ದುಬೈಯಲ್ಲಿ ಮೇಳೈಸಿದ ಮೈಸೂರು ದಸರಾ ಉತ್ಸವ; ಭಾರತೀಯ ಹಾಕಿ ತಂಡದ ನಾಯಕ 'ಸುನಿಲ್'ಗೆ  'ದುಬೈ ಕ್ರೀಡಾ ರತ್ನ ಪ್ರಶಸ್ತಿ' ಪ್ರದಾನ

ದುಬೈಯಲ್ಲಿ ಮೇಳೈಸಿದ ಮೈಸೂರು ದಸರಾ ಉತ್ಸವ; ಭಾರತೀಯ ಹಾಕಿ ತಂಡದ ನಾಯಕ 'ಸುನಿಲ್'ಗೆ 'ದುಬೈ ಕ್ರೀಡಾ ರತ್ನ ಪ್ರಶಸ್ತಿ' ಪ್ರದಾನ

ದುಬೈ(Headlines Kannada): ವಿಶ್ವ ವಿಖ್ಯಾತ ಮೈಸೂರು ದಸರಾ ಪ್ರಯುಕ್ತ ಹೆಮ್ಮೆಯ ದುಬೈ ಕನ್ನಡ ಸಂಘವು ನಾಡ ಹಬ್ಬ ಅರಬ್ ನಾಡಲ್ಲಿ ಎಂಬ ದ್ಯೇಯ ವಾಕ್ಯದೊಂದಿಗೆ  5ನೇ ವರ್ಷದ ದುಬೈ ದಸರಾ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕೋತ್ಸವವನ್ನು ಸಂಯುಕ್ತ ಅರಬ್ ಸಂಸ್ಥಾನದಲ್ಲಿರುವ ಕನ್ನಡಿಗರಿಗೆ ಇದೆ ನವೆಂಬರ್  27ರಂದು ಇತಿಸಲಾತ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಆಯೋಜಿಸಿದ್ದರು.













ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾರತೀಯ ಹಾಕಿ ತಂಡದ ಕನ್ನಡಿಗ ನಾಯಕ ಶ್ರೀಯುತ ಎಸ್ ವಿ ಸುನಿಲ್ ಅವರು ಆಗಮಿಸಿದ್ದರು. ನಾಡುನುಡಿ ಕಲೆ ಸಂಸ್ಕ್ರತಿ ಜೊತೆ ದಸರಾ ಕ್ರೀಡೆಯ ಪ್ರೋತ್ಸಾಹಿಸುವ ಉದ್ದೇಶದಿಂದ ಹೆಮ್ಮೆಯ ಯುಎಇ ಕನ್ನಡಿಗರು ತಂಡವು ಕಳೆದ 5ವರ್ಷಗಳಿಂದ ನಡೆಸಿ ಬರುತ್ತಿರುವ ದುಬೈ ದಸರಾ ಉತ್ಸವವು ಈ ಭಾರಿ ಬಹಳ ಆಕರ್ಷಕ ಮತ್ತು ವಿಜೃಂಭಣೆಯಿಂದ ನಡೆಯಿತು.

ಬೆಳಿಗ್ಗೆ 7ರಿಂದ ನಡೆದ ಕ್ರೀಡಾ ಚಟುವಟಿಕೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಸಂಜೆ 8ರ ತನಕ ನಡೆಯಿತು.ಅತಿಥಿಯಾಗಿ ಆಗಮಿಸಿದ ಸುನಿಲ್ ಅವರು ಇತರ ಅತಿಥಿಗಳೊಂದಿಗೆ ಬೆಳಿಗ್ಗೆ ದುಬೈ ದಸರಾ ಪ್ರವೇಶ ದ್ವಾರದ ರಿಬ್ಬನ್ ಕತ್ತರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮಕ್ಕಳು,  ಆಯೋಜಕ ತಂಡ, ಅತಿಥಿಗಳು ಮತ್ತು ಸ್ಪರ್ಧಿಸಲು ಬಂದ ಆಟಗಾರರನ್ನು ಒಳಗೊಂಡ ಮಾರ್ಚ್ ಪಾಸ್ಟನ್ನು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರತಿ ಶ್ರೀಮತಿ ಸ್ಮಿತಾ ಹರಿಕೃಷ್ಣ  ಮತ್ತು ಅಂತರಾಷ್ಟ್ರೀಯ ರೆಸ್ಲರ್ ವೈಷ್ಣವಿ ಅವರು ಒಲಂಪಿಕ್ ಟಾರ್ಚ್ ಹಿಡಿದು ಮುನ್ನಡೆಸಿದರು.

