‘ಪಠಾಣ್’ ಪರ ನಿಂತ ನಟ ಚೇತನ್ ಕೇಸರಿ 'ಬಿ#ಕಿನಿ' ಬಗ್ಗೆ ಹೇಳಿದ್ದೇನು..?
Friday, December 16, 2022
ಬೆಂಗಳೂರು: ಬಾಲಿವುಡ್ ನಟ ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾದ ಹಾಡೊಂದಕ್ಕೆ ಸಂಘಪರಿವಾರದ ಕಾರ್ಯಕರ್ತರು ನಡೆಸುತ್ತಿರುವ ವಿರೋಧಕ್ಕೆ ದೇಶಾದ್ಯಂತ ನೆಟ್ಟಿಗರು ಕಿಡಿಕಾರಿದ್ದು, ಜೊತೆಗೆ ಹಲವು ನಟರು ಶಾರುಖ್ ಜೊತೆ ನಿಂತಿದ್ದಾರೆ. ಈಗ ಕನ್ನಡ ನಟ, ಹೋರಾಟಗಾರ ಚೇತನ್ ಅಕಾಡಕ್ಕಿಳಿದಿದ್ದು, ಸಂಘಪರಿವಾರದ ವಿರುದ್ಧ ಚಾಟಿ ಬೀಸಿದ್ದಾರೆ.
‘ಪಠಾಣ್’ ಸಿನಿಮಾದ ಪರ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ನಟ ಚೇತನ್, ‘ಪಠಾಣ್' ಚಿತ್ರದ ಹಾಡು ಈಗ ಅದರ ಕೇಸರಿ ಬಿ#ಕಿನಿ ಮತ್ತು ಹಸಿರು ಶರ್ಟ್ ಕಾರಣದಿಂದ ರಾಜಕೀಯಗೊಳ್ಳುತ್ತಿದೆ. ಬಟ್ಟೆಯ ಬಣ್ಣದ ಕಾರಣಕ್ಕೆ ವ್ಯಕ್ತಿಸುತ್ತಿರುವ ವಿರೋಧವು ಬಹಳ ಕ್ಷುಲ್ಲಕವಾಗಿದೆ. ಬುದ್ಧ ಮತ್ತು ಬಸವನವರ ಬಣ್ಣವಾದ ಕೇಸರಿಯನ್ನು ಹಿಂದುತ್ವವು ತನ್ನದಾಗಿಸಿಕೊಳ್ಳುತ್ತಿದೆ. ಪ್ರಕೃತಿ ಮತ್ತು ರೈತರ ಸಂಕೇತವಾದ ಹಸಿರು ಬಣ್ಣವು ಇ#ಸ್ಲಾಮೀಕರಣಗೊಳ್ಳುತ್ತಿದೆ. ಇದು ಮಾಡಬೇಕೆಂದೇ ಮಾಡುತ್ತಿರುವ ವಿವಾದವಿದು ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.