ಕಾರ್ಕಳ ಹಿರ್ಗಾನದಲ್ಲಿ ಕಾರು- ಬೈಕ್ ಮುಖಾಮುಖಿ ಡಿ#ಕ್ಕಿ: 3 ವರ್ಷದ ಮಗು ಸಹಿತ ಇಬ್ಬರಿಗೆ ಗಂ#ಭೀರ ಗಾಯ

ಕಾರ್ಕಳ ಹಿರ್ಗಾನದಲ್ಲಿ ಕಾರು- ಬೈಕ್ ಮುಖಾಮುಖಿ ಡಿ#ಕ್ಕಿ: 3 ವರ್ಷದ ಮಗು ಸಹಿತ ಇಬ್ಬರಿಗೆ ಗಂ#ಭೀರ ಗಾಯಕಾರ್ಕಳ (Headlines Kannada): ಕಾರು ಹಾಗೂ ಬೈಕ್ ಮುಖಾಮುಖಿ ಡಿ#ಕ್ಕಿಯಾಗಿ ಬೈಕ್ ಸವಾರ ಹಾಗೂ ಮೂರು ವರ್ಷದ ಮಗು ಗಂ#ಭೀರವಾಗಿ ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಮಂಗಿಲಾರು ಕ್ರಾಸ್ ಬಳಿ ಶುಕ್ರವಾರ ಸಂಭವಿಸಿದೆ.

ಘಟನೆಯಲ್ಲಿ ಬೈಕ್ ಸವಾರ ಅಂಡಾರು ಗ್ರಾಮದ ಕೊಂದಲ್ಕೆ ನಿವಾಸಿ 32 ವರ್ಷದ ನಿತ್ಯಾನಂದ ಕುಲಾಲ್ ಹಾಗೂ ಅವರ ಸಹೋದರಿಯ ಮೂರು ವರ್ಷದ ಮಗು ಗಂ#ಭೀರವಾಗಿ ಗಾಯಗೊಂಡಿದೆ. ಗಾಯಾಳುಗಳನ್ನು ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೈಕ್ ಸವಾರ ನಿತ್ಯಾನಂದ ತನ್ನ ಸಹೋದರಿಯ ಮಗುವನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಕಾರ್ಕಳದಿಂದ ಅಂಡಾರು ಕಡೆಗೆ ಹೋಗುತ್ತಿದ್ದರು. ಈ ವೇಳೆ ಹೆಬ್ರಿ ಕಡೆಯಿಂದ ವೇಗವಾಗಿ ಬಂದ ಕಾರು ಚಾಲಕ ಬೈಕ್ ಡಿ#ಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ಅ#ಪಘಾತದ ತೀವ್ರತೆಗೆ ಬೈಕ್ ನು#ಜ್ಜುಗುಜ್ಜಾಗಿದೆ. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Ads on article

Advertise in articles 1

advertising articles 2

Advertise under the article