'ಭ್ರ#ಷ್ಟಾಚಾರ'ವನ್ನು ಡೈವರ್ಟ್​ ಮಾಡಲು ಬಿಜೆಪಿಯಿಂದ 'ಕುಕ್ಕರ್​ ಬಾಂ#ಬ್​ ಬ್ಲಾ#ಸ್ಟ್' ಪ್ರಕರಣ ಬಳಕೆ: ಡಿ.ಕೆ.ಶಿವಕುಮಾರ್‌ ಗಂಭೀರ ಆರೋಪ

'ಭ್ರ#ಷ್ಟಾಚಾರ'ವನ್ನು ಡೈವರ್ಟ್​ ಮಾಡಲು ಬಿಜೆಪಿಯಿಂದ 'ಕುಕ್ಕರ್​ ಬಾಂ#ಬ್​ ಬ್ಲಾ#ಸ್ಟ್' ಪ್ರಕರಣ ಬಳಕೆ: ಡಿ.ಕೆ.ಶಿವಕುಮಾರ್‌ ಗಂಭೀರ ಆರೋಪಬೆಂಗಳೂರು(Headlines Kannada): ರಾಜ್ಯದಲ್ಲಿ ನಡೆದಿರುವ ಮತದಾರರ ಪಟ್ಟಿ ಅಕ್ರಮ ಹಾಗೂ ಭ್ರಷ್ಟಾಚಾರದ ಆರೋಪವನ್ನು ಡೈವರ್ಟ್​ ಮಾಡಲು ರಾಜ್ಯ BJP ಸರ್ಕಾರ ಮಂಗಳೂರಿನಲ್ಲಿ ನಡೆದ ಕುಕ್ಕರ್​ ಬಾಂ#ಬ್​ ಬ್ಲಾ#ಸ್ಟ್​ ಪ್ರಕರಣವನ್ನು ಬಳಸಿಕೊಂಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಗಂಭೀರ ಆರೋಪ ಮಾಡಿದ್ದು, ಬಿಜೆಪಿ ಇದಕ್ಕೆ ಸರಣಿ ಟ್ವಿಟ್ ಮಾಡಿದೆ. ಆದರೆ ಡಿ.ಕೆ.ಶಿವಕುಮಾರ್‌ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ಪ್ರಕರಣವನ್ನು ನಾನು ಸಮರ್ಥಿಸಿಕೊಂಡಿಲ್ಲ, ಆರೋಪಿಗೆ ಶಿ#ಕ್ಷೆ ಆಗಲೇಬೇಕು ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದಲ್ಲಿ ಆರೋಪಿಗೆ ಶಿ#ಕ್ಷೆ ಆಗಲೇಬೇಕು. ತನಿಖೆ ಆಗಲೇಬೇಕು. NIAಯಿಂದ ಏನಾದರೂ ತನಿಖೆ ಆಗಿದೆಯಾ..?ಆದರೆ ಪ್ರಕರಣದ ಬಗ್ಗೆ ಯಾವುದೇ ತನಿಖೆ ಮಾಡದೆ ತರಾತುರಿಯಲ್ಲಿ ಸರಕಾರ ಈ ವಿಷಯವನ್ನು ಜನರ ಮುಂದಿಟ್ಟು ತನ್ನ ಮೇಲಿನ ಆರೋಪಗಳಿಂದ ನುಣುಚಿಕೊಳ್ಳುವ ಯತ್ನ ಮಾಡಿದೆ ಎಂದರು.

