತೀವ್ರ ಗಾಯಗೊಂಡ ಆ್ಯ#ಸಿಡ್ ಸಂತ್ರಸ್ತೆಯನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿ ಪೊಲೀಸರು ಮತ್ತು ಡಿಸಿಪಿ ದ್ವಾರಕಾ ಆಸ್ಪತ್ರೆಗೆ ತೆರಳಿದ್ದು, ಬಾಲಕಿಯ ಕುಟುಂಬಸ್ಥರೊಂದಿಗೆ ಅವರು ಮಾತನಾಡಿದ್ದಾರೆ. ಪ್ರಾಥಮಿಕ ವರದಿ ಪ್ರಕಾರ ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ಸ್ಥಿತಿ ಸ್ಥಿರವಾಗಿದೆ ಎನ್ನಲಾಗಿದೆ.
ಈ ಘಟನೆ ನಡೆಯುವ ವೇಳೆ ಸಂತ್ರಸ್ತ ಬಾಲಕಿ ತನ್ನ ತಂಗಿಯೊಂದಿಗಿದ್ದು, ತಮಗೆ ತಿಳಿದಿರುವ 2 ಮಂದಿಯ ಮೇಲೆ ಅವಳು ಅನುಮಾನ ವ್ಯಕ್ತಪಡಿಸಿದ್ದಾಳೆ. ಒರ್ವನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ" ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.