ರಾಯಚೂರಿನಲ್ಲಿ ಕುರ್ಕುರೆಯೊಳಗೆ 500 ರು ಮುಖಬೆಲೆಯ ನೋಟುಗಳು ಪತ್ತೆ! ಖರೀದಿಗೆ ಮುಗಿಬಿದ್ದ ಜನ....ಮುಂದೆ ಏನಾಯಿತು ?
ರಾಯಚೂರು(Headlines Kannada): ಮಕ್ಕಳು ಬಹಳ ಇಷ್ಟಪಟ್ಟು ತಿನ್ನುವ ಸ್ನ್ಯಾಕ್ಸ್ ಕುರ್ಕುರೆಯ ಒಳಗೆ ರೂ. 500 ಮುಖಬೆಲೆಯ ಕರೆನ್ಸಿ ನೋಟುಗಳು ಸಿಕ್ಕರೆ ಏನಾಗಬಹುದು ! ರಾಯಚೂರು ಲಿಂಗಸೂಗೂರು ತಾಲೂಕಿನ ಹುನೂರು ಗ್ರಾಮದಲ್ಲಿ ಒಂದು ವಿಚಿತ್ರ ಹಾಗೂ ಆಶ್ಚರ್ಯಕರ ಘಟನೆ ನಡೆದಿದೆ.
ಇಲ್ಲಿನ ಅಂಗಡಿಯೊಂದರಲ್ಲಿ ಮಾರಾಟವಾದ 5 ರೂ. ಬೆಲೆಯ ಪ್ಯಾಕೆಟ್ ಗಳಲ್ಲಿ ರೂ. 500 ಮುಖಬೆಲೆಯ ಕರೆನ್ಸಿ ನೋಟುಗಳು ಗ್ರಾಹಕರಿಗೆ ಸಿಕ್ಕಿವೆ. ಒಬ್ಬ ಗ್ರಾಹಕನಿಗೆ 5-6 ಮತ್ತೊಬ್ಬನಿಗೆcರೂ. 500 ಮುಖಬೆಲೆಯ 2-3 ನೋಟುಗಳು ಸಿಕ್ಕಿವೆ. ಈ ಸುದ್ದಿ ಊರಲ್ಲೆಲ್ಲ ಹರಡುತ್ತಿದ್ದಂತೆ ಜನ ಮುಗಿಬಿದ್ದು ಕುರ್ಕುರೆ ಪೊಟ್ಟಣಗಳನ್ನು ಖರೀದಿಸಿದ್ದಾರೆ. ಇದ್ರಿಂದಾಗಿ ಅಂಗಡಿಯಲ್ಲಿ ಸ್ಟಾಕ್ ಖಾಲಿಯಾಗಿದೆ, ಮಾಲೀಕ ಪುನಃ ಕುರ್ಕುರೆ ಪ್ಪ್ಯಾಕೆಟ್ ಗಳನ್ನು ತರಿಸಿದಾಗ ಅವುಗಳಲ್ಲಿ ನೋಟು ಸಿಕ್ಕಿಲ್ಲ. 500 ಮುಖಬೆಲೆಯ ಈ ನೋಟುಗಳು ಅಸಲಿಯೋ, ಖೋಟಾ ನೋಟುಗಳೋ ಅಂತ ಇನ್ನಷ್ಟೇ ಪತ್ತೆಯಾಗಬೇಕಿದೆ. ಈ ಕುರಿತು ಮುದ್ಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.