ಮಾರ್ಚ್ ಪಾಸ್ಟ್ ಬಳಿಕ ಸರ್ವರೂ ಯುಎಇ ರಾಷ್ಟ್ರ ಗೀತೆ, ಭಾರತದ ರಾಷ್ಟ್ರ ಗೀತೆ ಮತ್ತು ಕರ್ನಾಟಕ ನಾಡ ಗೀತೆ ಹಾಡುವ ಮೂಲಕ ಅಧಿಕೃತ ಚಾಲನೆ ನೀಡಲಾಯಿತು.  ಭಾರತ ದೇಶವನ್ನು ಕ್ರೀಡೆಯಲ್ಲಿ ಪ್ರತಿನಿಧಿಸಿ ರಾಜ್ಯದ ಕೀರ್ತಿಯನ್ನು ವಿಶ್ವದಲ್ಲಿ ಪಸರಿಸಿದ ಸಾಧಕ ಕನ್ನಡಿಗ ಕ್ರೀಡಾಪಟುಗಳನ್ನು ಗುರುತಿಸಿ ಹೆಮ್ಮೆಯ ದುಬೈ ಕನ್ನಡ ಸಂಘದವರು ಎಲ್ಲಾ ವರ್ಷವೂ ನೀಡಿ ಬರುತ್ತಿರುವ ಯುಎಇಯ ರಾಷ್ಟ್ರೀಯ ಪಕ್ಷಿಯನ್ನು ಒಳಗೊಂಡ ವಿಶಷ ವಿನ್ಯಾಸದ ಪ್ರತಿಷ್ಠಿತ ದುಬೈ ಕ್ರೀಡಾ ರತ್ನ ಪ್ರಶಸ್ತಿಯನ್ನು ಈ ಬಾರಿ ಭಾರತೀಯ ಹಾಕಿ ತಂಡದ ನಾಯಕ ಅರ್ಜುನ ಪ್ರಶಸ್ತಿ ವಿಜೇತ ಎಸ್ ವಿ ಸುನಿಲ್ ಅವರಿಗೆ ನೀಡಿ ಗೌರವಿಸಿದರು.  

ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಎಮ್ ಸ್ಕ್ವೇರ್ ಮೊಹಮ್ಮದ್ ಮುಸ್ತಫಾ, ಇ ಎಲ್ ವಿ ಪ್ರಾಜೆಕ್ಟ್ಸ್ ದುಬೈ ಪ್ರತಿನಿಧಿ ಹರ್ನಿತ್ , ಶಾರ್ಜಾ ಜೈಲರ್, ಖುಷಿ ಡೆವಲಪರ್ಸ್ ಮಾಲಿಕರಾದ ರವಿ, ರಿವಾ ಲೇಸರ್ ಮೆಡಿಕಲ್ ಮಾಲಿಕರಾದ ಡಾ.ರಶ್ಮಿ ಮುಂತಾದವರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡರು.

ಸಂಯುಕ್ತ ಅರಬ್ ಸಂಸ್ಥಾನದಲ್ಲಿ  ಪ್ರಸಕ್ತ ವರ್ಷದಲ್ಲಿ 10ನೇ ತರಗತಿ ಮತ್ತು ಪಿಯುಸಿ ಯಲ್ಲಿ  ಹೆಚ್ಚು ಅಂಕ ಪಡೆದ  ಅನಿವಾಸಿ ಕನ್ನಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು ಹಾಗೂ ಕರ್ನಾಟಕ ರಾಜ್ಯ ಮತ್ತು ಭಾರತ ದೇಶಕ್ಕೆ ಆಟವಾಡಿದ ಸಾಧಕರಿಗೆ ದುಬೈ ಕರ್ನಾಟಕ ಏನ್ ಆರ್ ಐ ಸ್ಪೋರ್ಟ್ಸ್ ಪರ್ಸನ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ವೇಳೆ ಹಮ್ಮೆಯ ಕನ್ನಡಿಗರು ಮಾಡಿದ ಸಾಮಾಜಿಕ ಕಾರ್ಯಗಳ ದಾಖಲೆ ವಿಡಿಯೋ ಬಿಡುಗಡೆಗೊಳಿಸಿ ಪ್ರದರ್ಶಿಸಲಾಯಿತು ಹಾಗೂ ದುಬೈ ದಸರಾ 2022ರ ಧ್ಯೇಯ ಗೀತೆಯನ್ನು ಬಿಡುಗಡೆಗೊಳಿಸಲಾಯಿತು. 

