
ವಿ#ಚ್ಛೇದನದ ಬಳಿಕ ಒಟ್ಟಿಗಿರಲು ಒಪ್ಪಿಕೊಳ್ಳದ ಮಾಜಿ ಪತ್ನಿಗೆ H#IV ಸೋಂಕಿತ ರ#ಕ್ತ ಇಂಜೆಕ್ಟ್ ಮಾಡಿದ ವ್ಯಕ್ತಿ! ಮುಂದೆ ಏನಾಯಿತು ನೋಡಿ...
ನವದೆಹಲಿ(Headlines Kannada): ಮನುಷ್ಯ ತಾನು ಯಾವೆಲ್ಲ ಮಟ್ಟಕ್ಕೆ ಇಳಿಯುತ್ತಾನೆ ಎಂಬುವುದಕ್ಕೆ ಈ ಒಂದು ಘಟನೆಯೇ ಸಾಕ್ಷಿ. ತನ್ನೊಂದಿಗೆ ಪತ್ನಿ ಇರಲು ಒಪ್ಪದೇ ದೂರ ಆಗುತ್ತಿದ್ದಾಳೆ ಎಂಬ ಕಾರಣಕ್ಕೆ ಆಕೆಗೆ ಹೆಚ್#ಐವಿ ರೋಗಿಯ ರ#ಕ್ತವನ್ನು ಇಂ#ಜೆಕ್ಟ್ ಮಾಡಿರುವ ಘಟನೆ ಗುಜರಾತ್‌ನ ಸೂರತ್‌ನಲ್ಲಿ ನಡೆದಿದೆ.
ಇದಕ್ಕೆ ಆತನಿಗೆ ಪ್ರೇರಣೆ ಸಿಕ್ಕಿದ್ದು ಪ್ರತಿಷ್ಠಿತ ಟಿ.ವಿ ಕಾರ್ಯಕ್ರಮವೊಂದರಿಂದ. ಸಂತ್ರಸ್ತ ಮಹಿಳೆ ನೀಡಿದ ದೂರಿನ ಮೇರೆಗೆ ಆರೋಪಿ ಪತಿಯನ್ನು ಸೂರತ್ ಪೊಲೀಸರು ಬಂಧಿಸಿದ್ದಾರೆ. ಬಳಿಕ ಪೊಲೀಸರು ನಡೆಸಿದ ತನಿಖೆಯಲ್ಲಿ ಆತ ಥ್ರಿಲ್ಲಿಂಗ್ ಟಿವಿ ಶೋನಿಂದ ಪ್ರೇರಿತನಾಗಿದ್ದಾನೆ ಎಂಬುದನ್ನು ಬಾಯಿಬಿಟ್ಟಿದ್ದಾನೆ.
ಆರೋಪಿ ಕಳೆದ 15 ವರ್ಷಗಳ ಹಿಂದೆ ಮದುವೆಯಾಗಿದ್ದ. ಕಳೆದ 2 ತಿಂಗಳಿನಿಂದ ಪತ್ನಿಯೊಂದಿಗೆ ಜಗಳ ಮಾಡುತ್ತಿದ್ದ. ಇದರಿಂದ ಇಬ್ಬರು ವಿ#ಚ್ಛೇದನ ಪಡೆದು ದೂರ ಆಗಿದ್ದರು. ಇದಾದ ಬಳಿಕ ಒಂಟಿ ಜೀವನ ನಡೆಸುತ್ತಿದ್ದ ಆರೋಪಿ ಪತಿಗೆ ಮತ್ತೆ ಸಂಗಾತಿಯೊಂದಿಗೆ ಜೀವನ ನಡೆಸಬೇಕು ಎಂಬ ಆಸೆ ಶುರು ಆಗಿದೆ. ಆದರೆ ಇದಕ್ಕೆ ವಿ#ಚ್ಛೇಧಿತ ಪತ್ನಿ ಮಾತ್ರ ಒಪ್ಪಲಿಲ್ಲ. ಇದರಿಂದ ಕೋಪ ಗೊಂಡ ಆರೋಪಿ, ಟಿವಿ ಷೋ ಒಂದರ ಕಾರ್ಯಕ್ರಮದಿಂದ ಪ್ರೇರಿತಗೊಂಡು ಮಾಜಿ ಪತ್ನಿಯನ್ನು ಭೇಟಿಯಾಗಲು ನಿರ್ಧರಿಸಿದ.
