ರಾಹುಲ್ ಗಾಂಧಿಯ 'ಭಾರತ್ ಜೋಡೋ ಯಾತ್ರೆ' ಪಶ್ಚಾ#ತಾಪಕ್ಕಾಗಿ ನಡೆಸುತ್ತಿರುವ ಯಾತ್ರೆ: ಜೆಪಿ ನಡ್ಡಾ ಲೇವಡಿ
Friday, December 16, 2022
ಕೊಪ್ಪಳ(Headlines Kannada): ಭಾರತವನ್ನು ತಮ್ಮ ಪೂರ್ವಜರು ಹಾಗು ಕಾಂಗ್ರೆಸ್'ನವರು ವಿಭಜಿಸಿದ್ದಕ್ಕಾಗಿ ಪ#ಶ್ಚಾತ್ತಾಪ ಪಡುವ ಸಲುವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 'ಭಾರತ್ ಜೋಡೋ ಯಾತ್ರೆ' ಕೈಗೊಂಡಿದ್ದಾರೆಂದು BJP ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರು ಲೇವಡಿ ಮಾಡಿದ್ದಾರೆ.
ಕೊಪ್ಪಳದಲ್ಲಿ BJP ಜಿಲ್ಲಾ ಪಕ್ಷದ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ದೇಶ ವಿರೋಧಿ ಅಂಶಗಳನ್ನು ಹಿಂದಿನಿಂದಲೂ ಬೆಂಬಲಿಸುತ್ತದೆ. ಆದರೆ PM ಮೋದಿ ಅವರ ನಾಯಕತ್ವದಲ್ಲಿ ದೇಶವು ಮೊದಲಿಗಿಂತ ಈಗ ಸುರಕ್ಷಿತವಾಗಿದೆ ಎಂದು ಹೇಳಿದರು.
“ಜಮ್ಮು ಹಾಗು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ತೆಗೆದುಹಾಕುವ ನಿರ್ಧಾರವನ್ನು ಪ್ರಧಾನಿ ಮೋದಿಯವರು ತೆಗೆದುಕೊಂಡರು. ದೇಶವನ್ನು ವಿಭಜಿಸುವ ಬಗ್ಗೆ ಮಾತನಾಡುವವರು ರಾಹುಲ್ ಗಾಂಧಿಯವರೊಂದಿಗೆ ಇದ್ದಾರೆ. JNUನಲ್ಲಿ ದೇಶ ಒಡೆಯುವ ಮಾತುಗಳನ್ನಾಡುತ್ತಾರೆ... ಅ#ಫ್ಜಲ್ ಗು#ರುವನ್ನು ಹೊಗಳಿ ಈಗ ಕಾಂಗ್ರೆಸ್ ರಾಲಿಗೆ ಸೇರಿಕೊಂಡಿದ್ದಾರೆ ಎಂದು ಆರೋಪಿಸಿದರು.