10 ಸಿನೆಮಾ ಮಾಡಿ ಮುಗಿಸುವ ಮುಂಚೆಯೇ ನಟಿ ಕಂಗನಾಗೆ ಪದ್ಮಶ್ರೀ: ದಕ್ಷಿಣ ಭಾರತದವರ ಕಡೆಗಣನೆಗೆ ಆಕ್ರೋಶ ಹೊರಹಾಕಿದ ಹಿರಿಯ ನಟಿ ಜಯಸುಧಾ

10 ಸಿನೆಮಾ ಮಾಡಿ ಮುಗಿಸುವ ಮುಂಚೆಯೇ ನಟಿ ಕಂಗನಾಗೆ ಪದ್ಮಶ್ರೀ: ದಕ್ಷಿಣ ಭಾರತದವರ ಕಡೆಗಣನೆಗೆ ಆಕ್ರೋಶ ಹೊರಹಾಕಿದ ಹಿರಿಯ ನಟಿ ಜಯಸುಧಾಹೈದರಾಬಾದ್(Headlines Kannada)​: ಬಾಲಿವುಡ್ ನಟಿ ಕಂಗನಾ ರಣಾವತ್‌ಗೆ ಪದ್ಮಶ್ರೀ ಪ್ರಶಸ್ತಿ ನೀಡಿದ್ದಕ್ಕೆ ಕೇಂದ್ರ ಸರಕಾರದ ವಿರುದ್ಧ ದಕ್ಷಿಣ ಭಾರತ ಚಿತ್ರರಂಗದ ಹಿರಿಯ ನಟಿ ಜಯಸುಧಾ ಆಕ್ರೋಶ ಹೊರಹಾಕಿದ್ದು, ಕೇವಲ 10 ಸಿನಿಮಾ ಮಾಡಿದ್ದಕ್ಕೆ ಕಂಗನಾಗೆ ಪದ್ಮಶ್ರೀ ನೀಡಿದ್ದನ್ನು ಪ್ರಶ್ನಿಸಿದ್ದಾರೆ.

ನಟಿ ಕಂಗನಾ ರಣಾವತ್‌ಗೆ ಪದ್ಮಶ್ರೀಗೆ ಸಿಕ್ಕಿದ್ದು, ಅವರು ಅದ್ಭುತ ನಟಿ, ಅದರಲ್ಲೂ 10 ಸಿನಿಮಾ ಮಾಡುವುದರೊಳಗೆ ಅವರು ಪದ್ಮಶ್ರೀ ಪಡೆದುಕೊಂಡರು ಎಂದಿರುವ ಜಯಸುಧಾ, ಆದರೆ ಇಲ್ಲಿ ನಾವು ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ್ದೇವೆ. ಇನ್ನೂ ನಮ್ಮನ್ನು ಕೇಂದ್ರ ಸರ್ಕಾರದಿಂದ ಗುರುತಿಸಲ್ಪಟ್ಟಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.

ದ್ಕ್ಷಿಣ ಭಾರತದ ಹಿರಿಯ ನಟಿ/ನಿರ್ದೇಶಕ ವಿಜಯ ನಿರ್ಮಲಾ ಅವರನ್ನು ಹೆಸರನ್ನು ಉಲ್ಲೇಖಿಸಿರುವ ಜಯಸುಧಾ, 'ಗಿನ್ನಿಸ್ ದಾಖಲೆ ಬರೆದಿರುವ ನಿರ್ದೇಶಕಿ ವಿಜಯ ನಿರ್ಮಲಾ ಅವರಿಗೂ ಅಂತಹ ಮೆಚ್ಚುಗೆ ಸಿಕ್ಕಿಲ್ಲ. ದಕ್ಷಿಣದ ನಟ-ನಟಿಯರು ಸರ್ಕಾರದಿಂದ ಮೆಚ್ಚುಗೆ ಪಡೆಯುತ್ತಿಲ್ಲ ಎಂದು ನನಗೆ ಬೇಸರವಾಗುತ್ತದೆ' ಎಂದಿದ್ದಾರೆ.

Ads on article

Advertise in articles 1

advertising articles 2

Advertise under the article