ಕುಕ್ಕರ್ ಬ್ಲಾ#ಸ್ಟ್ ಪ್ರಕರಣವನ್ನು ಇಟ್ಟುಕೊಂಡು ದಕ್ಷಿಣ ಕನ್ನಡದ, ಮಂಗಳೂರು, ಕರ್ನಾಟಕದ ಗೌರವವನ್ನು ಬಿಜೆಪಿ ಸರಕಾರ ಹಾಳು ಮಾಡುತ್ತಿದೆ. ರಾಜ್ಯಕ್ಕೆ ಯಾವುದೇ ಒಬ್ಬ ಬಂಡವಾಳ ಹೂಡಲು ಬರುತ್ತಿಲ್ಲ, ಇಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಕೆಲಸ ಹುಡುಕಿಕೊಂಡು ನಮ್ಮ ಯುವಜನತೆ ಹಳ್ಳಿಯಿಂದ ಹೊರದೇಶಗಳಿಗೆ ಹೋಗುತ್ತಿದ್ದಾರೆ ಎಂದು ಬಿಜೆಪಿ ಸರಕಾರದ ವಿರುದ್ಧ ಕಿಡಿಕಾರಿದರು.

ಕುಕ್ಕರ್ ಬ್ಲಾ#ಸ್ಟ್ ಪೂರ್ವನಿಯೋಜಿತ ಎಂದು ಹೇಗೆ ಹೇಳುತ್ತೀರಿ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್‌, ಕುಕ್ಕರ್ ಬ್ಲಾ#ಸ್ಟ್ ಪ್ರಕರಣದ ತನಿಖೆಗೂ ಮುನ್ನವೇ ಅಧಿಕಾರಿಗಳು ಇದನ್ನು ಭ#ಯೋ#ತ್ಪಾದಕ ಕೃತ್ಯ ಎಂದು ಹೇಗೆ ಘೋಷಿಸಿದರು? ಇದರ ಹಿಂದೆ ಯಾವ ಉ#ಗ್ರನಿದ್ದಾನೆ? ಯಾವ ಸಂಘಟನೆ ಇದೆ? ಯಾರ ವಿರುದ್ಧ ಯಾವ ಕ್ರಮ ನೀವು ಕೈಗೊಂಡಿದ್ದಾರೆ. ತನಿಖೆ ಏನಾಯ್ತು? ಎಂದು ಪ್ರಶ್ನಿಸಿದರು. ಮತ ಮಾಹಿತಿ ಕಳವು ಪ್ರಕರಣವನ್ನು ಮುಚ್ಚಿಹಾಕಲು ಬಿಜೆಪಿಯವರು ಈ ಷಡ್ಯಂತ್ರ ರೂಪಿಸಿದ್ದಾರೆ ಎಂದರು.

ನಾನು ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ, ಜೊತೆಗೆ ನಾನು ಯಾರಿಗೂ ಕ್ಷಮೆ ಕೇಳುವುದಿಲ್ಲ. ಕುಕ್ಕರ್ ಬಾಂ#ಬ್​ ಸ್ಫೋ#ಟ ಪ್ರಕರಣವನ್ನು ತಾನು ಸಮರ್ಥಿಸಿಕೊಂಡಿಲ್ಲ. ಆದರೆ ಅದನ್ನು ವೈಭವೀಕರಿಸಿದ ರೀತಿ ಸರಿಯಿಲ್ಲ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು. 

ನಿಮ್ಮ ಭ್ರಷ್ಟಾ#ಚಾರ ಮುಚ್ಚಿಹಾಕಲು ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡ್ದಿದ್ದೀರಿ, ತಾನು ಯಾವ ಟೆ#ರರಿಸ್ಟ್‌ಗೂ ಬೆಂಬಲ ನೀಡಲ್ಲ. ಭ್ರ#ಷ್ಟಾಚಾರವನ್ನು ಮಾಧ್ಯಮಗಳು ತುಂಬಾ ಚೆನ್ನಾಗಿ ತೋರಿಸುತ್ತಿದ್ದು, ಮಾಧ್ಯಮಗಳನ್ನು ಡೈವರ್ಟ್‌ ಮಾಡಲು ಸ್ಫೋ#ಟ ಪ್ರಕರಣ ಬಳಸಿಕೊಂಡಿದ್ದಾರೆ ಎಂದು ಬಿಜೆಪಿ ವಿರುದ್ಧ ಆರೋಪ ಮಾಡಿದರು.

Ads on article

Advertise in articles 1

advertising articles 2

Advertise under the article