
ಮಲ್ಪೆ ಸೀವಾಕ್ ವೇ ಸಮುದ್ರ ತೀರದಲ್ಲಿ ವ್ಯಕ್ತಿಯ ಮೃ#ತದೇಹ ಪತ್ತೆ: ಆ#ತ್ಮ#ಹ#ತ್ಯೆ ಶಂ#ಕೆ
Saturday, December 31, 2022
ಮಲ್ಪೆ (Headlines Kannada): ಮಲ್ಪೆ ಸೀವಾಕ್ ವೇ ಸಮುದ್ರ ತೀರದಲ್ಲಿ ವ್ಯಕ್ತಿಯೊಬ್ಬರ ಮೃ#ತದೇಹ ಸಿಕ್ಕಿದ ಘಟನೆ ಶುಕ್ರವಾರ ನಡೆದಿದೆ.
ಮಲ್ಪೆಯ ಕೊಡವೂರು ಗ್ರಾಮದ 69 ವರ್ಷದ ಅಚ್ಚುತ್ ಕಿಣಿ ಮೃ#ತದುರ್ದೈವಿ. ಇವರಿಗೆ ಒಂದು ವಾರದ ಹಿಂದೆ ಹರ್ನಿಯ ಶಸ್ತ್ರಚಿಕಿತ್ಸೆ ಆಗಿತ್ತು. ಶಸ್ತ್ರ ಚಿಕಿತ್ಸೆಗೆ ಹೆಚ್ಚು ಹಣ ಖರ್ಚಾಗಿದೆ. ನಾನು ಮನೆಯವರಿಗೆ ಹೊರೆಯಾಗುತ್ತಿದ್ದೇನೆಂದು ಪದೇ ಪದೇ ಹೇಳಿಕೊಳ್ಳುತ್ತಿದ್ದರು. ಇದೇ ಚಿಂತೆಯಲ್ಲಿ ನಿನ್ನೆ ರಾತ್ರಿ ಊಟ ಮಾಡಿ ಮಲಗಿದ್ದವರು, ಇಂದು ಬೆಳಗ್ಗೆ ಮನೆಯಿಂದ ನಿ#ಗೂಢವಾಗಿ ಕಣ್ಮರೆಯಾಗಿದ್ದರು. ಮನೆಯವರು ಹುಡುಕಾಟ ನಡೆಸಿದಾಗ ಮಲ್ಪೆ ಸೀವಾಕ್ ವೇ ಸಮುದ್ರ ತೀರದಲ್ಲಿ ಅಚ್ಚುತ್ ಕಿಣಿ ಅವರ ಮೃ#ತದೇಹ ಪ#ತ್ತೆಯಾಗಿದೆ. ಅವರು ಆರ್ಥಿಕ ಹೊರೆಯ ಚಿಂತೆಯಿಂದ ಬೇಸತ್ತು ಸಮುದ್ರಕ್ಕೆ ಹಾರಿ ಆ#ತ್ಮ#ಹ#ತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.