ಈ ಕೌಟುಂಬಿಕ ದಸರಾ ಉತ್ಸವದಲ್ಲಿ ಮಕ್ಕಳಿಗೆ ಮಹಿಳೆಯರಿಗೆ ಮತ್ತು ಪುರುಷರಿಗೆ ಕವಿಗೋಷ್ಠಿ, ಕ್ವಿಜ್, ಕವನ ಮತ್ತು ಲೇಖನ ಸ್ಪರ್ಧೆ, ರಂಗೋಲಿ, ಅಂತ್ಯಾಕ್ಷರಿ, ದಸರಾ ಗೊಂಬೆ ಸ್ಪರ್ಧೆ, ಕೋಕೋ, ಕಬಡ್ಡಿ, ಬ್ಯಾಡ್ಮಿಂಟನ್, ಥ್ರೋಬಾಲ್, ವಾಲಿಬಾಲ್, ಚೆಸ್, ಅತ್ಲೆಟಿಕ್ಸ್, ಫುಟ್ಬಾಲ್, ಟೇಬಲ್ ಟೆನಿಸ್, ಹಗ್ಗ ಜಗ್ಗಾಟ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮುಂತಾದ ಹತ್ತು ಹಲವು ಕಲೆ ಮತ್ತು ಸಾಹಿತ್ಯ ಹಾಗು ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಮ್ಮೆಯ  ಕನ್ನಡಿಗರು ತಂಡದ ಅಧ್ಯಕ್ಷರಾದ ಸುದೀಪ್ ದಾವಣಗೆರೆ ಅವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಸುನಿಲ್ ಅವರು ಇತರ ಅತಿಥಿಗಳೊಂದಿಗೆ ವಿಜೇತರಿಗೆ ಪಾರಿತೋಷಕ ಮತ್ತು ಸೆರ್ಟಿಫಿಕೇಟ್ ವಿತರಿಸಿದರು. ವಿಜೇತರಿಗೆ ಹೆಮ್ಮೆಯ ಕನ್ನಡಿಗರು ತಂಡದ ಮುಖ್ಯ ಕಾರ್ಯದರ್ಶಿಯಾದ ಶಂಕರ್ ಬೆಳಗಾವಿ, ಮಾಜಿ ಅಧ್ಯಕ್ಷರಾದ  ಮಮತಾ ಮೈಸೂರು  ಸಮಿತಿ ಸದಸ್ಯರುಗಳಾದ ಪಲ್ಲವಿ ದಾವಣಗೆರೆ, ಹಾದಿಯ ಮಂಡ್ಯ, ವಿಷ್ಣುಮೂರ್ತಿ ಮೈಸೂರು, ಮಧು ದಾವಣಗೆರೆ, ಅನಿತಾ ಬೆಂಗಳೂರು, ಡಾ.ಸವಿತಾ ಮೈಸೂರು, ಮೊಹೀನ್  ಹುಬ್ಬಳ್ಳಿ, ವರದರಾಜ್ ಕೋಲಾರ, ಅಕ್ರಮ್ ಕೊಡಗು ಮತ್ತು ಮುಖ್ಯ ಸಂಚಾಲಕರಾದ ರಫೀಕಲಿ ಕೊಡಗು  ಹಾಗೂ ಆಯೋಜಕ ಉಪ ಸಮಿತಿ ಸದಸ್ಯರು ,ಸ್ವಯಂ ಸೇವಕರು ಮುಂತಾದವರು ದುಬೈ ದಸರಾ ಲೋಗೋದಿಂದ ವಿಶೇಷವಾಗಿ ವಿನ್ಯಾಸಗೊಂಡ  ಮೆಡಲ್ ಮತ್ತು ಸರ್ಟಿಫಿಕೇಟ್ ಹಾಗೂ ಟ್ರೋಫಿಯನ್ನು ವಿತರಿಸದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ವೇತಾ, ಅಶ್ರಫ್  ಸ್ವಾತಿ, ಮತ್ತು ಆರತಿ ಅವರು ನೆರವೇರಿಸಿದರು.

Ads on article

Advertise in articles 1

advertising articles 2

Advertise under the article