ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಬ್ದುಲ್ ನಝೀರ್ ಸಹೋದರ ನ್ಯಾಯವಾದಿ ಫಾರೂಕ್ ಹೃದಯಾಘಾತದಿಂದ ನಿ#ಧನ
Friday, December 16, 2022
ಮಂಗಳೂರು: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮೂಡಬಿದ್ರೆಯ ಅಬ್ದುಲ್ ನಜೀರ್ ಅವರ ಸಹೋದರ ಅಬ್ದುಲ್ ಫಾರೂಕ್ ಹೃದಯಾಘಾತದಿಂದ ಗುರುವಾರ ರಾತ್ರಿ ನಿ#ಧನರಾಗಿದ್ದಾರೆ.
49 ವರ್ಷ ವಯಸ್ಸಿನವರಾಗಿರುವ ಅಬ್ದುಲ್ ಫಾರೂಕ್ ಹೈಕೋರ್ಟ್ ನ್ಯಾಯವಾದಿಯಾಗಿದ್ದು, ಬೆಂಗಳೂರಿನ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ. ಗುರುವಾರ ರಾತ್ರಿ 2 ಗಂಟೆಯ ಸುಮಾರಿಗೆ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ನಂತರ ಅವರು ಕೊ#ನೆಯುಸಿರೆಳೆದಿದ್ದಾರೆ.
ಅಬ್ದುಲ್ ಫಾರೂಕ್ ಅವರಿಗೆ ಪತ್ನಿ ಹಾಗು ಪುತ್ರನಿದ್ದು, ಅವರ ಮೃತದೇಹ ಬೆಂಗಳೂರಿನಿಂದ ಮೂಡಬಿದ್ರೆಗೆ ತರಲಾಗುತ್ತಿದ್ದು, ಮೂಡಬಿದ್ರೆಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.