ಕೊರೋನಾ ಬಿಎಫ್.7 ರೂಪಾಂತರಿ ಸೋಂಕಿತರಿಗೆ ರಾಜ್ಯದಲ್ಲಿ ಉಚಿತ ಚಿಕಿತ್ಸೆ
Tuesday, December 27, 2022
ಬೆಂಗಳೂರು(Headlines Kannada): ಮತ್ತೆ ದೇಶಾದ್ಯಂತ ಕೊರೋನಾ ಭೀ#ತಿ ಸೃಷ್ಟಿಸಿರುವ ಒಮಿಕ್ರಾನ್ ಬಿಎಫ್.7 ರೂಪಾಂತರಿ ತಳಿ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಸರಕಾರ ಘೋಷಣೆ ಮಾಡಿದೆ.
ಕರ್ನಾಟಕದಲ್ಲಿ ಕೋವಿಡ್-19 ಜಾಗೃತಿ ಕುರಿತು ಬೆಳಗಾವಿಯ ಸುವರ್ಣ ಸೌಧದಲ್ಲಿ ಆರೋಗ್ಯ ಸಚಿವ ಸುಧಾಕರ್ ಅವರೊಂದಿಗೆ ಕಂದಾಯ ಮತ್ತು ಆರೋಗ್ಯ ಇಲಾಖೆಯ ಜಂಟಿ ಸಭೆ ನಡೆಸಲಾಯಿತು.
ಈ ಕುರಿತು ನಡೆದ ತಜ್ಞರ ಸಭೆ ಬಳಿಕ ಮಾಹಿತಿ ನೀಡಿದ ಕಂದಾಯ ಸಚಿವ ಆರ್ ಅಶೋಕ್, 'ನಾವು ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಮತ್ತು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಎಲ್ಲ ಶಂಕಿತ ಪ್ರಕರಣ ಹೊಂದಿರುವವರನ್ನು ಐಸೋಲೇಟ್ ಮಾಡುತ್ತೇವೆ. ಎಲ್ಲ ರೀತಿಯ ಚಿಕಿತ್ಸೆ ಕೂಡಾ ಇಲ್ಲಿ ನೀಡಲಾಗುತ್ತದೆ. ಜೊತೆಗೆ ಕೋವಿಡ್‌ನ ಹೊಸ ತಳಿ BF.7 ಸೋಂಕಿತರಿಗೆ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.