ಪತ್ನಿ ಮೇಲೆ ಸೇ#ಡು ತೀರಿಸಿಕೊಳ್ಳಲು ಒಂದು ತಿಂಗಳ ಕಾಲ ಸ್ಕೆಚ್ ಹಾಕಿ ಕೂತ ಆರೋಪಿ ಮಾಜಿ ಪತಿ, ಡಿಸೆಂಬರ್ 25 ರಂದು ಪತ್ನಿಯನ್ನು ಭೇಟಿಯಾಗಿದ್ದಾನೆ. ಇಬ್ಬರೂ ರೆಸ್ಟೋರೆಂಟ್ ಹೋಗಿ ಊಟ ಮಾಡಿ, ಶಾಪಿಂಗ್ ಎಲ್ಲ ಮುಗಿಸಿ, ಸಂಜೆ ಸ್ವಲ್ಪ ಖಾಸಗಿ ಸಮಯ ಕಳೆಯೋದಕ್ಕಾಗಿ ಮೋರಾ ಭಾಗಲ್ ಪ್ರದೇಶದಲ್ಲಿ ಪ್ರತ್ಯೇಕ ಸ್ಥಳಕ್ಕೆ ತೆರಳಿದ್ದರು. ಈ ಸಮಯದಲ್ಲಿ ಆರೋಪಿ ಪತಿ ಆಕೆಯ ಮನವೊಲಿಸಲು ಶತಾಯಗತಾಯ ಪ್ರಯತ್ನಿಸಿದ್ದಾನೆ. ಮಾಜಿ ಪತ್ನಿ ಒಪ್ಪಿಕೊಳ್ಳದಾಗ, ತಬ್ಬಿಕೊಳ್ಳುವ ನೆಪದಲ್ಲಿ ಪೃ#ಷ್ಠ ಭಾಗಕ್ಕೆ (ಹಿಂಬದಿಯ ಪಕ್ಕೆಯಿಂದ ಕೆಳಭಾಗ) H#IV ರೋಗಿಯ ರ#ಕ್ತವನ್ನು ಇಂಜೆಕ್ಟ್ ಮಾಡಿದ್ದಾನೆ. ಈ ವೇಳೆ ಮಹಿಳೆ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾಳೆ. ಮರಳಿ ಪ್ರಜ್ಞೆ ಬಂದೊಡನೆ ಸಂಶಯಗೊಂಡ ಮಾಜಿ ಪತ್ನಿ ವೈದ್ಯರಿಂದ ಮಾಹಿತಿ ಪಡೆದು ನಂತರ ಪೊಲೀಸರಿಗೆ ದೂರು ನೀಡಿದ್ದಾಳೆ. ಆರೋಪಿಯನ್ನು ಪೊಲೀಸರು ಬಂಧಿಸಿ ತನಿಖೆಗೆ ಒಳಪಡಿಸಿದಾಗ ಆತನ ಪ್ಯಾಂಟ್ ಜೇಬಿನಲ್ಲಿ ರ#ಕ್ತದ ಕಲೆ ಪತ್ತೆಯಾಗಿದೆ.
ಮಹಿಳೆಗೆ ಇಂಜೆಕ್ಟ್ ಮಾಡಲು 1 ತಿಂಗಳ ಹಿಂದೆಯೇ ಯೋಜಿಸಿದ್ದನು. ಆರೋಪಿ ಒಂದು ಟಿವಿ ಶೋನಿಂದ ಪ್ರೇರಣೆ ಪಡೆದಿದ್ದನು. ಆ ಟಿವಿ ಶೋನಲ್ಲಿ `ವ್ಯಕ್ತಿಯೊಬ್ಬ ಹೆಣ್ಣು ನಾ#ಯಿಗೆ ರ#ಕ್ತವನ್ನು ಇಂಜೆಕ್ಟ್ ಮಾಡುತ್ತಾನೆ’ ತೋರಿಸಿದ್ದು, ಅದನ್ನು ನಾನೂ ನೋಡಿದ್ದೆ ಎಂದು ಆರೋಪಿ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸದ್ಯ ರ#ಕ್ತ ಹೇಗೆ ಪಡೆದುಕೊಂಡನು ಎಂಬುದರ ಬಗ್ಗೆ ಪೊಲೀಸ್ ತನಿಖೆ ನಡೆಸಲಾಗುತ್ತಿದೆ.